ರಾಯಚೂರು,ಏ.01,(ಕ.ವಾ):- 2023-24ನೇ ಆರ್ಥಿಕ ಸಾಲಿನಲ್ಲಿ ಮಾರುಕಟ್ಟೆ ದರ, ಸೂಚಿಗಳು, ಪರಿಷ್ಕರಣೆಯಾಗಿದ್ದಲ್ಲಿ ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಇವರ ಆದೇಶದಂತೆ ಶೇ.3ರಿಂದ ಶೇ.5ರಷ್ಟು ಪರಿಷ್ಕರಣೆ ಮಾಡಲು ಆದೇಶಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ನಗರಸಭೆ ಮಹಾಸಭೆಯ ನಿರ್ಣಯ ಸಂಖ್ಯೆ 323, ಸಭೆಯಲ್ಲಿ ಶೇ.3ರಷ್ಟು ಆಸ್ತಿ ತೆರಿಗೆಯನ್ನು ಹೆಚ್ಚಿಗೆ ಮಾಡಲು ಅನುಮೋಧಿಸಿದ್ದು, ಪ್ರಸಕ್ತ 2023-24ನೇ ಸಾಲಿನಿಂದ ಶೇ.3ರಷ್ಟು ಆಸ್ತಿ ತೆರಿಗೆ ದರ ಪರಿಷ್ಕರಣೆ ಮಾಡಲಾಗಿದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.