ಏಪ್ರಿಲ್ 16.ಸಿಂಧನೂರು ರೈತ-ಕಾರ್ಮಿಕ-ಮಹಿಳಾ, ಅಸಂಘಟಿತ ಕೃಷಿ-ಕೂಲಿ ಕಾರ್ಮಿಕ, ದಲಿತಪರ, ಅಲ್ಪಸಂಖ್ಯಾತ ಮತ್ತು ವಿದ್ಯಾರ್ಥಿ ಸಂಘಟನೆಗಳ ಒಮ್ಮತದ ಅಭ್ಯರ್ಥಿಯಾಗಿ ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಸಿಪಿಐ(ಎಂಎಲ್)ರೆಡ್ ಸ್ಟಾರ್ ಪಕ್ಷದ ಮಾಬುಸಾಬ ಬೆಳ್ಳಟ್ಟಿ ಸ್ಪರ್ದೆ.
ಸಿಂಧನೂರು ವಿಧಾನಸಭಾ ಚುನಾವಣೆ ಒಳಗೊಂಡಂತೆ ರಾಜ್ಯದಲ್ಲಿ ಕೋಮುವಾದಿ ಬಿಜೆಪಿ ಸರಕಾರವನ್ನು ತೊಲಗಿಸಲು ಹಾಗೂ ನಾವು ಜ್ಯಾತ್ಯಾತೀತರೆಂದು ಮತದಾರರಿಗೆ ಮಂಕು ಬೂದಿ ಎರಚುವ ಜೆಡಿಎಸ್ ಹಾಗೂ ಕಾಂಗ್ರೇಸ್ ಪಕ್ಷಗಳಿಂದ ರಾಜ್ಯದ ಅಭಿವೃದ್ಧಿಯಾಗಲಿ, ರೈತ-ಕಾರ್ಮಿಕ ಮಹಿಳಾ, ಅಲ್ಪಸಂಖ್ಯಾತ, ದಲಿತ, ವಿದ್ಯಾರ್ಥಿ-ಯುವಜನತೆಯ ಅಭಿವೃದ್ಧಿ ವಿಚಾರದ ಕುರಿತು ಅಥವಾ ಯಾವುದೇ ಜನಪರ ಯೋಜನೆಗಳನ್ನು ಜಾರಿಗೊಳಿಸದೆ, ನಿತ್ಯ ಬೆಲೆ ಏರಿಕೆ, ಕೋಮು ಗಲಭೆ, ಜಾತಿ-ಧರ್ಮದ ರಾಜಕೀಯ ಮಾಡುತ್ತ ಚುನಾವಣೆ ಹತ್ತಿರ ಬರುತ್ತಿದ್ದಂತೆ ಟಿಕೆಟ್ ದೊರೆಯದಿದ್ದರೆ ಕಾಂಗ್ರೇಸ್ನಿಂದ, ಬಿಜೆಪಿಗೆ, ಬಿಜೆಪಿಯಿಂದ ಜೆಡಿಎಸ್ಗೆ ಪಕ್ಷಾಂತರ ಮಾಡುವುದು ಬಿಟ್ಟರೆ ಬೇರೇನು ಇಲ್ಲಾ. ಅದಕ್ಕಾಗಿ ಸಿಂಧನೂರಿನಲ್ಲಿ ಪರ್ಯಾಯ ಶಕ್ತಿ ಅಥವಾ ನಮ್ಮದೇ ಅಭ್ಯರ್ಥಿ ಆರಿಸಿ ತರುವ ನಿಟ್ಟಿನಲ್ಲಿ ಸಮಾನ ಮನಸ್ಕ ಪಕ್ಷಗಳು ಹಾಗೂ ಸಂಘ-ಸಂಸ್ಥೆಗಳ ಪ್ರಮುಖ ಮುಖಂಡರ ಸಭೆಯನ್ನು ಸಿಂಧನೂರಿನ ನಗರದಲ್ಲಿ ಆಯೋಜಿಸಲಾಗಿತ್ತು. ಈ ಸಭೆಗೆ ಎಲ್ಲರ ಅಪೇಕ್ಷೇಯ ಮೇರೆಗೆ ಸಿಪಿಐ(ಎಂಎಲ್)ರೆಡ್ ಸ್ಟಾರ್ ಪಕ್ಷದ ಪಾಲಿಟ್ ಬ್ಯೂರೋ ಸದಸ್ಯರಾದ, ಆರ್.ಮಾನಸಯ್ಯರವರನ್ನು ಸಭೆಗೆ ಕರೆಸಿ, ಅವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿ ಸುದೀರ್ಘವಾಗಿ ಸುಮಾರು 3 ಗಂಟೆಗಳ ಕಾಲ ಚರ್ಚಿಸಿ ಅಂತಿಮವಾಗಿ ಎಲ್ಲರ ಒಮ್ಮತದ ನಿರ್ಧಾರದ ಮೇರೆಗೆ ಸಿಪಿಐ(ಎಂಎಲ್)ರೆಡ್ ಸ್ಟಾರ್ ಪಕ್ಷದ ತಾಲೂಕು ಕಾರ್ಯದರ್ಶಿ ಮಾಬುಸಾಬ ಬೆಳ್ಳಟ್ಟಿಯವರನ್ನು ಆಯ್ಕೆಗೊಳಿಸಿ ದಿನಾಂಕ : 19.04.2023 ರಂದು ನಾಮಪತ್ರ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.
ಎಂ.ಗಂಗಾಧರ
ರಾಜ್ಯ ಸಮಿತಿ ಸದಸ್ಯರು ಸಿಪಿಐ(ಎಂಎಲ್)ರೆಡ್ ಸ್ಟಾರ್