ರಾಯಚೂರು,ಏ.17(ಕವಾ):- ವಿಧಾನಸಭೆ ಚುನಾವಣೆ-2023ರ ಹಿನ್ನಲೆಯಲ್ಲಿ ಏ.17ರ(ಸೋಮವಾರ)ದಂದು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 23 ಅಭ್ಯರ್ಥಿಗಳಿಂದ ನಾಮಪತ್ರಗಳು ಸಲ್ಲಿಕೆಯಾಗಿವೆ.
ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ಶಿವರಾಜ್ ಪಾಟೀಲ್(ಭಾರತೀಯ ಜನತಾ ಪಾರ್ಟಿ)(ಎರಡು ಪ್ರತಿಗಳು) ಹಾಗೂ ಜಯಭೀಮ(ಬಹುಜನ ಸಮಾಜ ಪಾರ್ಟಿ) ಅವರು ನಾಮಪತ್ರ ಸಲ್ಲಿಸಿದರು.
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಡಾ.ಸುಭಾಷಚಂದ್ರ ಸಾಂಬಾಜಿ(ಆಮ್ ಆದ್ಮಿ ಪಾರ್ಟಿ), ಅವರು ನಾಮಪತ್ರ ಸಲ್ಲಿಸಿದರು.
ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕೆ.ಶಿವನಗೌಡ ನಾಯಕ(ಭಾರತೀಯ ಜನತಾ ಪಾರ್ಟಿ)(ನಾಲ್ಕು ಪ್ರತಿಗಳು), ಶ್ರೀದೇವಿ ನಾಯಕ(ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ಹಾಗೂ ರೂಪಾ(ಪಕ್ಷೇತರ) ಅವರು ನಾಮಪತ್ರ ಸಲ್ಲಿಸಿದ್ದಾರೆ.
ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ಶಿದ್ದಪ್ಪ ಬಂಡಿ (ಜಾತ್ಯಾತೀತ ಜನತಾ ದಳ) (ಎರಡು ಪ್ರತಿಗಳು), ಅನಿಲ್ ಕುಮಾರ(ಬಹುಜನ ಸಮಾಜ ಪಕ್ಷ), ಮಾನಪ್ಪ ದೇವಪ್ಪ ವಜ್ಜಲ್(ಭಾರತೀಯ ಜನತಾ ಪಾರ್ಟಿ), ದುರುಗಪ್ಪ ಸಂಗಪ್ಪ ಹೂಲಗೇರಿ( ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ಹಾಗೂ ಗಂಗಾ ಬಂಡಿ (ಜಾತ್ಯಾತೀತ ಜನತಾ ದಳ) ( ಎರಡು ಪ್ರತಿಗಳು) ಅವರು ನಾಮಪತ್ರ ಸಲ್ಲಿಸಿದರು.
ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಹಂಪನಗೌಡ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ಎನ್.ಮಲ್ಲಿಕಾರ್ಜುನ ( ಕಲ್ಯಾಣ ರಾಜ್ಯ ಪ್ರಗತಿ ಪಕ್ಷ), ಎನ್.ರಮ್ಯ(ಪಕ್ಷೇತರ), ವೆಂಕಟರಾವ್ ನಾಡಗೌಡ( ಜನತಾದಳ (ಜಾತ್ಯಾತೀತ)), ನಿರುಪಾದಿ(ಕರ್ನಾಟಕ ರಾಷ್ಟ್ರ ಸಮಿತಿ), ಬಸನಗೌಡ ಬಾದರ್ಲಿ(ಪಕ್ಷೇತರ), ಕರಿಯಪ್ಪ ಕೆ( ಭಾರತೀಯ ಜನತಾ ಪಾರ್ಟಿ) ಹಾಗೂ ನಿಜಗುಣಯ್ಯ(ಉತ್ತಮ ಪ್ರಜಾಕೀಯ ಪಾರ್ಟಿ) ಅವರು ನಾಮಪತ್ರ ಸಲ್ಲಿಸಿದ್ದಾರೆ.
ಮಾನವಿ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಮಾನಪ್ಪ ನಾಯಕ( ಭಾರತೀಯ ಜನತಾ ಪಾರ್ಟಿ), ಮುದುಕಪ್ಪ ನಾಯಕ(ಬಹುಜನ ಸಮಾಜ ಪಾರ್ಟಿ) ರಾಜಾ ವೆಂಕಟಪ್ಪ ನಾಯಕ( ಜನತಾದಳ( ಜಾತ್ಯಾತೀತ) ಅವರು ನಾಮಪತ್ರ ಸಲ್ಲಿಸಿದ್ದಾರೆ.
ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಸನಗೌಡ ತುರ್ವಿಹಾಳ(ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ಅವರು ನಾಮಪತ್ರವನ್ನು ಸಲ್ಲಿಸಿದ್ದಾರೆ.