ಏಪ್ರಿಲ್ 15. ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟದಿಂದ ಸಿಂಧನೂರು ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132 ನೆಯ ಜಯಂತೋತ್ಸವದ ಕಾರ್ಯಕ್ರಮದಲ್ಲಿ ಟಿಯುಸಿಐ ರಾಜ್ಯಾಧ್ಯಕ್ಷರಾದ, ಹಾಗೂ ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷದ ಮುಖಂಡರಾದ ಆರ್. ಮಾನಸಯ್ಯ ನವರು ಮಾತನಾಡಿದರು. ಅವರು, ಸಂಘ ಪರಿವಾರದ ಸಾವರ್ಕರ್ ವಿರುದ್ಧ, ಪ್ರಜಾಪ್ರಭುತ್ವವಾದಿ ಅಂಬೇಡ್ಕರ್ ಪರವಾಗಿ ಮತ ನೀಡಬೇಕೆಂದರು. ಹಾಗೆಯೇ ಮನು ಧರ್ಮ ಶಾಸ್ತ್ರದ ವಿರುದ್ಧ, ಸಂವಿಧಾನದ ಪರ ಕೆಲಸ ಮಾಡುವ ಶಕ್ತಿಗಳಿಗೆ ಮತ ಹಾಕಬೇಕೆಂದರು. ಜಾತಿವಾದದ ವಿರುದ್ಧ, ಜಾತಿ ನಿರ್ಮೂಲನೆಗಾಗಿ ಹೋರಾಡುವ ಶಕ್ತಿಗಳ ಪರ ಮತ ಹಾಕಬೇಕೆಂದರು. ಹಾಗೆಯೇ ಆರ್ಥಿಕ ಮೀಸಲಾತಿ ವಿರುದ್ಧ, ಸಾಮಾಜಿಕ ಮೀಸಲಾತಿ ಪರವಾಗಿ, ಈ ಮೀಸಲಾತಿಯ ಅನುಷ್ಠಾನಕ್ಕಾಗಿ ಮುಂದಾಗುವ ಶಕ್ತಿಗಳ ಪರ ಮತ ಚಲಾಯಿಸಬೇಕೆಂದರು. ಕೊನೆಯದಾಗಿ, ಸಾವರ್ಕರನ್ನು ಸೋಲಿಸಿ! ಅಂಬೇಡ್ಕರ್ ರನ್ನು ಗೆಲ್ಲಿಸಿ! ಹಿಂದು ರಾಷ್ಟ್ರವನ್ನು ಸೋಲಿಸಿ! ಇಂಡಿಯಾ ದೇಶವನ್ನು ಗೆಲ್ಲಿಸಿ! ಎಂದು ಕರೆ ನೀಡಿದರು.
ಮೀಸಲಾತಿ ಹೆಚ್ಚಿಳ,
ಒಳಮಿಸಲಾತಿ ಜಾರಿ ಎನ್ನುವುದು ಚುನಾವಣೆಯ ತಂತ್ರ ಮಾತ್ರ ಆಗಿದೆ. ಜಾರಿಗೆ ಆಗುವುದು ಅಷ್ಟು ಸುಲಭದ ಮಾತಲ್ಲ, ಲೋಕಸಭೆ ಹಾಗೂ ಸಂವಿಧಾನದ ಪೀಠದಿಂದ ಅನುಮೋದನೆ ಆಗಬೇಕು.ಕೇವಲ 3 % ಇರುವ ವರ್ಗಕ್ಕೆ 10 % ಮೀಸಲಾತಿ ಜಾರಿಗೆ ಮಾಡಿರುವುದು ಜೊತೆಗೆ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ರದ್ದು ಪಡಿಸಿದ್ದು ಖಂಡನೆ ಎಂದರು
ಮುಖ್ಯಅತಿಥಿಗಳಾಗಿ ಪೀರಬಾಷ ಶಂಕರವಾಲೇಕರ್ ವಿರುಪಮ್ಮ,ಸೇರಿದಂತೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಆರ್ ಬೋನವೆಂಚರ್ ಮಾತನಾಡಿದರು. ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ಆರ್ ಸಿಎಪ್ ನಿಂದ ಕ್ರಾಂತಿಕಾರಿ ಹಾಡುಗಳ ಮೂಲಕ ಜಯಂತಿಗೆ ಹೆಚ್ಚು ಮೇರಗು ತಂದು ಕೊಟ್ಟರು. ಪ್ರಾಸ್ತಾವಿಕ ಒಕ್ಕೂಟದ ಎಂ ಗಂಗಾಧರ, ನೀರೂಪಣೆ ನಿರುಪಾದಿ ಸಾಸಲಮರಿ ನೆರವೇರಿಸಿದರು.
ಡಿ.ಹೆಚ್.ಕಂಬಳಿ,ಮಾಬುಸಾಬ್ ಬೆಳ್ಳಟ್ಟಿ,ನಾರಾಯಣ ಬೆಳಗುರ್ಕಿ,ರಾಮಣ್ಣ ಗೋನವಾರ,ಕೆ.ಮರಿಯಪ್ಪ ಸುಕಾಲಪೇಟೆ,ಆರ್ ಹುಚ್ಚರೆಡ್ಡಿ,ಆದೇಶ ನಗನೂರು,ಸೇರಿದಂತೆ ಒಕ್ಕೂಟದ ಸಂಚಾಲಕರು ಹಾಗೂ ನೂರಾರು ಸಂಖ್ಯೆಯಲ್ಲಿ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಎಂ.ಗಂಗಾಧರ
ಸಂಚಾಲಕರು ದಲಿತ ಅಲ್ಪಸಂಖ್ಯಾತ
ಶೋಷಿತ ಸಮುದಾಯಗಳ ಒಕ್ಕೂಟ ಸಿಂಧನೂರು.