ಏಪ್ರಿಲ್ 07.ಸಿರುಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಶ್ರೀ ಉಟಕನೂರು ಮರಿಬಸವಲಿಂಗ ತಾತನವರ ರಥೋತ್ಸವ ಭಕ್ತರ ಸಮ್ಮುಖದಲ್ಲಿ ಗುರುವಾರ ಸಾಯಂಕಾಲದಂದು ವೈಭವಯುತವಾಗಿ ಜರುಗಿತು.
ಪ್ರತಿ ವರ್ಷದಂತೆ ಜಾತ್ರೋತ್ಸವದ ನಿಮಿತ್ತ ದೇವಸ್ಥಾನದಲ್ಲಿ ಹೋಮ ಹವನ, ಮಹಾ ಪಂಚಾಮೃತಾಭಿಷೇಕ, ವೀಳ್ಯದೆಲೆ, ವಿವಿಧ ಫಲ ಪುಷ್ಪಗಳು, ಆಭರಣಗಳಿಂದ ಶ್ರೀ ಉಟಕನೂರು ಮರಿಬಸವಲಿಂಗ ತಾತನವರ ಮೂರ್ತಿಗೆ ಅಲಂಕಾರ, ಭಕ್ತರಿಂದ ಕಾಯಿ ಕರ್ಪೂರ, ಎಡೆಯ ನೈವೇದ್ಯ, ಮಹಾಮಂಗಳಾರತಿ ಸೇರಿದಂತೆ ಇನ್ನಿತರ ಧಾರ್ಮಿಕ ವಿಧಿವಿಧಾನಗಳು ಜರುಗಿದವು.
ರಥೋತ್ಸವದ ಹಿನ್ನಲೆ ಗ್ರಾಮದ ಭಕ್ತರು ತಂಡೋಪ ತಂಡವಾಗಿ ವಾದ್ಯಗಳೊಂದಿಗೆ ಬೃಹದಾಕಾರದ ಪೇಪರ್ ಹಾಗೂ ಪುಷ್ಪ ಮಾಲೆಗಳನ್ನು ಮೆರವಣಿಗೆಯ ಮೂಲಕ ತಂದು ರಥಕ್ಕೆ ಅರ್ಪಿಸಿದರು ನಂತರ ಸಾಯಂಕಾಲ ಜರುಗಿದ ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತರು ಹೂ ಹಣ್ಣು ಎಸೆದು ಭಕ್ತಿಯಿಂದ ನಮಿಸಿದರು.
ವರದಿ.ಸಿ.ಖಾಜಾಮೋಹಿದ್ದೀನ್. ಸಿರುಗುಪ್ಪ