ಏಪ್ರಿಲ್ 21.ಕಲ್ಯಾಣ ಕರ್ನಾಟಕ ಅತ್ಯಂತ ಹೆಚ್ಚು ತಾಪಮಾನವನ್ನು ಹೊಂದಿರುವ ಪ್ರದೇಶ.ಈ ಭಾಗದಲ್ಲಿ ಸುಮಾರು 37 ಡಿ.ಸೆ.41ಡಿ.ಸೆಲ್ಸಿಯಸ್ ನಷ್ಟು ಉಷ್ಣಾಂಶ ಹೆಚ್ಚಾಗುತ್ತಾ ಹೊರಟಿದೆ.ಈ ವರ್ಷ ಇದೇ ಸಮಯದಲ್ಲಿ ಚುನಾವಣೆಗಳು ಘೋಷಣೆಯಾಗಿದ್ದರಿಂದ ಈ ಭಾಗದ ಜನರು ಬಿಸಿಲಿನ ತಾಪಕ್ಕೆ ಜನರು ತತ್ತರಿಸುತ್ತಿದ್ದಾರೆ.ಈ ಬಿಸಿಲಿನ ತಾಪವನ್ನು ಸ್ವಲ್ಪ ಮಟ್ಟಿಗೆ ತಣ್ಣಗಾಗಿಸಲು ಅಥವಾ ಜನರ ಬಾಯಾರಿಕೆಯನ್ನು ನೀಗಿಸಲು ಸಂಘ ಸಂಸ್ಥೆಗಳು ಅಲ್ಲಲ್ಲಿ ಕುಡಿಯುವ ನೀರಿನ ಅರವಟ್ಟಿಗೆಗಳನ್ನು ನಿರ್ಮಿಸಲಾಗಿದೆ.ಆದರೂ ಬಿಸಿಲಿನ ತಾಪಮಾನ ತಗ್ಗುತ್ತಿಲ್ಲ.
ಇಂತಹ ದಿನಗಳಲ್ಲಿ ಮೂಕ ಪ್ರಾಣಿ ಪಕ್ಷಿಗಳ ಈ ಬಿಸಿಲಿನ ತಾಪವನ್ನು ಹೇಗೆ ತಡೆದುಕೊಳ್ಳುತ್ತವೆ,ಜೀವನವನ್ನು ಹೇಗೆ ಸಾಗಿಸುತ್ತವೆ ಎಂದು ಪರಿಸರ ಪ್ರೇಮಿಗಳಿಗೆ ಮನನೊಂದಂತಾಗಿದೆ ಇದನ್ನು ಮನಗೊಂಡು ವನಸಿರಿ ಫೌಂಡೇಶನ್ ತನ್ನ ಸ್ವಂತ ಖರ್ಚಿನಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಪಕ್ಷಿಗಳಿಗಾಗಿಯೇ ಸುಮಾರು 10ಸಾವಿರ ನೀರಿನ ಅರವಟ್ಟಿಗಳ ಮಡಿಕೆಗಳನ್ನು ಮಾಡಿ ಈ ಭಾಗದ ಎಲ್ಲಾ ಜಿಲ್ಲೆಗಳಿಗೆ ಉಚಿತವಾಗಿ ಕಳಿಸಿ ಸ್ಥಳೀಯ ಪರಿಸರ ಪ್ರೇಮಿಗಳಿಂದ ಅವುಗಳನ್ನು ಕಟ್ಟಿಸುವ ಪ್ರಯತ್ನ ಮಾಡುತ್ತಿದೆ.ಈ ಮೇಲಿನ ಚಿತ್ರದಂತೆ ಮನುಷ್ಯ ತನ್ನ ಜೀವನಕ್ಕಾಗಿ ಗಿಡಮರಗಳನ್ನು ಕಡಿಯಲು ಹೊರಟಾಗ ಮರವೊಂದು ನನ್ನನ್ನು ಕೊಲ್ಲದಿರು ನಾ ನಿನ್ನ ಉಸಿರು, ನಾನು ನಿನಗೆ ಆಶ್ರಯವನ್ನು ಕೊಡುವೆ ನಾನು ಹಸಿರು ನಾನು ನಿನ್ನ ಗೆಳೆಯ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿರುವಾಗ ಮನುಷ್ಯ ತನ್ನ ಸ್ವಾರ್ತಕ್ಕಾಗಿ ಬೃಹದ್ದಾಕಾರವಾಗಿ ಬೆಳದೆ ಮರವನ್ನು ಕಡಿದು ಸದುಪಯೋಗ ಪಡೆದುಕೊಳ್ಳುತ್ತಾನೆ.ಕೆಲವು ವರ್ಷಗಳು ಕಳೆದ ನಂತರ ಮಳೆ ಬೆಳೆ ಇಲ್ಲದೇ ಬಿಸಿಲಿನ ತಾಪವನ್ನು ತಾಳಲಾರದೆ ಮನುಷ್ಯ ವಿಶ್ರಾಂತಿ ಪಡೆಯಲು ಗಿಡಮರಗಳನ್ನು ಹುಡುಕುತ್ತಾನೆ ಮನುಷ್ಯನ ಅತಿ ಆಸೆಯಿಂದ ಇಂದು ಸೂರ್ಯ ಕೂಡ ಮನುಷ್ಯನನ್ನು ಸುಡಲು ಬೆನ್ನು ಬಿದ್ದಿದ್ದಾನೆ ಸೂರ್ಯ ಮನುಷ್ಯನಿಗೆ ಹೇಳುತ್ತಾನೆ ನಿನಗೆ ಉಸಿರು ಕೊಟ್ಟ ನನ್ನ ಹಸಿರಿನ ಗೆಳೆಯ (ಗಿಡಮರ) ನನ್ನು ಕೊಂದ ಪಾಪಿ ನೀನು ನಿನ್ನನ್ನು ಸುಡದೆ ಬಿಡನೆಂದು ಸೂರ್ಯ ಇಂದು ತನ್ನ ಉಗ್ರರೂಪ ತಾಳಿದ್ದಾನೆ ಆದ್ದರಿಂದ ಈ ಭಾಗದಲ್ಲಿ ತಾಪಮಾನ ಹೆಚ್ಚಾಗಿದೆ.
ಈ ಒಂದು ರೇಖಾಚಿತ್ರ ನಮ್ಮ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ರೇಖಾಚಿತ್ರದ ಮೂಲಕವಾದರು ಜನರು ಅರ್ಥಮಾಡಿಕೊಳ್ಳಬೇಕು. ದಯವಿಟ್ಟು ಈ ಭಾಗದ ಪರಿಸರ ಪ್ರೇಮಿಗಳು ತಮ್ಮ ಮನೆಯ ಮೇಲ್ಚಾವಣಿ ಮೇಲೆ ತೋಟದ ಗಿಡಮರಗಳಲ್ಲಿ,ಆವರಣದ ಗಿಡಮರಗಳಿಗೆ ಒಂದು ಮಣ್ಣಿನ ಮಡಿಕೆ ಅಥವಾ ನಿಮಗೆ ನಿರುಪಯುಕ್ತವಾದಂತಹ ಪ್ಲಾಸ್ಟಿಕ್ ಡಬ್ಬಿಗಳಲ್ಲಿ, ಹಾಗೂ ಇನ್ನಿತರ ವಸ್ತುಗಳಲ್ಲಿ ನೀರನ್ನು ಸಂಗ್ರಹಿಸಿ ಪ್ರಾಣಿ ಪಕ್ಷಿಗಳಿಗೆ ನೀರಿನ ದಾಹವನ್ನು ತೀರಿಸುವ ಮೂಲಕ ಪಕ್ಷಿಗಳ ಸಂಕುಲ ಉಳಿವಿಗಾಗಿ ಕೈಜೋಡಿಸಬೇಕೆಂದು ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷ ಅಮರೇಗೌಡ ಮಲ್ಲಾಪೂರ ರಾಜ್ಯದ ಪರಿಸರ ಪ್ರೇಮಿಗಳಲ್ಲಿ ಮನವಿ ಮಾಡಿದರು.