ಎಪ್ರಿಲ್ 20.ಸಿರುಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಿಂದ ಹೊರಟ ಪೋಲೀಸ್ ಇಲಾಖೆ ಮತ್ತು ಅರೆಸೇನಾ ಪಡೆಯಿಂದ ಗುರುವಾರ ಸಾಯಂಕಾಲ ಪಥಸಂಚಲನ ಜಾಥಾಕ್ಕೆ ಸಿರುಗುಪ್ಪ ವಿಭಾಗದ ಉಪಾಧೀಕ್ಷಕ ವೆಂಕಟೇಶ್ ಅವರು ಚಾಲನೆ ನೀಡಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಿಸ್ತುಬದ್ದವಾಗಿ ಪಥಸಂಚಲನದಲ್ಲಿ ಸಾಗುತ್ತಿರುವ ಯೋದರಿಗೆ ಹಾಗೂ ಪೋಲೀಸ್ ಸಿಬ್ಬಂದಿಗಳಿಗೆ ಪಟ್ಟಣದ ಮುಖ್ಯ ರಸ್ತೆಯಿಂದ ಮುಖಾಂತರ ಬಸ್ ಸ್ಟ್ಯಾಂಡ್, ನೀಲಕಂಠ ದೇವಸ್ಥಾನ, ಎದುರು ಬಸಣ್ಣ ವೃತ್ತದ ಮೂಲಕ, ಕಾಡಸೀದ್ದೇಶ್ವರ ದೇವಸ್ಥಾನ ರಸ್ತೆಯ ಮುಖಾಂತರ, ವಾಲ್ಮೀಕಿ ನಗರದವಡ್ಡರಕಟ್ಟೆ ಮುಖಾಂತರ , ಹುಚ್ಚುರೇಶ್ವರ ದೇವಸ್ಥಾನ ರಸ್ತೆಯ ಮುಖಾಂತರ, ಮನ್ಸೂರಿ ಮಸೀದಿ ರಸ್ತೆಯ ಮುಖಾಂತರ, ನಾಡಕಚೇರಿ ರಸ್ತೆಯಮುಖಾಂತರ , ಶ್ರೀ ದ್ಯಾವಮ್ಮ ಗುಡಿ ರಸ್ತೆ ಮುಖಾಂತರ, ಪೊಲೀಸ್ ಠಾಣೆಗೆ ಬಂದು ಸೇರಿದರು.
ಇದೇ ವೇಳೆ ಅರೆಸೇನಾ ಪಡೆಯ ಅಸ್ಟೆಂಟ್ ಕಮಾಂಡೋ ರಾಜಕುಮಾರ್ ಸಿರುಗುಪ್ಪ ಸಿ.ಪಿ.ಐ ಯಶವಂತ ಬಿಸ್ನಳ್ಳಿ, ತೆಕ್ಕಲಕೋಟೆ ಸಿ.ಪಿ.ಐ ಸುಂದ್ರೇಶ್ ಹೊಳೆಣ್ಣನವರ್, ಪಿ.ಎಸ್.ಐಗಳಾದ ಅರುಣ್ ಕುಮಾರ್, , ವೆಂಕಟೇಶನಾಯಕ, ಸಂಗಮೇಶ್ವರಿ, ರಾಘವೇಂದ್ರ ಆಚಾರಿ ಇನ್ನಿತರ ಸಿಬ್ಬಂದಿಗಳು ಇದ್ದರು.