ಏಪ್ರಿಲ್ 12.ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷö್ಯತೆಯಿಂದಾಗಿ ಅಭಿವೃದ್ದಿ ಶೂನ್ಯವಾಗಿದಲ್ಲದೇ ಮೂಲಭೂತ ಸೌಲಭ್ಯಗಳ ಮರಿಚೀಕೆಯಾಗಿದ್ದು ಸಂಬಂದಿಸಿದ ಅಧಿಕಾರಿಗಳು ಪರಿಹರಿಸದಿದ್ದಲ್ಲಿ ಚುನಾವಣೆ ಬಹಿಷ್ಕರಿಸುವುದಾಗಿ ೩ ನೇ ವಾರ್ಡಿನ ಮಹಿಳೆಯರು, ವೃದ್ದರು, ಯುವಕರು ಸೇರಿ ದಿಢೀರ್ ಪ್ರತಿಭಟನೆಯ ಮೂಲಕ ಆಗ್ರಹಿಸಿದರು.
ವಾರ್ಡಿನ ಮಹಾದೇವಿ, ಕೆ.ಎಂ.ಸರ್ವಮಂಗಳಮ್ಮ ಮಾತನಾಡಿ ಸುಮಾರು ೧೦ ರಿಂದ ೧೫ ವರ್ಷಗಳಿಂದ ಊರಿನ ಕೆರೆಯು ನಿರುಪಯುಕ್ತವಾಗಿ ತ್ಯಾಜ್ಯ ಗಿಡಗಂಟೆಗಳು ಬೆಳೆದು ಗಲೀಜಿನಿಂದ ಗಬ್ಬನಾರುತ್ತಿರುವ ನೀರು ಶೇಖರಣೆಗೊಂಡಿದೆ.
ಕೆರೆಯ ದಡದ ಮೇಲೆ ವಾಸವಾಗಿರುವ ಸಾರ್ವಜನಿಕರು ಸ್ನಾನ ಗೃಹದ ನೀರು ನೇರವಾಗಿ ಕೆರೆಯ ಕೋಡಿಯಿಂದ ಪೋಲೀಸ್ ವಸತಿ ಗೃಹಗಳ ಕಡೆ ದಿನನಿತ್ಯ ಹರಿಯುತ್ತಿದೆ. ಮಳೆ ಬಂದರೆ ಸಾಕು ಚರಂಡಿಯು ರಸ್ತೆಯ ಮೇಲೆ ಹರಿದು ವಿಷಕಾರಿಕ ಕ್ರಿಮಿಕೀಟಗಳು ಮನೆಯೊಳಗೆ ನುಗ್ಗಿ ಕೆಲವು ಸಾರಿ ಅನಾಹುತಗಳನ್ನು ಮಾಡಿವೆ.
ಸಾಂಕ್ರಾಮಿಕ ರೋಗಗಳಾದ ಡೆಂಗ್ಯು, ಮಲೇರಿಯಾದಂತಹ ಮಾರಕ ರೋಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ವೃದ್ದರು ಮಕ್ಕಳಿಗೆ ತೊಂದರೆಯಾಗಿದೆ. ಪ್ರತಿ ಶ್ರವಣಮಾಸದಲ್ಲಿ ಇದೇ ಮಾರ್ಗವಾಗಿ ಗ್ರಾಮದ ಅಧಿದೇವತೆಗಳು ಗಂಗೆಸ್ಥಳದಿಂದ ಮೂಲಸ್ಥಳಕ್ಕೆ ಮೆರವಣಿಗೆ ನಡೆಸುತ್ತಿದ್ದು, ಇದೇ ಗಬ್ಬು ನಾರುತ್ತಿರುವ ಗಲೀಜು ರಸ್ತೆ ಮೇಲೆ ಭಕ್ತರು ನಡೆದು ಹೋಗುತ್ತಾರೆ. ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ಬೇಜವ್ದಾರಿಯಿಂದ ರಸ್ತೆ ಕಾಮಗಾರಿಗೆ ಬಂದಂತಹ ಅನುದಾನವನ್ನು ಬೇರೆಡೆ ಕಾಮಗಾರಿಗೆ ಬಳಸಿದ್ದಾರೆ ಎಂದು ದೂರಿದರು.
ವಾರ್ಡಿನ ನಿವಾಸಿಗಳಾದ ಅಲಿವೇಲಮ್ಮ, ಎಸ್.ಎನ್.ಶರಣಮ್ಮ , ಜೆ.ಸಿದ್ದಮ್ಮ, ಹುಬ್ಬಳ್ಳಿಈರಮ್ಮ, ಕೆ.ಎಂ.ವೀರೇಶಯ್ಯ ಸ್ವಾಮಿ, ಜಂಬಯ್ಯ, ಕೆ.ವೀರೇಶ್, ಕೆ.ಬಸವರಾಜ್, ವಿ.ರಮೇಶ್, ಬಸವ, ಚನ್ನನಗೌಡ, ಶಂಕ್ರಪ್ಪ.ಬಿ, ಗೋಡೆಚಿನ್ನಪ್ಪ, ಅನ್ನಪೂರ್ಣಮ್ಮ, ಬಸಮ್ಮ, ಜೆ.ಮುತ್ತಮ್ಮ, ಅರಳಿಗನೂರು ಬಸವರಾಜ್, ರತ್ಮಮ್ಮ, ವಿಶ್ವ, ಕೆ.ನಾಗೇಶ್, ಜೆ.ಶಾಂತಿ ಇತರರು ಇದ್ದರು