ರಾಯಚೂರು,ಏ.15(ಕವಾ):- 2022-23ನೇ ಸಾಲಿನ ಬೇಸಿಗೆ ಹಂಗಾಮಿ ಜಿಲ್ಲೆಯಲ್ಲಿ ಭತ್ತದ ಬೆಳೆಯನ್ನು ಬೆಳೆದಿದ್ದು, ಇನ್ನು ಕೆಲವು ದಿನಗಳಲ್ಲಿ ಕಟಾವು ಮಾಡಲಾಗುವುದೆ, ರೈತರು ತಮ್ಮ ಹೊಲದಲ್ಲಿ ಭತ್ತವನ್ನು ಕಟಾವು ಮಾಡಿದ ನಂತರ ಭತ್ತದ ಹುಲ್ಲುನ್ನು ಸುಡದೇ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಭತ್ತದ ಹುಲ್ಲನ್ನು ಎರೆಹುಳು ಗೊಬ್ಬರ ತಯಾರಿಸಲು ಬಳಸುವುದು, ಜಾನುವಾರುಗಳಿಗೆ ಮೇವಾಗಿ ಬಳಸಬಹುದು, ಬೆಲರ್ ಮುಖಾಂತರ ಹುಲ್ಲನ್ನು ಕಟ್ಟುವುದು ಹೀಗೆ ಮಾಡಿ ಮುಂದಿನ ದಿನಗಳಲ್ಲಿ ಬಳಸಲು ಹಾಗೂ ಬೇಡಿಕೆ ಇರುವ ಸ್ಥಳಗಳಿಗೆ ಸಲಿಸಾಗಿ ಸಾಗಿಸಬಹುದು, ಕಾರ್ಡ್ ಬೋರ್ಡ್ ತಯಾರಿಸಲು, ಮಾನವಿ ಹಣ್ಣು ಕಟ್ಟುವಿಕೆಗೆ, ಭೂಮಿಯಲ್ಲಿ ಸೇರಿಸಿ ಮಣ್ಣಿನ ಫಲವತ್ತತೆ ಹೆಚ್ಚಿಸುವುದು, ಬರಗಾಲ ಸಂಭವಿಸಿದ್ದಲ್ಲಿ ಜಾನುವಾರುಗಳಿಗೆ ಮೇವಾಗಿ ಉಪಯೋಗಿಸಬಹುದು. ಈಗಿನ ಪರಿಸ್ಥಿತಿಯಲ್ಲಿ ಭತ್ತದ ಹುಲ್ಲು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುವುದರಿಂದ ರೈತರಲ್ಲಿ ವಿನಂತಿಸುವುದೇನಂದರೇ ಭತ್ತವನ್ನು ಕಟಾವು ಮಾಡಿದ ನಂತರ ಭತ್ತದ ಹುಲ್ಲನ್ನು ಸುಡದೆ ತಮ್ಮ ಅನುಕೂಲಕ್ಕಾಗಿ ಮೇಲಿನಂತೆ ಉಪಯೋಗಿಸಿಕೊಳ್ಳಲು ರೈತರಲ್ಲಿ ವಿನಂತಿಸಿದೆನೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.