ಏಪ್ರಿಲ್.17.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ ಹಾಗೂ ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ ಸಮ್ಮುಖದಲ್ಲಿ ಬಹುಜನ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಭೀಮೇಶ ಕವಿತಾಳ ಮತ್ತು ಕಾಂಗ್ರೆಸ್ ಯುವ ಮುಖಂಡ ಶರಣಪ್ಪ ಗಿಣಿವಾರ ನೇತೃತ್ವದಲ್ಲಿ ಅನೇಕ ಯುವಕರು ಮಂಗಳವಾರ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಗೊಂಡರು.
ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಭೀಮೇಶ ಕವಿತಾಳ ಸೇರಿದಂತೆ ಯುವಕರಾದ ಮೌನೇಶ ಬುದ್ದಿನ್ನಿ, ಸಿದ್ದಪ್ಪ ಎಸ್, ವಿಜಯಕುಮಾರ ಅಂಬಾಮಠ, ಬಾಲಸ್ವಾಮಿ ಆದಿಮನಿ, ನಿಂಗಪ್ಪ ಆದಿಮನಿ, ನಾಗರಾಜ ಸುಕಾಲಪೇಟೆ, ಹನುಮಂತ ಕಟ್ಟಿಮನಿ, ಜಂಬಪ್ಪ ಕಟ್ಟಿಮನಿ, ದೇವಪ್ಪ ಕನ್ನಾಂಪೇಟೆ, ಹುಲುಗಪ್ಪ ಕಿಲ್ಲಾರಟ್ಟಿ, ಹುಸೇನಪ್ಪ ಮಸ್ಕಿ, ನಾಗಮೂರ್ತಿ ಬಡಿಗೇರ್, ಹನುಮಂತ ಆದಿಮನಿ, ಅಮರೇಶ ಕಿಲ್ಲಾರಟ್ಟಿ, ಪ್ರದೀಪ್, ಖಾಸಿಂಸಾಬ ಏಳುರಾಗಿಕ್ಯಾಂಪ್, ಅಮರಪ್ಪ ಕಿಲ್ಲಾರಟ್ಟಿ, ಚೌಡಪ್ಪ ಕನ್ನಾಂಪೇಟೆ, ಅಮರಪ್ಪ ಕಿಲ್ಲಾರಟ್ಟಿ, ಹನುಮಂತ ಯರದಿಹಾಳ, ರಾಮಣ್ಣ ಕನ್ನಾಂಪೇಟೆ, ದುರುಗಪ್ಪ, ಪವಾಡೆಪ್ಪ, ಹುಲುಗಪ್ಪ ಮತ್ತಿತರರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ ಹಾಗೂ ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ ಎಲ್ಲರಿಗೂ ಪಕ್ಷದ ಶಾಲು ಹಾಕಿ ಸ್ವಾಗತಿಸಿಕೊಂಡು, ಪಕ್ಷ ಸಂಘಟನೆಗೆ ಒತ್ತು ಕೊಟ್ಟು ಈ ಬಾರಿ ತಾಲ್ಲೂಕಿನಲ್ಲಿ ಹಂಪನಗೌಡ ಬಾದರ್ಲಿ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದರು.
ನಂತರ ಯುವ ಮುಖಂಡ ಭೀಮೇಶ ಕವಿತಾಳ ಮಾತನಾಡಿ ಸಿಂಧನೂರು ತಾಲ್ಲೂಕಿನಲ್ಲಿ ಶಾಸಕ ವೆಂಕಟರಾವ್ ನಾಡಗೌಡರು ಅಭಿವೃದ್ಧಿ ಮಾಡಿರುವುದಕ್ಕಿಂತ ಫರ್ಸಂಟೇಜ್ ಪಡೆದು ಕಳಪೆ ಕಾಮಗಾರಿ ಮಾಡಿರುವುದೇ ಹೆಚ್ಚು. ಆದ್ದರಿಂದ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ತಿರಸ್ಕರಿಸಿ, ಹಂಪನಗೌಡ ಬಾದರ್ಲಿ ಅವರಿಗೆ ಮತ ಹಾಕಿ ಗೆಲ್ಲಿಸಬೇಕು ಎಂದರು.
ಕಾಂಗ್ರೆಸ್ ಮುಖಂಡರಾದ ಎನ್.ಅಮರೇಶ, ಯುವ ಮುಖಂಡರಾದ ಶರಣಪ್ಪ ಗಿಣಿವಾರ, ಮೌನೇಶ ಶ್ರೀಪುರಂಜಂಕ್ಷನ್, ವಾಗೇಶ ಕೋಟೆ, ಬಸವರಾಜ ಪಾಟೀಲ್ ಇದ್ದರು.