ಎಪ್ರಿಲ್ 09.ಸಿಂಧನೂರು ತಾಲೂಕ ವಿದ್ಯಾರ್ಥಿ ಕಾಂಗ್ರೆಸ್ (NSUI ) ವತಿಯಿಂದ ಶ್ರೀ ಬಸನಗೌಡ ಬಾದರ್ಲಿ ಅವರ ಮಾರ್ಗದರ್ಶನದಲ್ಲಿ RDCC ಬ್ಯಾಂಕ್ ನಿರ್ದೇಶಕರು ಹಾಗೂ ಕಾಂಗ್ರೆಸ್ ಮುಖಂಡರಾದ ಶ್ರೀ ಸೋಮನಗೌಡ ಬಾದರ್ಲಿ ಅವರ ಅಧ್ಯಕ್ಷತೇಯಲ್ಲಿ ತಾಲೂಕ NSUI ಉಸ್ತುವಾರಿಗಳಾದ ಶ್ರೀ ವೆಂಕನಗೌಡ ಗಿಣಿವಾರ ಅವರ ಉಪಸ್ಥಿತಿಯಲ್ಲಿ ಇಂದು NSUI ಸಂಸ್ಥಾಪನೆಯ ದಿನವನ್ನು ಆಚರಣೆ ಮಾಡಲಾಯಿತು.
ತಮ್ಮೆಲ್ಲರಿಗೂ ಎನ್ ಎಸ್ ಯು ಐ ಸಂಸ್ಥಾಪನ ದಿನದ ಶುಭಾಶಯಗಳು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ವಿದ್ಯಾರ್ಥಿ ವಿಭಾಗವಾಗಿದೆ ಇದನ್ನು 9 ಏಪ್ರಿಲ್ 1971 ರಂದು ಸ್ಥಾಪಿಸಲಾಯಿತು ಎನ್.ಎಸ್.ಯು.ಐ ವಿದ್ಯಾರ್ಥಿಗಳ ದ್ವನಿಯಾಗಿ ಮತ್ತು ಅವರ ಹಕ್ಕುಗಳಿಗಾಗಿ ಹೋರಾಡಲು ವೇದಿಕೆಯನ್ನು ನೀಡುವಲ್ಲಿ ಪ್ರಮುಖ ಪಾತ್ರವಹಿಸಿದೆ ಉತ್ತಮ ಕೆಲಸವನ್ನು ಮುಂದುವರಿಸಲು ಮತ್ತು ಯುವ ಮನಸುಗಳನ್ನು ಪ್ರೇರೇಪಿಸುವುದನ್ನು ಮುಂದುವರಿಸಿ ನ್ಯಾಯ ಸ್ವಾತಂತ್ರ್ಯ ಮತ್ತು ಸತ್ಯಕ್ಕಾಗಿ ದೇಹವು ಹೋರಾಟವನ್ನು ಮುಂದುವರಿಸಬೇಕು ಮತ್ತು ಯುವ ಮನಸುಗಳನ್ನು ಪ್ರೇರೇಪಿಸಲು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ್ ರಾಗಲಪರ್ವಿ ಅವರು ಹೇಳಿದರು
ಈ ಸಂಧರ್ಭದಲ್ಲಿ NSUI ನ ಸಂಸ್ಥಾಪಕರಾದ ಭಾರತದ ಮಾಜಿ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಈ ಸಮಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಕುಮಾರ್ ಜವಳಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ್ ರಾಗಲಪರ್ವಿ ಆರ್ ಡಿ ಸಿ ಸಿ ನಿರ್ದೇಶಕರಾದ ಸೋಮನಗೌಡ ಬಾದರ್ಲಿ ನಗರ ಯುವ ಘಟಕದ ಅಧ್ಯಕ್ಷರಾದ ಹಬೀಬ್ ಖಾಜ್ ಯುವ ಮುಖಂಡರಾದ ಮುನ್ನ ಬಾಯ್! NSUI ಪದಾಧಿಕಾರಿಗಳು, ಯೂತ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮುಖಂಡರು ಮಹಿಳೆಯರು ಹಾಜರಿದ್ದರು.