ಏಪ್ರಿಲ್ 10. ಸಿರುಗುಪ್ಪ ನಗರದ ಪತಂಗೆ ಬ್ಯಾಂಕ್ವೆಟ್ನ ಸಭಾಂಗಣದಲ್ಲಿ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತರಾದ್ಯ ಶಿವಾಚಾರ್ಯ ಶ್ರೀಗಳು ಶ್ರೀಶೈಲ ಪೀಠದ ಉಸ್ತುವಾರಿಯಲ್ಲಿ ಪಿನಾಕಿನಿ ಆಶ್ರಮದಲ್ಲಿ ನಿರ್ಮಾಣವಾಗುತ್ತಿರುವ ಕಲ್ಯಾಣ ಮಂಟಪದ ಪ್ರಗತಿಯ ಬಗ್ಗೆ ಗುರುಬಸವ ಮಠದ ಶ್ರೀಬಸವ ಭೂಷಣ ಸ್ವಾಮೀಜಿ, ಹಾಗೂ ಮುಖಂಡರೊಂದಿಗೆ ಚರ್ಚಿಸಿದರು.
ನಂತರ ಪಿನಾಕಿನಿ ಆಶ್ರಮಕ್ಕೆ ಭೇಟಿ ನೀಡಿ ಕಲ್ಯಾಣ ಮಂಟಪ ಕಟ್ಟಡ ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಿದ ಶ್ರೀಗಳು ಕಲ್ಯಾಣ ಮಂಟಪದ ಆಯವ್ಯಯದ ಬಗ್ಗೆ ಮಾಹಿತಿ ಪಡೆದುಕೊಂಡರು.
ಇಂತಹ ಬೃಹತ್ ಕಟ್ಟಡದ ಕಾಮಗಾರಿಯನ್ನು ಪದೇ ಪದೇ ಮಾಡಲಾಗುವುದಿಲ್ಲ ಆದ್ದರಿಂದ ನಿರ್ಮಾಣದ ಹಂತದಲ್ಲೇ ಮಂಟಪಕ್ಕೆ ಅತ್ಯಗತ್ಯ ವಸ್ತುಗಳನ್ನು ಅಳವಡಿಸುವುದರೊಂದಿಗೆ ನಮ್ಮ ಪೀಠದ ವತಿಯಿಂದ ತಾಲೂಕಿನ ಜನತೆಗೆ ಉತ್ತಮ ದರ್ಜೆಯ ಭವನ ಅಥವಾ ಮಂಟಪವನ್ನು ಅನುವು ಮಾಡಿಕೊಡಲಾಗುತ್ತಿದ್ದು, ಒಪ್ಪಂದದAತೆ ಗುತ್ತಿಗೆದಾರರು ಉತ್ತಮವಾಗಿ ನಿರ್ಮಿಸಿದ್ದಾರೆ.
ಇನ್ನುಳಿದ ಬಾಕಿ ಕೆಲಸಗಳಿಗಾಗಿ ಮುಂದಿನ ದಿನಗಳಲ್ಲಿ ಭಕ್ತರು ನೀಡುವ ದೇಣಿಗೆಯ ಮೂಲಕ ಸಂಗ್ರಹಿಸಿ ನಿರ್ಮಾಣ ಕಾರ್ಯವನ್ನು ಪರಿಪೂರ್ಣಗೊಳಿಸುವಂತೆ ಆಗಮಿಸಿದ್ದ ಮುಖಂಡರಿಗೆ ಹಾಗೂ ಉಸ್ತುವಾರಿಗಳಾದ ಬಿ.ಆರ್.ಚನ್ನಬಸವನಗೌಡ, ಶಂಭುಲಿAಗಯ್ಯ ಗಾಣದಾಳ್ ಅವರಿಗೆ ಸೂಚಿಸಿದರು.
ಇದೇ ವೇಳೆ ಗುತ್ತಿಗೆದಾರ ಮಹಾಲಿಂಗಯ್ಯ, ಮುಖಂಡರಾದ ಚೊಕ್ಕಬಸವನಗೌಡ, ಬಿ.ಎಮ್.ಯರಿಸ್ವಾಮಿ, ಬಿ.ಎಮ್.ಜಡಿಸ್ವಾಮಿ, ವೆಂಕಟರೆಡ್ಡಿ, ಗಿರೀಶ್ಗೌಡ, ಶಿವಶಂಕರ, ಇತರರು ಇದ್ದರ.
ವರದಿ.ಸಿ.ಖಾಜಾಮೋಹಿದ್ದೀನ್. ಸಿರುಗುಪ್ಪ