ಏಪ್ರಿಲ್ 04. ಸಿಂಧನೂರು ನಗರದ ಗಂಗಾವತಿ ಮುಖ್ಯ ರಸ್ತೆಯಲ್ಲಿ ಬರುವ ಗೋಸ್ವಾಮಿ ಕಲ್ಯಾಣ ಮಂಟಪದಲ್ಲಿ ಸಮಾಜಸೇವಕ ಹಾಗೂ ಸೇವಾ ಸಿರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಪೂಜಾರಿ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆ ಸರಳವಾಗಿ ಪಕ್ಷಿಗಳ ನೀರನ ಅರವಟ್ಟಿಗೆಗೆ ಚಾಲನೆ ನೀಡಲಾಯಿತು ಒಂದಲ್ಲ ಒಂದು ರೀತಿಯಿಂದ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಯುವಕ ಪ್ರದೀಪ್ ಕುಮಾರ್ ಬೇಸಿಗೆಯಲ್ಲಿ ನಮ್ಮ ಭಾಗದಲ್ಲಿ ಶೇಕಡ 40 ರಿಂದ 42ರಷ್ಟು ಬಿಸಿಲು ಇರುವುದರಿಂದ ನಮಗೆ ನೀರು ಸಿಕ್ಕಿಲ್ಲವೆಂದರೆ ಎಲ್ಲೋ ಹೋಗಿ ದುಡ್ಡು ಕೊಟ್ಟು ಮಜ್ಜಿಗೆ ಜ್ಯೂಸ್ ಎಳೆನೀರು ಮತ್ತು ಮುಂತಾದ ತಂಪು ಪಾನಿಗಳನ್ನು ಕುಡಿದು ಬಿಸಿಲಿನ ದಾಹವನ್ನು ತೀರಿಸಿಕೊಳ್ಳುತ್ತೇವೆ ಆದರೆ ಪ್ರಾಣಿ-ಪಕ್ಷಿಗಳು ನೀರು ಎಲ್ಲಿಂದ ಕುಡಿಯುತ್ತವೆ ನಿಮ್ಮ ನಿಮ್ಮ ಮನೆಗಳ ಮುಂದೆ ನಿಮ್ಮ ಕೈಲಾದ ಒಂದು ಅಥವಾ ಎರಡು ನೀರು ಮತ್ತು ಹಾರದ ಅರವಟ್ಟಿಗೆಗಳನ್ನು ಕಟ್ಟಿ ಪ್ರಾಣಿ ಪಕ್ಷಿಗಳ ಸಂಕುಲಗಳನ್ನು ಉಳಿಸುವಂತಹ ಪ್ರಯತ್ನ ಮಾಡಿ
ಮೊಬೈಲ್ ಬಂದ ನಂತರ ಈ ಹಿಂದೆ ಇದ್ದಷ್ಟು ಇವಾಗ ಯಾವುದೇ ರೀತಿ ಪಕ್ಷಿಗಳು ಜಾಸ್ತಿ ಕಾಣಿಸುತ್ತಿಲ್ಲ ಮುಂದಿನ ದಿನಗಳಲ್ಲಿ ನಾವು ಪ್ರಾಣಿ ಪಕ್ಷಿಗಳು ಇತರ ಇದ್ದು ಅಂತ ಹೇಳುವಂತ ಪರಿಸ್ಥಿತಿ ಎದುರಾಗಬಾರದು ನಿಮ್ಮ ನಿಮ್ಮ ಮನೆಯ ಮುಂದೆ ಅಂಗಡಿಗಳ ಮುಂದೆ ಕಚೇರಿಗಳ ಮುಂದೆ ಕೆಲಸದ ಸ್ಥಳಗಳಲ್ಲಿ ಒಂದಾದರೂ ನೀರಿನ ಮತ್ತು ಹಾರದ ಹರವಟ್ಟಿಗೆಯನ್ನು ಕಟ್ಟಿ ಪಕ್ಷಿಗಳ ಸಂಕುಲಗಳನ್ನು ಉಳಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು
ಈಗಾಗಲೇ ಶೇಕಡ ಅರ್ಧದಷ್ಟು ಆಹಾರ ನೀರಿನ ಅರವಟ್ಟಿಗೆಗಳ ತಯಾರಾಗಿದೆ ಇನ್ನೇನು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಅವುಗಳನ್ನು ತಯಾರಿಸಿ ಶಾಲಾ ಕಾಲೇಜು ಸರ್ಕಾರಿ ಇಲಾಖೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅವುಗಳನ್ನು ಕಟ್ಟಲಾಗುವುದು ನೀರಿನ ಅರವಟ್ಟಿಗೆಗಳು ಖಾಲಿ ಕಂಡಲ್ಲಿ ಅವುಗಳಿಗೆ ನೀರನ್ನು ಹಾಕುವಂತ ಕೆಲಸ ಮಾಡಬೇಕು ತಾವೆಲ್ಲರೂ ಎಂದು ಹೇಳಿದರು