ರಾಯಚೂರು,ಏ.11 ನೊಂದಣಿ ಮತ್ತು ಮುದ್ರಾಂಕ ಇಲಾಖೆಯ ಮೂಲಕ ಕಾವೇರಿ-2.0 ತಂತ್ರಾಂಶವನ್ನು ಹಿರಿಯ ಉಪನೊಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ಮೇ.5ರಂದು ಅನುಷ್ಠಾನಗೊಳಿಸುವ ಹಿನ್ನಲೆಯಲ್ಲಿ ಏ.13ರಂದು ಸಂಜೆ 04:00 ಗಂಟೆಗೆ ಜಿಲ್ಲಾ ನೊಂದಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಿರಿಯ ಉಪನೊಂದಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ನಗರದ ಕನ್ನಡ ಭವನದಲ್ಲಿ ಕಾವೇರಿ-2.0 ತರಬೇತಿ ಆಯೋಜಿಸಲಾಗಿದೆ. ತರಬೇತಿಗೆ ನಾಗರೀಕರು, ವಕೀಲರು, ದಸ್ತಾವೇಜು ಬರಹಗಾರರು, ಬ್ಯಾಂಕ್ ಸಿಬ್ಬಂದಿಗಳು ಪಾಲ್ಗೊಳ್ಳಬೇಕೆಂದು ಹಿರಿಯ ಉಪನೊಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.