ಏಪ್ರಿಲ್ 01 .ಸಿಂಧನೂರು ನಗರದ ಪಿಡಬ್ಲ್ಯೂಡಿ ಕ್ಯಾಂಪಿನ ಸನ್ ರೈಸ್ ಮೆಡಿಕಲ್ ಕೋರ್ಸ್ ಗಳ ವಿದ್ಯಾ ಸಮೂಹ ಸಿಂಧನೂರು ಅವರು ಡಾ:ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 116 ಜಯಂತಿ ಮತ್ತು ಉಚಿತ ನೀರಿನ ಅರವಟ್ಟಿಗೆ ಉದ್ಘಾಟನೆ ಹಮ್ಮಿಕೋಳಲಾಗಿತ್ತು ಈ ಕಾರ್ಯಕ್ರಮದ ದಿವ್ಯ ಸಾನಿದ್ಯತೆಯನ್ನು ಪರಮಪೂಜ್ಯ ಶ್ರೀ ಶ್ರೀ ಶ್ರೀ. ಸದಾನಂದ ಶರಣರು ಸಿದ್ದಶ್ರಾಮ ರೌಡಕುಂದ ಅವರು ವಹಿಸಿದ್ದರು
ನಂತರ ಶ್ರೀಗಳು ಕಾಲೇಜಿನ ವಿದ್ಯಾರ್ಥಿಗಳ ಸಿಬ್ಬಂದಿಗಳ ಜೋತೆ ಕೆಲಕಾಲ ಸಂಭಾಷಣೆ ಮಾಡಿ ನಂತರ ಕಾಲೇಜಿನ ಎಲ್ಲಾ ವಿಭಾಗಕ್ಕೆ ಬೇಟಿನೀಡಿ ಕಾಲೇಜಿನ ವಿಶೇಷತೆಯನ್ನು ಕೇಳಿ ತಿಳಿದುಕೋಂಡರು ಮತ್ತು ನೀರಿನ ಅರವಟ್ಟಿಗೆಯನ್ನು ಉದ್ಘಾಟನೆ ಮಾಡಿದರು. ಅಂತರ ಮಾತನಾಡಿದ ಅವರು ಸನ್ ರೈಸ ವಿದ್ಯಾ ಸಂಸ್ಥೆಯು ಸ್ಥಾಪಿಸಿದ ನೀರಿನ ಅರವಟ್ಟಿಗೆಯ ಉಪಯೋಗವನ್ನು ಸಾರ್ವಜನಿಕರು ಪಡೆಯಲ್ಲಿ ಬಿಸಿಲ ನಾಡಿನಲ್ಲಿ ಈ ತರ ಬಾಯಾರಿಕೆ ನೀವಾರಿಸುವ ಕೆಲಸ ಒಂದು ಉತ್ತಮ ಸಮಾಜ ಸೇವೆಯಾಗಿದೆ ಮುಂದೆಯು ಈ ತರಹ ಕಾರ್ಯಗಳಲ್ಲಿ ಸನ್ ರೈಸ್ ವಿದ್ಯ ಸಂಸ್ಥೆ ಮಾಡಲಿ ಎಂದರು.
ಇದೆ ಸಂದರ್ಭದಲ್ಲಿ ಶ್ರೀ ಲಾಜರ್ಸಿರಿಲ್ ಇವರು ಮಾತನಾಡಿ ಹನಿ ಸೀರು ಅತ್ಯಂತ ಮಹತ್ವವಾದದು ಆದರಿಂದ ನೀರನ್ನು ಪೋಲು ಮಾಡದೆ ಉಪಯೋಗಿಸಿ ಮತ್ತು ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿಯಾದ ಬಿಸಿಲು ಆಗಮಿಸುವ ಕಾರಣದಿಂದ ಅನೇಕರಿಗೆ ಕುಡಿಯುವ ನೀರಿನ ದಾಹ ಉಂಟಾದ ಸಂದರ್ಭದಲ್ಲಿ ಅವರಿಗೆ ಹಣ ಕೊಟ್ಟು ನೀರು ಖರೀದಿಸಲು ಸಾಧ್ಯವಾಗುವುದಿಲ್ಲ ಆದರಿಂದ ನಮ್ಮ ಸಂಸ್ಥೆಯು ಬಡವರಿಗೆ ಅನುಕೂಲ ಆಗುವ ಉದ್ದೇಶದಿಂದ ಈ ಶುದ್ದೀಕರಿಸಿದ ನೀರಿನ ಅರವಟ್ಟಿಗೆಯನ್ನು ಸ್ಥಾಪಿಸಲಾಗಿದೆ ಎಂದರು..
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಇರ್ಫಾನ್ ಕೆ, ಅವರು ಕಾರ್ಯಕ್ರಮದ ಬಗ್ಗೆ ಹರ್ಷವನ್ನು ಸೂಚಿಸಿದರು ಶ್ತೀ.ಇರ್ಷಾದ್ ಡಾ!!.ಹೆಚ್ ಮರಿಯಪ್ಪ ವಕೀಲರು ಮತ್ತು ಸಿದ್ದಪ್ಪ. ಸಂಪಾದಕರು ಬಡವರ ಬಾರಕೋಲು ಮಂಜುನಾಥ ಸಮಾಜಸೇವಕರು ,ಪ್ರಾಂಶುಪಾಲರಾದ ವಸೀಮ್ ಹುಸೇನ್ ,ಚಕ್ರವರ್ತಿ,ಲಾಜರ್ ಸಿರಿಲ್ ಎಲ್ಲಾ ವಿಭಾಗದ ಉಪನ್ಯಾಸಕರುಗಳು ಇದ್ದರು..