ಏಪ್ರಿಲ್ 6 ರಾಜ್ಯದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ 224 ಕ್ಷೇತ್ರದಲ್ಲಿ ಪ್ರತಿಯೊಂದು ಪಕ್ಷದಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದು ತಮ್ಮದೇ ಆದ ಚಾಪನ್ನು ಮೂಡಿಸುತ್ತಾ ಜಿದ್ದಾಜಿದ್ದಿ ಟಿಕೆಟ್ ಗಾಗಿ ಪೈಪೋಟಿ ನಡೆಸುತ್ತಿದ್ದಾರೆ.
ಹಾಗೂ ಎಲ್ಲಾ ಪಕ್ಷದ ಹೈಕಮಾಂಡ್ಗೆ ಯಾರಿಗೆ ಟಿಕೆಟ್ ನೀಡಬೇಕು ಯಾರಿಗೆ ಟಿಕೆಟ್ ನೀಡಬಾರದು ಎನ್ನುವದು ತಲೆ ನೋವಾಗಿದೆ
ಅದರಂತೆ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಜೆಡಿಎಸ್ ಅಭ್ಯರ್ಥಿಯನ್ನು ಮಾಜಿ ಶಾಸಕರಾದ ವೆಂಕಟರಾವ್ ನಾಡಗೌಡ ಅಭ್ಯರ್ಥಿಯೆಂದು ಜೆಡಿಎಸ್ ಪಕ್ಷ ಘೋಷಣೆ ಮಾಡಿದೆ.
ಹಾಗೊ ಹೀಗೂ ಏನಾದರೂ ಮಾಡಿ ಕ್ಷೇತ್ರದ ಜನತೆ ತಕ್ಕಮಟ್ಟಿಗೆ ಬಿಜೆಪಿ ಮೇಲೆ ಆಸಕ್ತಿ ತೋರುಸುತ್ತಿದ್ದಾರೆ ಈ ಬಾರಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತೆ ಎಂದು ಕೆಲವು ಕಾರ್ಯಕರ್ತರು ಮಾತಾಡಿಕೊಳ್ಳುತ್ತಿದ್ದಾರೆ
ಆದರೆ ಬಿಜೆಪಿಯಲ್ಲಿ 6ರಿಂದ 8 ಆಕಾಂಕ್ಷಿಗಳಿದ್ದು ಅದರಲ್ಲಿ ಪ್ರಮುಖವಾಗಿ ಕೆ. ವಿರುಪಾಕ್ಷಪ್ಪ, ಕೆ. ಕರಿಯಪ್ಪ, ಕೆ. ಮರಿಯಪ್ಪ ಕೊಲ್ಲಾ ಶೇಷಗಿರಿರಾವ್ ರಾಜೇಶ್ ಹಿರೇಮಠ ಶಿವನಗೌಡ ಗೊರೇಬಾಳ,ಅಮರೇಗೌಡ ವಿರುಪಾಪುರ ಈ ಹೆಸರುಗಳು ಕೇಳಿ ಬರುತ್ತಿವೆ ಬಿಜೆಪಿ ಹೈಕಮಾಂಡ್ ಮಾತ್ರ ಯಾರಿಗೆ ಮಣಿ ಹಾಕುತ್ತದೆ ಎಂದು ಕಾರ್ಯಕರ್ತರು ಮಾತ್ರ ಕಾತುರದಿಂದ ಕಾಯುತ್ತಿದ್ದಾರೆ.
ಗೌಡರ ಗದ್ದಲ
ಅದರಂತೆಯೇ ಕಾಂಗ್ರೆಸ್ ಪಕ್ಷದಲ್ಲಿ ಕೂಡ ಮಾಜಿ ಶಾಸಕರಾದ ಶ್ರೀ ಹಂಪನಗೌಡ ಬಾದರ್ಲಿ ಮತ್ತು ಯುವ ಕಾಂಗ್ರೆಸ್ ನ ಮಾಜಿ ರಾಜ್ಯಾಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಸವನಗೌಡ ಬಾದರ್ಲಿ ಅವರ ಮಧ್ಯೆ ಟಿಕೆಟ್ ಗಾಗಿ ತೀವ್ರ ಪೈಪೋಟಿ ನಡೆಸಿದ್ದಾರೆ ಇಬ್ಬರು ಕೂಡ ರಾಜಧಾನಿಯಲ್ಲಿ ಟಿಕ್ಕಾಣಿ ಹೂಡಿ ತಮ್ಮ ಹಿರಿಯ ಮುಖಂಡರುಗಳ ಜೊತೆಗೆ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತ ನನಗೆ ಟಿಕೆಟ್ ಬೇಕು ಎಂದು ಹಂಪನಗೌಡ ಬಾದರ್ಲಿ ಅವರು ನನಗೂ ಟಿಕೆಟ್ ಬೇಕೆಂದು ಬಸನಗೌಡ ಬಾದರ್ಲಿ ಅವರು ಜಿದ್ದಾಜಿದ್ದಿ ನಡೆಸಿದ್ದಾರೆ.
ಆದರೆ ಎರಡು ಬಣಗಳ ಕಾರ್ಯಕರ್ತರು ಮಾತ್ರ ನಮ್ಮ ಗೌಡರಿಗೆ ಟಿಕೆಟ್ ಸಿಕ್ಕಿದೆ ಎಂದು ಕ್ಷೇತ್ರದಾದ್ಯಂತ ನಮ್ಮ ಗೌಡರೇ ಅಭ್ಯರ್ಥಿಯೆಂದು ಬಿಂಬಿಸಿಕೊಂಡು ಎರಡು ಬಣದ ಕಾರ್ಯಕರ್ತರು ಪ್ರಮುಖ ಹಳ್ಳಿಗಳಲ್ಲಿ ಮತಯಾಚನೆ ನಡೆಸಿದ್ದಾರೆ ಸಿಂಧನೂರು ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹಂಪನಗೌಡ ಮಾದರಿ ಅವರ ಸಂಬಂಧಿ ಪಂಪನಗೌಡ ಬಾದರ್ಲಿ ಅವರ ನೇತೃತ್ವದಲ್ಲಿ ಕಾರ್ಯಕರ್ತರೊಂದಿಗೆ ಈ ಬಾರಿ ಹಂಪನಗೌಡ ಬಾದರ್ಲಿಯವರಿಗೆ ಮತ ಹಾಕಿ ಎಂದು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ಅದೇ ರೀತಿ ಬಸನಗೌಡ ಬಾದರ್ಲಿ ಅವರ ಸಹೋದರ ಸೋಮನಗೌಡ ಬಾದರ್ಲಿ ಅವರು ಮಾವಿನಮಡುಗು ಗ್ರಾಮದಲ್ಲಿ ಕಾರ್ಯಕರ್ತರೊಂದಿಗೆ ಈ ಬಾರಿ ಬಸನಗೌಡ ಬಾದರ್ಲಿ ಆಶೀರ್ವದಿಸಿ ನಿಮ್ಮೆಲ್ಲರ ಯುವ ನಾಯಕನಿಗೆ ತಮ್ಮ ಮತವನ್ನು ನೀಡಿ ಎಂದು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ಆದರೆ ಸಾಮಾನ್ಯ ಕಾರ್ಯಕರ್ತರು ಮಾತ್ರಾ ಇವರಿಬ್ಬರಲ್ಲಿ ಯಾರಿಗೆ ಟಿಕೆಟ್ ದೊರೆತಿದೆ ಎಂದು ಗೊಂದಲಕ್ಕಿಡಾಗಿದ್ದಾರೆ ಕಾಂಗ್ರೆಸ್ ಹೈಕಮಾಂಡ್ ಮಾತ್ರ ತುಟಿಪಿಟಕ್ಕನ್ನದೇ ಸುಮ್ಮನೆ ಕುಳಿತಿದೆ.
ಕಾಂಗ್ರೆಸ್ ಪಕ್ಷ ಯಾರಿಗೆ ಕೈ ಕೊಟ್ಟು ಯಾರಿಗೆ ಕೈ ಹಿಡಿಯಲಿದೆ ಎಂದು ಜನತಾ ಜನಾರ್ಧನ ಮಾತಾಗಿದೆ.