ಸಿಂಧನೂರು ಎಪ್ರಿಲ್ 21.ನಗರದ LBK ಪದವಿ ಪೂರ್ವ ಕಾಲೇಜು 2022-23 ನೇ ಸಾಲಿನ ಮಾರ್ಚ ತಿಂಗಳು ನಡೆದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಜಯಲಕ್ಷ್ಮಿ ತಂದೆ ಯಲ್ಲಪ್ಪ ಬ್ಯಾಗವಾಟ 600 ಕ್ಕೆ 554 ಅಂಕಗಳನ್ನು ಪಡೆದು ಶೇಕಡಾ 92.33%ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದರೆ, ದುರಗಮ್ಮ ತಂದೆ ನಾಗರಾಜ ಮಹಿಬೂಬು ಕಾಲೋನಿ 552 ಅಂಕಗಳನ್ನು ಪಡೆದು 92% ಅಂಕಗಳನ್ನು ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಕ್ಕಾಗಿ ಕಾಲೇಜಿನ ಪ್ರಾಂಶುಪಾಲರಾದ ಪರಶುರಾಮ ಮಲ್ಲಾಪುರ ಮತ್ತು ಉಪ ಪ್ರಾಂಶುಪಾಲರಾದ ನಾಗರಾಜ ಮರಕುಂಬಿ ಅಭಿನಂದಿಸಿದ್ದಾರೆ.
ನಂತರ ಮಾತನಾಡಿದ ಅರುಣ್ ಕುಮಾರ್ ಬೇರಗಿ ಕಾರ್ಯದರ್ಶಿಗಳು ನೋಬೆಲ್ ಪದವಿ ಮಹಾವಿದ್ಯಾಲಯ ಅವರು ಬಡತನದಲ್ಲಿ ಅರಳಿದ ಪ್ರತಿಭೆಯ ಫಲಿತಾಂಶವನ್ನು ಮೆಚ್ಚಿ ಮುಂದಿನ ಉನ್ನತ ವಿದ್ಯಾಭ್ಯಾಸಕ್ಕಾಗಿ ಕೇವಲ ವಿಶ್ವವಿದ್ಯಾಲಯದ ಶುಲ್ಕವನ್ನು ಮಾತ್ರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು .
ಪರೀಕ್ಷೆಗೆ ಹಾಜರಾದ 149 ವಿದ್ಯಾರ್ಥಿಗಳಲ್ಲಿ 12 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ,55 ವಿದ್ಯಾರ್ಥಿಗಳು ಪ್ರಥಮ ಸ್ಥಾನ, 17 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ, 42 ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದು ಕಾಲೇಜಿನ ಒಟ್ಟು ಫಲಿತಾಂಶ 72.41%ರಷ್ಟು ಪಡೆದು ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಸವ ಚಾರಿಟೇಬಲ್ ಟ್ರಸ್ಟ್ ಅದ್ಯಕ್ಷರಾದ ಟಿ.ಎಂ ಪಾಟೀಲ್ ,ನೊಬೆಲ್ ಕಾಲೇಜಿನ ಉಪದ್ಯಾಕ್ಷರಾದ ಶಂಕರ್ ಪತ್ತಾರ ಕಾರ್ಯದರ್ಶಿಯಾದ ಡಾ.ಅರುಣಕುಮಾರ ಬೇರ್ಗಿ ಖಜಾಂಚಿಗಳಾದ ಜಯಪ್ಪ ಗೊರೆಬಾಳ ಪ್ರಾಂಶುಪಾಲರಾದ ಆನಂದ ಎಸ್ ಹಾಗೂ ಎಲ್ಲಾ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.