ಏ. ಸಿರುಗುಪ್ಪ ತಾಲೂಕಿನ ಬಗ್ಗುರು ಗ್ರಾಮದ ಪೂಜಾರಿಯಾದ ಮಲ್ಲಿಕಾರ್ಜುನಸ್ವಾಮಿರವರು ಪ್ರತಿ ದಿನ ಬೆಳಿಗ್ಗೆ 6-00 ಗಂಟೆ ಸುಮಾರಿಗೆ ದೇವರ ಮನೆಯ ಹೊರಗಡೆ ಇರುವ ಸಣ್ಣಬಸವಣ್ಣ ಮೂರ್ತಿಯ ಪೂಜೆ ಮಾಡಿ ನಂತರ ದೇವರ ಮನೆಯ ಬೀಗವನ್ನು ಶ್ರೀ.ಹೆಚ್.ಮಲ್ಕಪ್ಪ ತಂದೆ ಮುದುಕಪ್ಪ, ವ: 64 ಗೆ ಕೊಡುತ್ತಿದ್ದ ಪುನಃ ಮಾರನೇ ದಿನ ಬೆಳಿಗ್ಗೆ ಬಂದು ದೇವರ ಮನೆಯ ಬೀಗವನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡಿ ಸಂಜೆ 6-00 ಗಂಟೆ ಸುಮಾರಿಗೆ ಕೊಡುತ್ತಿದ್ದ. ನಮ್ಮ ಗ್ರಾಮದ ಊರ ಹೊರಗಡೆ ಇರುವ ಶ್ರೀ.ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಮಡಲು ಗ್ರಾಮಸ್ಥರು ಹಾಗೂ ಮನೆ ದೇವರ ಭಕ್ತರು ಸೇರಿಕೊಂಡು 6 ಕೆ.ಜಿ.330 ಗ್ರಾಂ ಅಂದಾಜು 3,23,200=00 ರೂಪಾಯವುಳ್ಳ ಬೆಳ್ಳಿಯ ದೊಡ್ಡಬಸವೇಶ್ವರ ಮೂರ್ತಿಯನ್ನು ಮಾಡಿಸಿರುತ್ತಾರೆ. ಆದರೆ ಮೂರ್ತಿಯನ್ನು ಪ್ರತಿ ಅಮಾವಾಸ್ಯೆಯಂದು ಶ್ರೀ.ಹೆಚ್.ಮಲ್ಕಪ್ಪ ಹತ್ತಿರ ದೇವರ ಮನೆಯ ಬೀಗವನ್ನು ತೆಗೆದುಕೊಂಡು ಬಸವೇಶ್ವರ ದೇವಸ್ಥಾನದ ದೇವರ ಮನೆಯಲ್ಲಿರುವ ಬೆಳ್ಳಿಯ ದೊಡ್ಡ ಬಸವಣ್ಣಮೂರ್ತಿಯನ್ನು ಬೆಳಿಗ್ಗೆ 6-00 ಗಂಟೆ ಸುಮಾರಿಗೆ ಊರ ಹೊರಗಿನ ಶ್ರೀ.ಬಸವೇಶ್ವರ ದೇವಸ್ಥಾನಕ್ಕೆ ತೆಗೆದುಕೊಂಡು ಪೂಜೆ ಮಾಡಿಸಿ ಸಂಜೆ 6-00 ಗಂಟೆ ಸುಮಾರಿಗೆ ವಾಪಾಸ್ ಮೂರ್ತಿಯನ್ನು ದೇವರ ಮನೆಗೆ ತಂದು ದೇವರ ಮನೆಯ ಒಳಗಡೆ ಇರುವ ಕಬ್ಬಿಣದ ಪಟ್ಟಿಗೆಯಲ್ಲಿ ಇಟ್ಟು ಬೀಗ ಹಾಕಿಕೊಂಡು ವಾಪಾಸ್ ದೇವರ ಮನೆಯ ಬೀಗವನ್ನು ಶ್ರೀ.ಹೆಚ್.ಮಲ್ಕಪ್ಪಗ್ ಪೂಜಾರ್ ಕೊಡುತ್ತಿದ್ದ.
ಅದೇ ರೀತಿಯಂತೆ ದಿನಾಂಕ: 22-03-2023 ರಂದು ಅಮಾವಾಸ್ಯೆ ಇದ್ದುದ್ದರಿಂದ ಪೂಜಾರಿಯಾದ ಮಲ್ಲಿಕಾರ್ಜುನಸ್ವಾಮಿ ರವರು ಶ್ರೀ.ಹೆಚ್.ಮಲ್ಕಪ್ಪ ಹತ್ತಿರ ದೇವರ ಮನೆಯ ಬೀಗವನ್ನು ತೆಗೆದುಕೊಂಡು ಬಸವೇಶ್ವರ ದೇವಸ್ಥಾನದ ದೇವರ ಮನೆಯಲ್ಲಿರುವ ಬೆಳ್ಳಿಯ ದೊಡ್ಡ ಬಸವಣ್ಣಮೂರ್ತಿಯನ್ನು ಬೆಳಿಗ್ಗೆ 6-00 ಗಂಟೆ ಸುಮಾರಿಗೆ ಊರ ಹೊರಗಿನ ಶ್ರೀ.ಬಸವೇಶ್ವರ ದೇವಸ್ಥಾನಕ್ಕೆ ತೆಗೆದುಕೊಂಡು ಸೂಜೆ ಮಾಡಿಸಿ ಸಂಜೆ 6-00 ಗಂಟೆ ಸುಮಾರಿಗೆ ವಾಪಾಸ್ ಬಸವಣ್ಣ ಮೂರ್ತಿಯನ್ನು ದೇವರ ಮನೆಗೆ ತಂದು ದೇವರ ಮನೆಯ ಒಳಗಡೆ ಇರುವ ಕಬ್ಬಿಣದ ಪಟ್ಟಿಗೆಯಲ್ಲಿ ಇಟ್ಟು ಬೀಗ ಹಾಕಿಕೊಂಡು ವಾಪಾಸ್ ದೇವರ ಮನೆಯ ಬೀಗವನ್ನು ಶ್ರೀ.ಹೆಚ್.ಮಲ್ಕಪ್ಪ ಕೊಟ್ಟಿದ್ದ. ದಿನಾಂಕ: 31-03-2023 ರಂದು ಪ್ರತಿ ದಿನದಂತ ಪೂಜಾರಿಯವರು ನನ್ನ ಹತ್ತಿರ ಬೀಗವನ್ನು ತೆಗೆದುಕೊಂಡು ದೇವರ ಮನೆಗೆ ಹೋಗಿದ್ದು ದೇವರ ಮನೆಗೆ ಹಾಕಿದ ಬೀಗವನ್ನು ಯಾರೂ ಮುರಿದಿದ್ದನ್ನು ಕಂಡು ಗಾಬರಿಯಾಗಿ ನನಗೆ ಬಂದು ತಿಳಿಸಿದ್ದರಿಂದ ನಾನು ಮತ್ತು ಪೂಜಾರಿಯವರು ಹಾಗೂ ಹೆಚ್, ನಿಜಲಿಂಗಪ್ಪ ಮತ್ತು ಎಪ್ಪರವರು ದೇವರ ಮನೆಗೆ ಹೋಗಿ ನೋಡಲು ದೇವರ ಮನೆಗೆ ಹಾಕಿದ ಬೀಗವು ಮುರಿದಿದ್ದು ಒಳಗಡೆ ಹೋಗಿ ಕಬ್ಬಿಣದ ಪೆಟ್ಟಿಗೆಯನ್ನು ನೋಡಲು ಕಬ್ಬಿಣದ ಲಾಕ್ ಮುರಿದು ಓಪನ್ ಆಗಿದ್ದು ಒಳಗಡೆ ಇರುವ ದೊಡ್ಡಬಸವಣ್ಣಮೂರ್ತಿ ಮತ್ತು ದೇವರ ಮನೆಯಲ್ಲಿದ್ದ ಎರಡು ಸಣ್ಣ ಬಸವಣ್ಣಮೂರ್ತಿಗಳು ಅಂದಾಜು 1.ಕಿ.ಜಿ.75 ಗ್ರಾಂ ಅಂದಾಜು ಬೆಲೆ 70,000=00 ರೂ ಕಾಣಲಿಲ್ಲ.
ಆದ್ದರಿಂದ ದಿನಾಂಕ: 30-03-2023 ಸಂಜೆ 6-00 ಗಂಟೆಯಿಂದ ದಿನಾಂಕ: 31-03-2023 ಬೆಳಿಗ್ಗೆ 6-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಗ್ರಾಮದ ದೇವರ ಮನೆಗೆ ಹಾಕಿದ ಬೀಗವನ್ನು ಮುರಿದು ಒಳಗಡೆ ನುಗ್ಗಿ ಕಬ್ಬಿಣದ ಪೆಟ್ಟಿಗೆಯಲ್ಲಿದ್ದ ಬೆಳ್ಳಿಯ ದೊಡ್ಡಬಸವಣ್ಣ ಮೂರ್ತಿ 6 ಕೆ.ಜಿ.330 ಗ್ರಾಂ ಅಂದಾಜು 2,53,000=00 ರೂ ಗಳು ಹಾಗೂ ದೇವರ ಮನೆಯ ಒಳಗಡೆ ಇದ್ದ ಎರಡು ಸಣ್ಣ ಬೆಳ್ಳಿಯ ಬಸವಣ್ಣಮೂರ್ತಿಗಳು ಅಂದಾಜು 1.ಕೆ.ಜಿ.750 ಗ್ರಾಂ. ಅಂದಾಜು ಬೆಲೆ 70,000=00 ರೂ ಒಟ್ಟು 3 ಬೆಳ್ಳಿಯ ಬಸವಣ್ಣಮೂರ್ತಿಗಳು 8 ಕೆ.ಜಿ.80 ಗ್ರಾಂ ಅಂದಾಜು ಬೆಲೆ 3,23,200=00 ರೂ ಗಳನ್ನು ಕಳ್ಳತನ ಮಾಡಿದ್ದು ಬೆಳ್ಳಿಯ 3 ಬಸವಣ್ಣಮೂರ್ತಿಗಳನ್ನು ಪತ್ತೆ ಮಾಡಿ ಹುಡುಕಿಕೊಡಬೇಕೆಂದು ಹಾಗೂ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಠಾಣೆಗೆ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಅನ್ವಯ ಪ್ರಕರಣ ದಾಖಲಾಗಿರುತ್ತದೆ ಮತ್ತು ಅತಿ ಶೀಘ್ರದಲ್ಲಿ ತನಿಖೆ ಮಾಡಲಾಗುವುದೆಂದು ಪೊಲೀಸ ಅಧಿಕಾರಿಗಳು ತಿಳಿಸಿರುತ್ತಾರೆ