ರಾಯಚೂರು,ಏ.13(ಕವಾ):- ಭಾರತ ದೇಶವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಈ ದೇಶದಲ್ಲಿ ಪ್ರತಿಯೊಬ್ಬರಿಗೂ ಮತದಾನ ಮಾಡುವ ವಿಶೇಷವಾದ ಹಕ್ಕನ್ನು ನೀಡಲಾಗಿದೆ. ದೇಶವನ್ನು ಉತ್ತಮವಾಗಿ ಹಾಗೂ ಸಧೃಡವಾಗಿ ನಿರ್ಮಾಣ ಮಾಡಲು ಪ್ರತಿಯೊಬ್ಬರು ಮತ ಚಲಾಯಿಸುವುದು ಅಗತ್ಯವೆಂದು ಐಇಸಿ ಸಂಯೋಜಕ ಧನರಾಜ್ ಅವರು ನರೇಗಾ ಕೂಲಿಕಾರರಿಗೆ ತಿಳಿಸಿದರು.
ಅವರು ಏ.13ರಿ(ಗುರುವಾರ) ತಾಲೂಕಿನ ಮಟಮಾರಿ ಗ್ರಾಮ ಪಂಚಾಯತಿಯಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಸ್ವಿಪ್ ಚಟುವಟಿಕೆಯ ಅಂಗವಾಗಿ, ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೆರೆ ಕೆಲಸ ನಿರ್ವಹಿಸುವ ಕೂಲಿಕಾರರಿಗೆ, ಮತದಾನದ ಮಹತ್ವವನ್ನು ಅರಿಯಲು ಸ್ವಿಪ್ ಚಟುವಟಿಕೆಯನ್ನು ಉದ್ದೇಶಿಸಿ ಮಾತನಾಡಿದರು.
18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಭಾರತದ ಪ್ರಜೆಗೆ ಮತ ಚಲಾಯಿಸುವ ನೀಡಲಾಗಿದ್ದು, ಸಾಮಾನ್ಯವಾಗಿ ಚುನಾವಣೆ ಗುಪ್ತ ಮತದಾನ ಪದ್ಧತಿ ಮೂಲಕ ನಡೆಯುವಂತಹದ್ದು, ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ರೂಪಿಸಿರುವ ವ್ಯವಸ್ಥೆ ಇದಾಗಿದೆ. ಇಂತಹ ಅತ್ಯುತಮ ವ್ಯವಸ್ಥೆಯಲ್ಲಿ ಭಾರತಿಯ ಪ್ರಜೆಗಳು ಪ್ರಭುದ್ಧತೆಯಿಂದ ಅಮೂಲ್ಯವಾದ ಮತವನ್ನು ಮೇ.10 ರಂದು ತಪ್ಪದೇ ಮತ ಚಲಾಯಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಾರದಾ ಕಾರ್ಯದರ್ಶಿ, ಬಿ.ಎಪ್.ಟಿ, ಗ್ರಾ.ಪಂ ಸಿಬ್ಬಂದಿ ಮತ್ತು ಕೂಲಿಕಾರರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.