ಏಪ್ರಿಲ್ 08.ಆತ್ಮೀಯ ಮತದಾರ ಪ್ರಭುಗಳೇ ಮೇ 10 ನಡೆಯುವ 2023ನೇ ಸಾರ್ವತ್ರಿಕ ವಿಧಾನಸಭೆ ಚುನಾವಣೆ ನಡೆಯಲಿದ್ದು ತಾವೆಲ್ಲರೂ ಕೂಡ ಈ ಚುನಾವಣೆಯಲ್ಲಿ ಭಾಗವಹಿಸಿ ಮತದಾನ ಮಾಡಿ ಮತ್ತು ಮತದಾನ ಮಾಡಲು ಜಾಗೃತಿ ಮೂಡಿಸಿ ನಾವು ಯಾವ ರೀತಿ ಮತದಾನ ಮಾಡಬೇಕು ಯಾಕೆ ಮಾಡಬೇಕು ಎಂಬುವುದನ್ನು ಕೆಳಗಡೆ ಸಂಪೂರ್ಣವಾಗಿ ವಿವರಿಸಲಾಗಿದೆ ಓದಿ ಇನ್ನೊಬ್ಬರಿಗೂ ತಿಳಿಸಿ.
1. ಮತದಾನ ಯಾಕೆ ಮಾಡಬೇಕು..??
2. ಮತದಾನದ ಮೌಲ್ಯಗಳೇನು….??
3. ಮತದಾನ ಮಾಡುವುದರಿಂದ ಆಗುವ ಬದಲಾವಣೆಗಳೇನು….??
4. ಮತದಾನದ ಪ್ರಾಮುಖ್ಯತೆ ಏನು….??
5. ಯಾವ ವಿಚಾರಕ್ಕೆ ಮತ ಹಾಕಬೇಕು??
6. ನನ್ನ ಜಿಲ್ಲೆ ಜಿಲ್ಲೆಯ ಪ್ರತಿಯೊಬ್ಬ ಪ್ರಜೆಯು ಹೇಗೆಲ್ಲ ತೆರಿಗೆ ಕಟ್ಟುತ್ತಾರೆ…??
7. ತೆರಿಗೆ ಯಾವ ರೂಪದಲ್ಲಿ ಕಟ್ಟುತ್ತಾರೆ.. ??
8. ತೆರಿಗೆ ಹೇಗೆ ಕಟ್ಟುತ್ತಾರೆ. ??
9. ಈ ಜಿಲ್ಲೆಯಲ್ಲಿ ಎಷ್ಟು ಕ್ಷೇತ್ರಇದೆ…??
10. ಈಗಿರುವ ಕೆಲಸಗಾರರು ಏನೆಲ್ಲಾ ಕೆಲಸ ಮಾಡಿದ್ದಾರೆ?? ( MLA, MP, ಉಸ್ತುವಾರಿ ಸಚಿವರು )
11. ಜಿಲ್ಲೆಯ ಬಜೆಟ್ ಎಷ್ಟು..??
12. ಕಳೆದ 4.6 ವರ್ಷದಲ್ಲಿ ಎಷ್ಟೆಲ್ಲ ಅನುದಾನ ಬಂದಿದೆ…?
13. ಬಂದಿರುವ ಅನುದಾನಗಳು ಯಾವ ಯಾವ ಕ್ಷೇತ್ರಕ್ಕೆ ಎಷ್ಟು..??
14. ಅನುದಾನಗಳು ಹೇಗೆಲ್ಲ ಉಪಯೋಗ ಆಗಿದೆ…??
15. ಒಬ್ಬ ಕೆಲಸಗಾರನ ಕಾರ್ಯ ವೈಖರಿ ಹೇಗಿದೆ…?? ( MLA, MP, ಉಸ್ತುವಾರಿ ಸಚಿವರು )
16. ಆರೋಗ್ಯ ಕ್ಷೇತ್ರದಲ್ಲಿ ಆಗಿರುವ ಬದಲಾವಣೆ ಏನು….?? ಆಗಬೇಕಿರುವ ಬದಲಾವಣೆ ಏನು….?
17. ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ, ಆಗಬೇಕಿರುವ ಬದಲಾವಣೆ ಏನು…??
18. ಈಗಿರುವ ಶಾಸಕರ ಪ್ರತಿ ತಿಂಗಳ ಸಂಬಳ ಎಷ್ಟು..,?? ಅದು ಯಾರ ಹಣದಿಂದ ಸಂಬಳ ನೀಡುತ್ತಾರೆ….??
19. ಒಬ್ಬ ಶಾಸಕ ತನಗೆ ಪ್ರತಿ ತಿಂಗಳು ಕ್ಷೇತ್ರ ಭತ್ತೆಗೆ ಇರುವ 50 ಸಾವಿರ ಹಣದಿಂದ ಎಷ್ಟೆಲ್ಲ ಕ್ಷೇತ್ರಕ್ಕೆ ಬೆಟ್ಟಿ ನೀಡಿ ಅಲ್ಲಿನ ಕುಂದು ಕೊರತೆಗಳನ್ನೂ ಪಟ್ಟಿ ಮಾಡಿಕೊಂಡು, ಅದನ್ನು ತಜ್ಞರ ಜೊತೆಗೆ ಚರ್ಚಿಸಿ, ಅದರ ಖರ್ಚು-ವೆಚ್ಚ ಗುಣಮಟ್ಟ ಎಲ್ಲವನ್ನು ಜನರಿಗೆ ಪಾರದರ್ಶಕವಾಗಿ ಇಟ್ಟಿದಾರ… ??
20. ಸರ್ಕಾರಿ ಶಾಲೆಗಳ ಪರಿಸ್ಥಿತಿ ಹೇಗಿದೆ….??
21. ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯ, ಚಿಕಿತ್ಸೆ ಯಾವ ಗುಣಮಟ್ಟದಲ್ಲಿದೆ…??
22. ಭ್ರಷ್ಟಾಚಾರ ಹೇಗೆ ನಿಯಂತ್ರಣ ಗೊಂಡಿದೆ…??
23. ಕಳೆದ 5 ವರ್ಷದಲ್ಲಿ ಜನರ ತೆರಿಗೆ ಹಣದಲ್ಲಿ ಬಂದ ಬಜೆಟ್ ಹೇಗೆ, ಉಪಯೋಗ ಆಗಿದೆ….?? ಯಾವ ಕಾಮಗಾರಿ ಯಾವ ಹಂತದಲ್ಲಿದೆ…?? ಅದರ ಗುಣಮಟ್ಟ ಏನು…?? ಅದಕ್ಕೆ ತಗಲಿರುವ ವೆಚ್ಚ ಎಷ್ಟು…??
24. ಶಾಸಕರು ಹೇಗೆಲ್ಲ ಜನರನ್ನು ಆಡಳಿತದಲ್ಲಿ ತೊಡಗಿಸಿಕೊಂಡಿದ್ದಾರೆ…??
25. ಜನರ ಕುಂದು-ಕೊರತೆಯನ್ನು ಹೇಗೆ ಬಗೆಹರಿಸಿದ್ದಾರೆ…??
26. ಹಾಲಿ ಶಾಸಕರು, ಮಾಜಿ ಶಾಸಕರು, ಹಾಲಿ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು, ಹಾಲಿ ಸಚಿವರು, ಮಾಜಿ ಸಚಿವರು ಇವರೆಲ್ಲರೂ ನಾವೆಲ್ಲರೂ ನಮ್ಮ ರಾಜ್ಯ ಮತ್ತು ನಮ್ಮ ದೇಶದ ಅಭಿವೃದ್ಧಿಗೆ ಕಟ್ಟಿದ ತೆರಿಗೆಯಿಂದ ಇವರುಗಳೆಲ್ಲರೂ ಇಷಾರಾಮಿ ಜೀವನ ನಡೆಸಲು ಹಣ ಆಸ್ತಿ-ಪಾಸ್ತಿಗಳನ್ನು ಮಾಡಿದ್ದು ಇದರ ಬಗ್ಗೆ ನಾವೆಲ್ಲರೂ ವಿಮರ್ಶೆ ಮಾಡಬೇಕಾಗುತ್ತದೆ.
27.ಏಕೆಂದರೆ ಇವರುಗಳು ಚುನಾವಣೆಗೆ ನಿಲ್ಲುವುದಕ್ಕಿಂತ ಮುಂಚೆ ಚುನಾವಣೆಯ ಖರ್ಚು-ವೆಚ್ಚಕ್ಕೆ ಸಾಲ ಮಾಡಿಕೊಂಡು ಚುನಾವಣೆಗೆ ನಿಲ್ಲುತ್ತಾರೆ. 5 ವರ್ಷದಲ್ಲಿ ಪ್ರತಿಯೊಬ್ಬರು ಇವರ ಮಕ್ಕಳಿಗೆ, ಮೊಮ್ಮಕ್ಕಳಿಗೆ, ಐದು ತಲೆಮಾರಿನವರೆಗೂ ನಾವೆಲ್ಲರೂ ಕಟ್ಟಿದ ತೆರಿಗೆ ಹಣದಿಂದ ಲೂಟಿ ಮಾಡಿ ಕೊಳ್ಳೆ ಹೊಡೆದು ಇಟ್ಟಿರುತ್ತಾರೆ ಇದು ನಿಜವಾ….?? ಇಲ್ಲವಾ….?? ಎಂಬುದು ವಿಮರ್ಶೆ ಮಾಡಿ ನೋಡಿ. ಇನ್ನು ಮುಂದೆ ಈಗಾಗಲು ಬಿಡಬೇಡಿ ಎದ್ದೇಳಿ ಎಚ್ಚರಗೊಳ್ಳಿ ಮತದಾನ ಬಾಂಧವರೇ……..!!
ದಯವಿಟ್ಟು ನೀವು ನಿಮ್ಮ ಕ್ಷೇತ್ರದ ಅಭ್ಯರ್ಥಿಗೆ ಮತ ನೀಡುವಾಗ ಯೋಚನೆ ಮಾಡಿ ಯಾವ ಅಭ್ಯರ್ಥಿಗೆ ಮತ ನೀಡಿದರೆ ನಮ್ಮ ಕ್ಷೇತ್ರದ ಕುಂದು ಕೊರತೆಗಳು ಸರಿ ಆಗಬಹುದು ಇವಾಗ ನಿಮ್ಮ ಕ್ಷೇತ್ರದಲ್ಲಿ ಇರುವಂತಹ ಶಾಸಕರು ಈಗಾಗಲೇ ನಿಮ್ಮ ಕ್ಷೇತ್ರದಲ್ಲಿ ಯಾವ ಯಾವ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಮತ್ತು ಎಷ್ಟು ಲೂಟಿ ಮಾಡಿದ್ದಾರೆ ಮುಂದೆಯೂ ಇವರು ಕೆಲಸ ಮಾಡುತ್ತಾರ ಎಲ್ಲವನ್ನು ಪರಿಶೀಲಿಸಿ ಮತನೀಡಿ.
ಪಕ್ಷ ಯಾವುದೇ ಆಗಿರಲಿ ನಮಗೆ ಅದು ಮುಖ್ಯವಲ್ಲ ನಮ್ಮ ಕ್ಷೇತ್ರದ ಅಭಿವೃದ್ಧಿ ಮತ್ತು ಒಬ್ಬ ಜನಪ್ರತಿನಿಧಿ ಅಂದರೆ ಸದಾ ಜನರ ಮಧ್ಯೆ ಇದ್ದು ಆ ಕ್ಷೇತ್ರದ ಎಲ್ಲ ಸಮಸ್ಯೆಯನ್ನು ಬಗೆಹರಿಸುವವರೇ ನಿಜವಾದ ಅಭ್ಯರ್ಥಿ ಅಂತಹ ಅಭ್ಯರ್ಥಿಯನ್ನು ನಿಮ್ಮ ಅಮೂಲ್ಯವಾದ ಮತವನ್ನು ಕೊಟ್ಟು ಗೆಲ್ಲಿಸಿ, ಹಣ, ಹೆಂಡ, ಬಟ್ಟೆ, ಕುಕ್ಕರ್, ಬಿಂದಿಗೆ, ಇತ್ಯಾದಿ, ಈ ರೀತಿ ಯಾವುದರ ಆಮಿಷಕ್ಕೆ ಒಳಗಾಗಬೇಡಿ ಪ್ರತಿಯೊಬ್ಬ ಮತದಾರರು ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡುವುದರಿಂದ ನಮ್ಮ ದೇಶದ ಅಭಿವೃದ್ಧಿ ಮತ್ತು ಹಿತವನ್ನು ನಾವು ನೋಡಬಹುದು ನಾವು ನಮ್ಮದನ್ನು ಮಾತ್ರ ಯೋಚನೆ ಮಾಡದೆ ಮುಂದಿನ ನಮ್ಮ ಪೀಳಿಗೆಯ ಬಗ್ಗೆ ಯೋಚನೆ ಮಾಡುವುದು ಸೂಕ್ತ.
ಇದನ್ನು ಎಷ್ಟು ಜನರಿಗಾಗುತ್ತೋ ಅಷ್ಟು ಜನರಿಗೆ ತಲುಪಿಸಿ ಇದರಿಂದ ಎಲ್ಲರೂ ಬದಲಾಗದಿದ್ದರೂ ಸುಮಾರು 10 ರಿಂದ 20 % ಮತದಾರರು ಬದಲಾಗಬಹುದು ಎಂಬ ಭರವಸೆ ಇದೆ.
ಧನ್ಯವಾದಗಳು.
ಇಂತಿ ನಿಮ್ಮ ಮತದಾರ