ಏಪ್ರಿಲ್ 08 ಸಿಂಧನೂರು ನಗರದಲ್ಲಿ ಅದರಲ್ಲೂ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಬೀಳುತ್ತಿಲ್ಲ. ಇದರಿಂದಾಗಿ ವಾಹನ ಸವಾರರು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ದನಗಳು ಮುಖ್ಯ ರಸ್ತೆಗಳಲ್ಲೇ ರಾಜಾರೋಷವಾಗಿ ಓಡಾಡುತ್ತಿರುತ್ತವೆ ವಾಹನಗಳಲ್ಲಿ ಸಂಚರಿಸುವ ಹಾಗೂ ಪ್ರಯಾಣಿಸುವವರ ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತಿವೆ. ರಸ್ತೆ ಅಪಘಾತಗಳಿಗೂ ಕಾರಣವಾಗುತ್ತಿದೆ. ಇಷ್ಟಾದರೂ ಸಂಬಂಧಿಸಿದ ನಗರ ಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದ್ದಾರೆ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ನಗರದಲ್ಲಿ ಹಲವು ವರ್ಷಗಳಿಂದಲೂ ಈ ಸಮಸ್ಯೆ ಇದೆ. ಬಿಡಾಡಿ ದನಗಳಿಂದ ನಮಗೆ ಮುಕ್ತಿ ಸಿಗುವುದು ಯಾವಾಗ ಎನ್ನುವುದು ಜನರ ಪ್ರಶ್ನೆಯಾಗಿದೆ. ಅದರಲ್ಲಿ ವಿಶೇಷವಾಗಿ ಸೋಮವಾರ ಮತ್ತು ಮಂಗಳವಾರ ದನ ಮತ್ತು ಕುರಿ ಸಂತೆ ಇರುತ್ತದೆ. ಇದರಿಂದ ನಗರದ್ಯಾಂತ ಅತಿ ಹೆಚ್ಚು ವಾಹನದಟ್ಟಣೆಯಾಗಿರುತ್ತದೆ ಅದರಲ್ಲೂ ಬೀಡಾಡಿ ದನಗಳ ಅಡ್ಡ ಬರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಹಗಿದೆ
ಆಗಾಗ ‘ಶಾಸ್ತ್ರಕ್ಕೆಂಬಂತೆ’ ಕೆಲವು ಬಿಡಾಡಿ ದನಗಳನ್ನು ಹಿಡಿದು ಸಾಗಿಸುವ ಕಾರ್ಯಾಚರಣೆಯನ್ನು ನಗರ ಸಭೆ ಅಧಿಕಾರಿಗಳು ನಡೆಸಿದ ಉದಾಹರಣೆಗಳಿವೆ. ಬಳಿಕ ಅವರು ಸುಮ್ಮನಾಗುತ್ತಾರೆ. ಪರಿಣಾಮ, ರಸ್ತೆಗಳ ಅಲ್ಲಲ್ಲಿ ಬಿಡಾಡಿ ದನ, ಕರುಗಳ ಬಿಡಾರ ಕಂಡುಬರುತ್ತಿದೆ.
ಇಲ್ಲಿನ ಹೃದಯಭಾಗವಾದ ಗಾಂಧಿ ಚೌಕ ಕಿತ್ತೂರು ರಾಣಿ ಚನ್ನಮ್ಮ ವೃತ್ತ ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕುಷ್ಟಗಿ ರಸ್ತೆ ಮೊದಲಾದ ಕಡೆಗಳಲ್ಲಿ ರಸ್ತೆಯಲ್ಲೇ ಮಲಗಿಯೋ, ನಿಂತೋ, ಓಡಾಡುತ್ತಲೋ ‘ದರ್ಶನ’ ನೀಡುತ್ತಿರುತ್ತವೆ; ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯನ್ನೂ ಉಂಟು ಮಾಡುತ್ತಿರುತ್ತವೆ.
ಪ್ರಾಣಕ್ಕೂ ಸಂಚಕಾರ:
ಎಲ್ಲೆಂದರಲ್ಲಿ ಓಡಾಡುವ ಈ ದನ–ಕರುಗಳು ಸಿಕ್ಕಿದ್ದನ್ನು ತಿನ್ನುತ್ತವೆ. ಕಸದೊಂದಿಗೆ ಪ್ಖಾಸ್ಟಿಕ್ ಕೂಡ ಅವುಗಳ ಹೊಟ್ಟೆ ಸೇರುತ್ತಿದೆ. ಇದು ಅವುಗಳ ಪ್ರಾಣಕ್ಕೂ ಕುತ್ತು ತರುತ್ತಿದೆ. ವಾಹನಗಳು ಡಿಕ್ಕಿಯಾಗುವುದರಿಂದಲೂ ಜೀವಕ್ಕೆ ಕಂಟಕವಿದೆ. ಸವಾರರು ಕೂಡ ಗಾಯಗೊಂಡ ಉದಾಹರಣೆಗಳಿವೆ. ರಸ್ತೆಗಳ ಮಧ್ಯೆ ‘ಕೃತಕ ಸ್ಪೀಡ್ ಬ್ರೇಕರ್’ಗಳ ರೀತಿಯಲ್ಲಿರುವ ಬೀಡಾಡಿ ದನಗಳನ್ನು ಹಿಡಿದು ಬೇರೆಗೆ ಸಾಗಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ವರದಿ.ಶ್ರೀ ಜಯಪ್ಪ ಗೊರೇಬಾಳ