ರಾಯಚೂರು,ಏ.12 -ಏ.13 ರಿಂದ ಏ.20 ರವರೆಗೆ ಪ್ರತಿದಿನ ಬೆಳಿಗ್ಗೆ 11-00 ರಿಂದ 03-00 ಗಂಟೆಗೆ (2ನೇ ಶನಿವಾರ ಮತ್ತು 4ನೇ ಶನಿವಾರ ಹಾಗೂ ರಜೆ ದಿನಗಳನ್ನು ಹೊರತುಪಡಿಸಿ) ನಾಮಪತ್ರ ಸಲ್ಲಿಸಲು ಅವಕಾಶ ಇರುತ್ತದೆ.53–ರಾಯಚೂರು ಗ್ರಾಮೀಣ ಮತಕ್ಷೇತ್ರದ ನಾಮಪತ್ರಗಳ ಸ್ವೀಕೃತಿ ಪ್ರಕ್ರಿಯೆಯನ್ನು ತಹಸೀಲ್ ಕಛೇರಿ ರಾಯಚೂರು ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು 53- ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಏ.13ರಿಂದ ಏ.20ರ ವರೆಗೆ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದ್ದು, ಏ.21ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏ.24ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿರುತ್ತದೆ. ಉಳಿದಂತೆ ಮೇ.10ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ಮೇ.13ಕ್ಕೆ ಎಣಿಕೆ ಪ್ರಕ್ರಿಯೆ ಮತ್ತು ಚುನಾವಣೆಯ ಫಲಿತಾಂಶ ಹೊರಬೀಳಲಿದೆ.
53-ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ ಒಟ್ಟು 275 ಮತಗಟ್ಟೆ ಕೇಂದ್ರಗಳಿದ್ದು ಅದರಲ್ಲಿ 109775 ಗಂಡು ಮತದಾರರು, 113350 ಹೆಣ್ಣು ಮತದಾರರು, 54 ತೃತೀಯ ಲಿಂಗ ಮತದಾರರಿದ್ದು ಒಟ್ಟು 223179 ಮತದಾರರು ಇರುತ್ತಾರೆ. ಹಾಗೂ 25 ಸೇವಾ ಮತದಾರರು ಇರುತ್ತಾರೆ. ಇದರಲ್ಲಿ 53 ಸೂಕ್ಷ್ಮ ಮತಗಟ್ಟೆ ಕೇಂದ್ರಗಳಿರುತ್ತವೆ ಪ್ರಸಕ್ತ ಚುನಾವಣೆಯಲ್ಲಿ ವಿಶೇಷವಾಗಿ 80 ವರ್ಷ ಮೇಲ್ಪಟ್ಟ ವಯಸ್ಕ ಮತದಾರರಿಗೆ ಹಾಗೂ ಅಂಗವಿಕಲರಿಗೆ, ಕೋವಿಡ್ ದೃಢಪಟ್ಟ ಮತದಾರರು ಮನೆಯಿಂದಲೇ ಮತದಾನ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಅದರಂತೆ 53-ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಅಂಗವಿಕಲರು 3012 ಮತದಾರರಿದ್ದು ಎಲ್ಲರಿಗೂ 12ಆ ಫಾರ್ಮ್ ವಿತರಿಸಲಾಗಿರುತ್ತದೆ, 80 ವರ್ಷ ಮೇಲ್ಪಟ್ಟ ವಯಸ್ಕರು 3059 ಮತದಾರರಿದ್ದು ಎಲ್ಲರಿಗೂ 12ಆ ಫಾರ್ಮ್ ವಿತರಿಸಲಾಗಿರುತ್ತದೆ ಒಟ್ಟು 6071 ಮತದಾರರು ಇರುತ್ತಾರೆ.
ಚುನಾವಣೆ ಆಯೋಗದಿಂದ ಜನರಲ್ ವೀಕ್ಷಕರು ನೇಮಕಗೊಂಡಿದ್ದು ಅದೇ ರೀತಿಯಲ್ಲಿ ಎಕ್ಸ್ಪೆಂಡೇಚರ್ ವೀಕ್ಷಕರು ಕೆ.ಕೆ.ಕೃಷ್ಣಪ್ರಸಾದ್ ಇವರು ನೇಮಕಗೊಂಡಿರುತ್ತಾರೆ. ಹಾಗೂ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಶಾಂತಿಯುತ, ಸುವ್ಯವಸ್ಥಿತ, ಕಾನೂನಿನ ಅಡಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಲು ಸಹಕಾರಿಯಾಗುವರು.
ಚುನಾವಣೆ ಕೆಲಸಗಳ ಪೂರ್ವ ತಯಾರಿಯಾಗಿ ವಿವಿಧ ತಂಡಗಳನ್ನು ರಚಿಸಲಾಗಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಚುನಾವಣೆ ಪ್ರಕ್ರಿಯೆ ನಡೆಸಲು 5-ಎಸ್.ಎಸ್.ಟಿ, 01-ವಿವಿಟಿ, 6 ಎಫ್.ಎಸ್.ಟಿ, 03 ವಿಎಸ್ಟಿ, ಅಕೌಂಟಿಂಗ್ ಮತ್ತು ಎಇಒ ತಂಡಗಳಿದ್ದು ಮತ್ತು ಸೆಕ್ಟರ್ ಅಫೀಸರ್ರನ್ನಾಗಿ 22 ತಂಡಗಳನ್ನು ರಚಿಸಲಾಗಿರುತ್ತದೆ ಎಂದು 53- ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.