ಮಾ 26.ಸಿಂಧನೂರು ನಗರದ ಕುಷ್ಟಗಿ ಮುಖ್ಯರಸ್ತೆಯಲ್ಲಿ ಬರುವ ಜನಸ್ಪಂದನ ಕಾರ್ಯಾಲಯ ಉದ್ಘಾಟನೆ ಸಮಾರಂಭ ಅದ್ದೂರಿಯಾಗಿ ನಡೆಯಿತು ಜನಪ್ರಿಯ ಯುವ ನಾಯಕ ಹಾಗೂ ಮಾಜಿ ಯುವ ಕಾಂಗ್ರೆಸ್ಸಿನ ರಾಜ್ಯಾಧ್ಯಕ್ಷರಾದ ಮತ್ತು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಸನಗೌಡ ಬಾದರ್ಲಿ ಅವರ ಜನಸ್ಪಂದನ ಕಾರ್ಯಾಲಯ ಉದ್ಘಾಟನೆ ನಂತರ ಮಾತಾಡಿದ ಶ್ರೀ ಸದಾನಂದ ಶರಣರು, ಬಸನಗೌಡ ಬಾದರ್ಲಿಗೆ ಮುಂದೆ ಗುರಿ ಇದೆ. ಹಿಂದೆ ಗುರುಗಳ ಆಶಿರ್ವಾದವಿದೆ. ಜನರ ಆಶಿರ್ವಾದವೊಂದಿದ್ದರೆ ಅವರು ಬೇಗ ತಮ್ಮ ಗುರಿ ತಲುಪುತ್ತಾರೆ. ಬಸನಗೌಡ ಮತ್ತು ಅವರ ಅವರು ಕುಟುಂಬ ಮೊದಲಿನಿಂದಲೂ ದಾನ ಧರ್ಮ ಭಕ್ತಿಯಲ್ಲಿ ಹೆಸರುವಾಸಿಯಾದವರು
ಜನನಾಯಕ ಯಾರಂದರೆ ಸದಾ ಬಡವ ದೀನದಲಿತ ನೊಂದವರ ಧ್ವನಿಯಾಗಿ ಕಷ್ಟಗಳಲ್ಲಿ ಸ್ಪಂದಿಸುವ ನಾಯಕನೇ ಜನನಾಯಕ ಅವರೇ ಬಸನಗೌಡ ಬಾದರ್ಲಿ ಯುವ ನಾಯಕ . ಸದಾ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಬಸನಗೌಡ ಬಾದರ್ಲಿ ಅವರು ಸಮಾಜದ ಎಲ್ಲಾ ಜಾತಿ ಧರ್ಮದ ವರ್ಗದ ಪ್ರೀತಿ ಗಳಿಸಿದ್ದಾರೆ. ಪ್ರತಿ ವರ್ಷ ಶ್ರೀಶೈಲಕ್ಕೆ ಹೋಗುವ ಲಕ್ಷಾಂತರ ಭಕ್ತರಿಗೆ ಅನ್ನದಾನ, ಕೊರೋನಾ ಸಮಯದಲ್ಲಿ ಬಡವ ಬಲ್ಲಿದರೆನ್ನದೆ ತಾಲೂಕಿನಾದ್ಯಂತ ಸಂಚರಿಸಿ ಅವರ ಕಷ್ಟದಲ್ಲಿ ಪಾಲ್ಗೊಳ್ಳುವ ಮೂಲಕ ದಾನ ಧರ್ಮದ ಕೆಲಸ ಬಸನಗೌಡ ಬಾದರ್ಲಿ ಮಾಡಿದ್ದಾರೆ. ಅವರು ಮಾಡಿರುವ ಧರ್ಮಕ್ಕೆ ಜಯ ಸಿಗುತ್ತದೆ ಧರ್ಮವು ನಿಧಾನವಾಗಿ ಗೆಲ್ಲುತ್ತದೆ ಮತ್ತು ಆದಷ್ಟು ಬೇಗನೆ ಅವರಿಗೆ ಸ್ಥಾನಮಾನ ಅಧಿಕಾರ ಸಿಗಲಿ ಶೀಘ್ರ ಮೇವು ಅಧಿಕಾರ ಪ್ರಾಪ್ತಿರಸ್ತು ಎಂದರು.
ಮೂರು ಮೈಲ್ ಕ್ಯಾಂಪಿನ ರಂಬಾಪುರಿಯ ಖಾಸಾ ಶಾಖಾಮಠದ ಸೋಮನಾಥ ಶಿವಾಚಾರ್ಯರು, ಒಳಬಳ್ಳಾರಿ ಬಸವಲಿಂಗ ಸ್ವಾಮೀಜಿ, ಶಿವಯೋಗಿ ಶಿವಾಚಾರ್ಯರು ರೌಡಕುಂದಾ, ಬಂಗಾರಿಕ್ಯಾಂಪ್ ಸದಾನಂದ ಸ್ವಾಮೀಜಿ, ಮಾದಯ್ಯಸ್ವಾಮಿ ಗುರುವಿನ್ ತುರುವಿಹಾಳ, ಅಡವಿ ಅಮರೇಶ್ವರದ ಶಾಂತಮಲ್ಲ ಶಿವಾಚಾರ್ಯ, ತೋಂಟದಾರ್ಯ ಸ್ವಾಮೀಜಿ, ಶಂಭುಲಿಂಗಸ್ವಾಮೀಜಿ, ಮಹಾಂತ ಶಿವಾಚಾರ್ಯ ಸ್ವಾಮೀಜಿ, ಬಳಗಾನೂರು ಸಿದ್ದಬಸವಸ್ವಾಮೀಜಿ, ಮಸ್ಕಿ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ಬಸಯ್ಯ ಸ್ವಾಮಿ ಗುಂಜಳ್ಳಿ, ಮಲ್ಲಯ್ಯ ಸ್ವಾಮೀಜಿ, ಚನ್ನಮಲ್ಲ ಸ್ವಾಮೀಜಿ, ಸಯ್ಯದ್ಬಾಬಾ ಖಾಜಿ, ಮೌಲನಾಖಾಜಿ, ಆರ್.ಡಿ.ಸಿ.ಸಿ. ಬ್ಯಾಂಕಿನ ನಿರ್ದೇಶಕ ಸೋಮನಗೌಡ ಬಾದರ್ಲಿ ಇದ್ದರು.
ಇದೇ ಸಂದರ್ಭದಲ್ಲಿ ಗುರು ವಂದನಾ ಕಾರ್ಯ ಕ್ರಮ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಶಿವಕುಮಾರ ಜವಳಿ, ಮುಖಂಡರಾದ ವೆಂಕಟೇಶ ರಾಗಲಪರ್ವಿ, ಶರಣಯ್ಯಸ್ವಾಮಿ, ಮೂಕಪ್ಪ ಗಾಂದಿನಗರ, ಶಂಕರ ಗೌಡ ಸೋಮನಗೌಡ ಬಾದರ್ಲಿ ಯುವ ಕಾಂಗ್ರೆಸ್ ನ ಅಧ್ಯಕ್ಷ ಅಬೀಬ್ ಖಾಜಾ ಸಾಬ್ ರೌಡಕುಂದ ಸೇರಿದಂತೆ ಸಾವಿರಾರು ಅಭಿಮಾನಿಗಳು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.