ರಾಯಚೂರು,ಏ.01,(ಕ.ವಾ):- ನಗರದ ಸದರ ಬಜಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಮತ್ತು ಹಗಲು ಗಸ್ತು ವೇಳೆಯಲ್ಲಿ ಸಿಬ್ಬಂದಿಯರು ಗಸ್ತು ಮಾಡುವ ಕಾಲಕ್ಕೆ ಮಾಲೀಕರಿಲ್ಲದೇ ರಸ್ತೆಯ ಮೇಲೆ ಬಿಟ್ಟು ಹೋಗಿದ್ದ ಒಟ್ಟು 38 ದ್ವಿಚಕ್ರ ಹಾಗೂ ಇತರೆ ವಾಹನಗಳನ್ನು ಮಾಲಿಕರು ಹಿಂಪಡೆದುಕೊಳ್ಳಬಹುದು ಇಲ್ಲವಾದಲ್ಲಿ ವಾಹನಗಳನ್ನು ಹರಾಜು ಪ್ರಕ್ರಿಯೆ ಮೂಲಕ ವಿಲೇವಾರಿ ಮಾಡಲಾಗುವುದು ಎಂದು ಸದರ ಬಜಾರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕ್ರಿಮಿನಲ್ ಮಿಸಿಲೇನ್ಸ್ ನಂ 26/2019, ಕಲಂ 75 ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಠಾಣಾ ಪಿ ಎಫ್ ನಂ 60/2019 2019ರ ಅ.22 ಮತ್ತು ಪಿಎಫ್ ನಂ 11/2013 2013ರ ಫೆ.23 ರಂದು ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿದ್ದು ಇರುತ್ತದೆ. ಈ ಕೆಳಕಂಡ ಜಪ್ತಿ ಮಾಡಿಕೊಂಡು ಮೋಟಾರ್ ಸೈಕಲ್/ಕಾರು ವಿಲೇವಾರಿಗಾಗಿ ಸಿಬ್ಬಂದಿಯವರನ್ನು ಬೇರೆ ಬೇರೆ ಊರುಗಳಿಗೆ ನೇಮಿಸಿ ಕಳುಹಿಸಿಕೊಟ್ಟಿದ್ದು ವಾಹನನಗಳ ಮಾಲೀಕರನ್ನು ಭೇಟಿ ಮಾಡಿ ಮತ್ತು ಅಂಚೆ ಮುಖಾಂತರವಾಗಿ ವಾಹನಗಳನ್ನು ತೆಗೆದುಕೊಂಡು ಹೋಗುವಂತೆ ಪತ್ರ ವ್ಯವಹಾರ ಮಾಡಿದ್ದರು ಸಹ ಅವರು ವಾಹನಗಳನ್ನು ತೆಗೆದುಕೊಂಡು ಹೋಗಿರುವುದಿಲ್ಲ. ಈ ವಾಹನಗಳನ್ನು ಸಾರ್ವಜನಿಕ ಹರಾಜು ಮೂಲಕ ಸ್ವತ್ತು ವಿಲೇವಾರಿ ಮಾಡಲು ಮಾನ್ಯ ನ್ಯಾಯಾಲಯದ ಆದೇಶ ಸಂಖ್ಯೆ ಕ್ರಿ.ಮಿ ನಂ 1111/2021 ರ ದಿ: 24/03/2023 ರ ಪ್ರಕಾರ ಮಾಲೀಕರಿಗೆ ತಮ್ಮ ಸ್ವತ್ತುಗಳನ್ನು ತೆಗೆದುಕೊಂಡು ಹೋಗಬಹುದೆಂದು ಇಲ್ಲವಾದಲ್ಲಿ ವಾಹನಗಳನ್ನು ಸಾರ್ವಜನಿಕ ಹರಾಜಿನ ಮೂಲಕ ವಿಲೇವಾರಿ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸದರ ಬಜಾರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ಸದರ ಬಜಾರ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.