ಏಪ್ರಿಲ್ 11. ಸಿಂಧನೂರು ಇನ್ನೇನು ಕೆಲವೇ ದಿನಗಳು ಮಾತ್ರ ಚುನಾವಣೆ ಬಾಕಿ ಇದ್ದು ಏಪ್ರಿಲ್ 13ರಂದು ನಾಮಪತ್ರ ಸಲ್ಲಿಸಲು ಪ್ರಾರಂಭವಾಗಲಿದೆ ಮತ್ತು ಏಪ್ರಿಲ್ 20 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ ಬರುವ ತಿಂಗಳು ಅಂದರೆ ಮೇ ಹತ್ತಕ್ಕೆ ಚುನಾವಣೆ ನಡೆಯಲಿದ್ದು ಈ ಹಿನ್ನಲೆ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ಬಿಡುಗಡೆ ಮಾಡಿದೆ ಅದರಲ್ಲಿ ವಿಶೇಷವಾಗಿ ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಅತಿ ಹೆಚ್ಚು ಆಕಾಂಕ್ಷಿಗಳಿದ್ದು ಕೆಲವು ದಿನಗಳ ಹಿಂದೆ ಕಾಂಗ್ರೆಸ್ಸಿನ ಬಿಟ್ಟು ಬಿಜೆಪಿ ಸೇರ್ಪಡೆಗೊಂಡಿದ್ದ ಕೆ.ಕರಿಯಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಿದೆ
ನಮ್ಮ ಬಡವರ ಬಾರಕೋಲು ಡಿಜಿಟಲ್ ಸುದ್ದಿಯು ಕೆಲವು ದಿನಗಳ ಹಿಂದೆ ಕೆ ಕರಿಯಪ್ಪ ಅವರಿಗೆ ಟಿಕೆಟ್ ನೀಡಬಹುದು ಎಂದು ಸುದ್ದಿಯನ್ನು ಮಾಡಿತ್ತು ಅದೇ ರೀತಿ ಈ ದಿನ ಕೆ ಕರಿಯಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಿದೆ
ಆದರೆ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಆರರಿಂದ ಎಂಟು ಆಕಾಂಕ್ಷಿಗಳಿದ್ದು ಕಾಡ ಅಧ್ಯಕ್ಷ ಕೊಲ್ಲ ಶೇಷಗಿರಿ ರಾವ್ ಕೆಫೆಕ ಅಧ್ಯಕ್ಷ ಕೆ ವಿರುಪಾಕ್ಷಪ್ಪ ಉದ್ಯಮಿಗಳಾದ ರಾಜೇಶ್ ಹಿರೇಮಠ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಿವನಗೌಡ ಗೋರೆಬಾಳ ವಿರುಪಾಪುರ ಅಮರೆಗೌಡ ಕೆ ಮರಿಯಪ್ಪ ಮತ್ತು ಇತರ ಹೆಸರು ಕೇಳಿ ಬರುತ್ತಿತ್ತು ಆದರೆ ಇದೀಗ ತಾನೇ ಕೆ ಕರಿಯಪ್ಪ ಅವರಿಗೆ ಬಿಜೆಪಿ ಘೋಷಣೆ ಮಾಡಿದೆ
ಕೆ ಕರಿಯಪ್ಪ ಅವರ ಸಂಬಂಧಿ ಹಾಗೂ ಕೆಫೆಕ ಅಧ್ಯಕ್ಷರಾದ ಕೆ ವಿರುಪಾಕ್ಷಪ್ಪ ಅವರು ಸೇರಿದಂತೆ ಆಕಾಂಕ್ಷಿಗಳೆಲ್ಲರೂ ಒಗ್ಗಟ್ಟಾಗಿ ಚುನಾವಣೆ ಮಾಡಿದರೆ ಕೆ ಕರಿಯಪ್ಪ ಅವರು ಗೆಲ್ಲುವುದರಲ್ಲಿ ಎರಡನೆಯ ಮಾತಿಲ್ಲ ಎಂದು ಕೆಲವು ಕಾರ್ಯಕರ್ತರು ಮಾತನಾಡುತ್ತಿದ್ದಾರೆ ಆದರೆ ಸಾಕಷ್ಟು ಆಕಾಂಕ್ಷಿಗಳು ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿದ್ದು ಅವರೆಲ್ಲರೂ ಕೂಡ ನನಗೆ ಟಿಕೆಟ್ ನೀಡಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಕೆಲವು ಕಾರ್ಯಕರ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಾಗಾದರೆ ಆಕಾಂಕ್ಷಿಗಳೆಲ್ಲರೂ ಒಗ್ಗಟ್ಟಾಗಿ ಚುನಾವಣೆ ಮಾಡುತ್ತಾರ….? ಕೆ ಕರಿಯಪ್ಪ ಅವರು ಆಕಾಂಕ್ಷಿಗಳಲ್ಲರನ್ನೂ ಒಗ್ಗೂಡಿಸಿಕೊಂಡು ಕ್ಷೇತ್ರದಾದ್ಯಂತ ಪ್ರಚಾರ ಮಾಡಿ ಕೈಗೆ ಕೈ ಕೊಟ್ಟ ಕರಿಯಪ್ಪ ಕಮಲ ಅರಳಿಸುತ್ತಾರ ಗೆಲುವಿನ ನಗೆ ಬೀರಲಿದ್ದಾರಾ ಎಂದು ಕಾದುನೋಡಬೇಕಾಗಿದೆ