ಮೂಲತಃ ಬಿಸಿಲು ನಾಡು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ರೌಡಕುಂದ ಗ್ರಾಮದ ಶ್ರೀಮತಿ ದ್ರಾಕ್ಷಾಯಿಣಿ ಶ್ರೀ ರುದ್ರಮುನಿಸ್ವಾಮಿ ಸಂಸ್ಥಾನ ಹಿರೇಮಠ ರೌಡ್ಕುಂದ ಇವರ ಪವಿತ್ರ ಗರ್ಭದಲ್ಲಿ ಜನಿಸಿದರು. ಶ್ರೀ ಸಿದ್ದರಾಮೇಶ್ವರ ಶರಣರು ಶ್ರೀಗಳು ಮೂರು ತಿಂಗಳ ಇರುವಾಗಲೇ ತಾಯಿಯನ್ನು ಕಳೆದುಕೊಂಡರು. ತದನಂತರ ಶ್ರೀಗಳನ್ನು ಶ್ರೀಮತಿ ಸುಭದ್ರಮ್ಮ ಶ್ರೀ ಶರ್ಭಯ ಬಳಿಗೆರೆ ಹಿರೇಮಠ ಹೇರೂರು ಮತ್ತು ಶಿವಗಂಗಮ್ಮ ಶ್ರೀಗಳ ಎರಡನೇ ತಾಯಿ ಪಾಲನೆ ಮತ್ತು ಪೆÇೀಷಣೆ ಮಾಡಿ ಹೆತ್ತ ತಂದೆ ತಾಯಿಗಳಂತೆ ಸಾಕಿ ಸಲಹಿದರು.
ಶ್ರೀಗಳು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರೌಡಕುಂದ ಹಾಗೂ ಪ್ರೌಢ ಶಿಕ್ಷಣವನ್ನು ಟಿಡಿಬಿ ಪ್ರೌಢಶಾಲೆ ಜವಳಗೆರೆ ಗ್ರಾಮದಲ್ಲಿ ಪೂರ್ಣಗೊಳಿಸಿದರು. ಪದವಿ ಪೂರ್ವ ಶಿಕ್ಷಣವನ್ನು ಬಾರ್ಷಲ್ ಮಿಷನ್ ಪದವಿಪೂರ್ವ ಕಾಲೇಜು ಗದಗ ಬೆಟಗೇರಿ ಹಾಗೂ ಪದವಿ ವಿದ್ಯಾಭ್ಯಾಸವನ್ನು ಗದುಗಿನ ತೋಂಟದಾರ್ಯ ಕಾಲೇಜಿನಲ್ಲಿ ಎರಡನೇ ವರ್ಷದ ವರೆಗೆ ಅಭ್ಯಸಿಸಿ ನಂತರ ಅಪೂರ್ಣಗೊಳಿಸಿದರು.
ಶ್ರೀಗಳು 1974ರಲ್ಲಿ ಶ್ರೀಮತಿ ಭಾಗ್ಯಲಕ್ಷ್ಮಿ ಅಮ್ಮನವರೊಂದಿಗೆ ವಿವಾಹವಾಗಿ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಅದೇ ವರ್ಷದಲ್ಲಿ ಸಿರುಗುಪ್ಪ ಪಟ್ಟಣಕ್ಕೆ ಹೊಂದಿಕೊಂಡಿರುವ ಖಾಸಗಿ ಸಕ್ಕರೆ ಕಾರ್ಖಾನೆಯಲ್ಲಿ ಸಾಮಾನ್ಯ ಕಾರ್ಮಿಕರಾಗಿ ಜೀವನ ಪ್ರಾರಂಭಿಸಿದರು. 1975 ರಲ್ಲಿ ಶ್ರೀಗಳಿಗೆ ಗಂಡು ಮಗು ಜನನವಾಯಿತು ಅದೇ ಅವರೇ ಶ್ರೀ ಶಿವಾನಂದ ಶರಣರು, ಹಾಗೆಯೇ ಶ್ರೀಗಳು ತಲೆತಲಾಂತರದಿಂದ ಬಂದಂತ ವೈದ್ಯ ಚಿಕಿತ್ಸೆ, ಜ್ಯೋತಿಷ್ಯ, ವೈದಿಕ ಕಾರ್ಯಗಳನ್ನು ಮುಂದುವರಿಸಿಕೊಂಡು ಬರುತ್ತಾರೆ.
. 1976- 77 ರಲ್ಲಿ ಶ್ರೀಗಳು ಜೀವನದಲ್ಲಿ ಜಿಗುಪ್ಸಿಕೊಂಡು ದೇಶ ನೂರು ಹತ್ತಿರದ ತಾಲೂಕಿನ ಸಿರುಗುಪ್ಪ ತುಂಗಭದ್ರ ನದಿಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಅದೇ ಸಂದರ್ಭದಲ್ಲಿ ಶ್ರೀ ಸಾಧು ನಿರಂಜನ್ ಮಹಾರಾಜ್ ಗುರುಗಳು ಆತ್ಮಹತ್ಯೆಯನ್ನು ತಡೆದು ಬುದ್ದಿವಾದ ಹೇಳಿ ಗಾಯತ್ರಿ ಮಂತ್ರವನ್ನು ಉಪದೇಶ ಹಾಗೂ ದೇವಿಪರಾಯಣ ಶುಭ ಆಶೀರ್ವಾದ ಮಾಡುತ್ತಾರೆ.1981 ರಲ್ಲಿ ಶ್ರೀಗಳು ಕಾರಣಾಂತರಗಳಿಂದ ತಮ್ಮ ಸೋದರ ಅತ್ತೆಯ ಮಗಳಾದ ಶ್ರೀಮತಿ ಚಾಮುಂಡೇಶ್ವರಿ ಅಮ್ಮನವರನ್ನು ಮರು ವಿವಾಹವಾಗುತ್ತಾರೆ. ನಂತರ 1983 ರಲ್ಲಿ ಹೆಣ್ಣು ಮಗು, ಶ್ರೀ ದ್ರಾಕ್ಷಾಯಿಣಿ ಅಮ್ಮನವರು ಹಾಗೂ 1986ರಲ್ಲಿ ಗಂಡು ಮಗು ಅಂದರೆ ಪ್ರಸ್ತುತ ಸಿದ್ದಾಶ್ರಮದ ಕಿರಿಯ ಶ್ರೀಗಳಾದ ಸದಾನಂದ ಶರಣರ ಜನನ ವಾಗುವುದು.
ಪರಮಪೂ ಪೂಜ್ಯ ಡಾ|| ಸಿದ್ದರಾಮೇಶ್ವರ ಶರಣರು ಆಶ್ರಮಕ್ಕೆ ಮಾತ್ರ ಸೀಮಿತವಾಗದೆ ಸಮಾಜ ಸೇವೆಗೆಂದು ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಯಾವುದೇ ಜಾತಿ ಮತ ಪಂಥಗಳ ಭೇದವಿಲ್ಲದೆ ಬಡವರ ,ದೀನದಲಿತರ, ಯುವಕರ ಹಾಗೂ ಸರ್ವ ಸಮಾಜದವರ ಒಳತಿಗಾಗಿ ನಡೆಸಿ ನಡೆಸಿಕೊಂಡು ಬಂದಿರುತ್ತಾರೆ.
1)ಶ್ರೀ ಸಿದ್ದಾಶ್ರಮದ ಸಾಧನೆ ಹೆಜ್ಜೆ ಗುರುತುಗಳು 1984 ರಲ್ಲಿ ಲಕ್ಷ್ಮಿ ಬಂಡೆ ರಂಗನಾಥ ದೇವಸ್ಥಾನ ರೌಡಕುಂದಾದಲ್ಲಿ ಆಗಿನ ಶಿಕ್ಷಣ ಸಚಿವರಾದ ಶ್ರೀ ಎಂ ರಘುಪತಿ ಅವರ ನೇತೃತ್ವದಲ್ಲಿ 38 ಸಾಮೂಹಿಕ ವಿವಾಹಗಳನ್ನು ನೆರವೇರಿಸಿದ್ದಾರೆ.
2) 1986 ರಲ್ಲಿ ರೌಡ್ಕುಂದಾದ ಶ್ರೀ ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳ ಪಟ್ಟಾಧಿಕಾರ 108 ಸಾಮೂಹಿಕ ವಿವಾಹಗಳು 108 ಆಯ್ಕೆಚಾರ ಕಾರ್ಯಕ್ರಮ.
3 ) 1987 -136 ಸಾಮೂಹಿಕ ವಿವಾಹಗಳು ಮತ್ತು136 ಮಂಟಪ ಪೂಜ್ಯಾ ಕಾರ್ಯಕ್ರಮ 1987 ರಲ್ಲಿ ಒಂದು ತಿಂಗಳ ಪುರಾಣ ಪ್ರವಚನ 108 ಸಾಮೂಹಿಕ ವಿವಾಹಗಳನ್ನು ಅಂದಿನ ಮುಜರಾಯಿ ಇಲಾಖೆ ಸಚಿವರಾದ ಮುನಿಯಪ್ಪ ಮುದ್ದಪ್ಪ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಮಾಡುತ್ತಾರೆ.
5) 1997 ರಲ್ಲಿ ಸಿಂಧನೂರು ತಾಲೂಕಿನ ಬಂಗಾರಿ ಕ್ಯಾಂಪಿನಲ್ಲಿ ಶ್ರೀಮದ್ ಉಜ್ಜೈನಿ ಶ್ರೀ ಜಗದ್ಗುರುಗಳಾದ ಮರುಳ ಸಿದ್ದರಾಜು ದೇಶ ಕೇಂದ್ರ ಶಿವಾಚಾರ್ಯ ಭಗವತ್ಪಾದಕರು ಹಾಗೂ ಶ್ರೀ ಪರಮಪೂಜ್ಯ ಶ್ರೀ ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಶ್ರೀ ಸಿದ್ದಾಶ್ರಮ ಸ್ಥಾಪನೆ ಮಾಡುತ್ತಾರೆ
.06) 2001 ರಲ್ಲಿ ಶ್ರೀ ರೇಣುಕಾಚಾರ್ಯ ಮೂರ್ತಿ ಸ್ಥಾಪನೆ 141 ಸಾಮೂಹಿಕ ವಿವಾಹಗಳನ್ನು ನೆರವೇರಿಸುತ್ತಾರೆ.
07) 2009ರಲ್ಲಿ ಲಿಂಗ ಪರಮ ಬ್ರಹ್ಮ ಮರರಿಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಗಣೇಶ, ಗಾಯತ್ರಿ, ನಾಗೇಂದ್ರ ಮೂರ್ತಿ ಸ್ಥಾಪನೆ ಹಾಗೂ 151ಸಾಮೂಹಿಕ ಕ ವಿವಾಹ ಕಾರ್ಯಕ್ರಮಗಳನ್ನು ಜರು ಗಿಸಿದರು
.08) 2014ರಲ್ಲಿ 68 ಶಿವಶರಣರ ಪಾದ ಪೂಜೆ.09) 2015 ರಲ್ಲಿ ಸರ್ವ ಸಮಾಜದ ಗುರುಗಳ ಭಾವೈಕ್ಯತೆ ಸಮಾವೇಶ ಪಾದಪೂಜೆ ಹಾಗೂ ದರ್ಶನ.
10) 2018 ರಲ್ಲಿ 5 ನೇ ವರ್ಷದ ಗಣೇಶ ಗಾಯತ್ರಿ ರಥೋತ್ಸವ ಅಂಗವಾಗಿ 41 ಗುರು ವಿರಕ್ತರ ಸಮಾವೇಶ ಪಾದಪೂಜೆ ಮತ್ತು ದರ್ಶನ ಕಾರ್ಯಕ್ರಮದಲ್ಲಿ ಆಗಿನ ವಿರೋಧ ಪಕ್ಷದ ನಾಯಕರು ಮತ್ತು ಪ್ರಸ್ತುತ ಮಾಜಿ ಮುಖ್ಯಮಂತ್ರಿಯಾದ ಬಿಎಸ್ ಯಡಿಯೂರಪ್ಪನವರು ಭಾಗವಹಿಸಿದ್ದರು.
11) 2022 ರಲ್ಲಿ ಅತ್ಯಂತ ವಿಜೃಂಭಣೆಯಿಂದ 11 ದಿನಗಳ ಕಾಲ ಅಧ್ಯಾತ್ಮಿಕ ಜೀವನ ದರ್ಶನ ಪ್ರವಚನ ಕಾನೂನು ಅರಿವು- ನೆರವು ಸಾವಯವ ಕೃಷಿ, ಸಂವಹನ ಶಾಲಾ ಮಕ್ಕಳ ಸಾಂಸ್ಕøತಿ ಕಾರ್ಯಕ್ರಮಗಳು ಉಚಿತ ಆರೋಗ್ಯ ತಪಾಸಣೆ ಶಿಬಿರ ಪುನರ ವಿವಾಹ ಮತ್ತುಧರ್ಮ ಗೋಷ್ಠಿಹಾಗೂ ಕೊನೆಯ ದಿನ ಶ್ರೀಮದ್ ರಂಭಾಪುರಿ ಡಾ||ವೀರ ಸೋಮೇಶ್ವರ ರಾಜದೇಶಿ ಕೇಂದ್ರ ಬಾಳೆಹೊನ್ನೂರು ಜಗದ್ಗುರುಗಳು ಸಾರೋಟ ಮೆರವಣಿಗೆ ಧರ್ಮ ಸಭೆ ಮತ್ತು 2551 ಮುತ್ತೈದೆ ಮಹಿಳೆಯರಿಗೆ ಉಡಿ ತುಂಬ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ.
ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಶ್ರೀ ಮಠದ ಕಿರಿಯ ಶ್ರೀಗಳಾದ ಸದಾನಂದ ಶರಣರು ಶ್ರೀ ಮಠದ ಹಾಗೂ ಗಾಯಿತ್ರಿ ದೇವಿಯ ರಥದ ಬಗ್ಗೆ ಸಹ ವಿವರವಾಗಿ ವಿಶೇಷತೆಯನ್ನು ಹಂಚಿಕೊಂಡರು. ಇμÁ್ಟರ್ಥ ಸಿದ್ಧಿಗಳನ್ನು ನೆರವೇರಿಸುವ ಶ್ರೀ ಗಾಯಿತ್ರಿ ದೇವಿಯ ರಥವು ಸಂತಾನ ಭಾಗ್ಯ, ಮಾಂಗಲ್ಯ ಭಾಗ್ಯ ಜೀವನದಲ್ಲಿ ಬರುವ ಸಂಕಷ್ಟಗಳು ದೂರವಾಗಿ ಆಯುಷ್ಯ ಆರೋಗ್ಯ ವೃದ್ಧಿಯಾಗಿ ಸರ್ವ ಸಂಪದಗಳು ಲಭಿಸುತ್ತದೆ ಎಂದು ತಿಳಿಸಿದರು. ಶ್ರೀ ಗಾಯಿತ್ರಿ ಮಾತೆಯ ರಥವು ವಿಶೇಷವಾಗಿ ಮಹಿಳೆಯರಿಂದ ಎಳೆಯಲಾಗುತ್ತದೆ. ಶ್ರೀ ಮಠ ಕರ್ನಾಟಕ ಮಾತ್ರವಲ್ಲದೇ ಪಕ್ಕದ ಆಂಧ್ರ ತೆಲಂಗಾಣ ಮತ್ತು
ಮಹಾರಾಷ್ಟ್ರರಾಜ್ಯಗಳಲ್ಲಿಹಾಗೂಹೊರದೇಶಗಳಲ್ಲಿಅಪಾರಭಕ್ತವೃಂದವನ್ನುಹೊಂದಿದೆ.ಅದರಲ್ಲಿವಿಶೇಷವಾಗಿಮುಖ್ಯಮಂತ್ರಿಗಳ ಶಾಸಕರು ಮತ್ತು ಪರಿಷತ್ ಸದಸ್ಯರು ಹಾಗೂ ಹಲವಾರು ಕ್ಷೇತ್ರದ ಸಾಧಕರು ಸಮಾಜ ಸೇವಕರು ಭೇಟಿನೀಡುವುದು ವಿಶೇಷವಾಗಿದೆ.