ಏಪ್ರಿಲ್ 21.ಪ್ರಕೃತಿಯ ಮಡಿಲಲ್ಲಿ ಮನುಷ್ಯರ ಜೊತೆಗೆ ಮೂಕ ಪ್ರಾಣಿ ಪಕ್ಷಿಗಳಿಗೂ ಜೀವಿಸುವ ಹಕ್ಕಿದೆ ಅವುಗಳಿಗೆ ಬೇಸಿಗೆಯಲ್ಲಿ ನೀರುಣಿಸುವುದು ಮಾತುಬಲ್ಲವರಾದ ಮನುಷ್ಯರ ಜವಾಬ್ದಾರಿ ಎಂದು ಶಕ್ತಿನಗರ ದತ್ತಮಂದಿರದ ಶ್ರೀ ಪಂತಂಜಲಿ ಯೋಗ ಶಿಕ್ಷಣ ಸಮಿತಿಯ ಹಾಗೂ ವನಸಿರಿ ಫೌಂಡೇಶನ್ ಸಹಯೋಗದೊಂದಿಗೆ ನಡೆದ ಪಕ್ಷಿಗಳ ಅರವಟ್ಟಿಗೆ ಕಾರ್ಯಕ್ರಮದಲ್ಲಿ ಯುವ ಕೃಷಿ ವಿಜ್ಞಾನಿಗಳಾದ ಶ್ರೀ ಡಾ.ಮಲ್ಲರಡ್ಡಿ ಅವರು ತಿಳಿಸಿದರು.
ರಾಯಚೂರು ಶಕ್ತಿನಗರದ ದತ್ತಮಂದಿರದಲ್ಲಿ ವನಸಿರಿ ಫೌಂಡೇಶನ್ ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ) ಕರ್ನಾಟಕ ವತಿಯಿಂದ ಬೇಸಿಗೆಯಲ್ಲಿ ಪಕ್ಷಿ ಸಂಕುಲ ಉಳುವಿಗಾಗಿ ಪಕ್ಷಿಗಳ ಅರವಟ್ಟಿಗೆ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.
ರಾಯಚೂರು ಶಕ್ತಿನಗರದ ದತ್ತ ಮಂದಿರದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ನೀಡಲಾಗಿದ್ದ ಪಕ್ಷಿಗಳ ಅರವಟ್ಟಿಗೆಯನ್ನು ಹಿಡಿದು ಯ್ಯೋಗಬ್ಯಾಸದ ಜೊತೆಗೆ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ ಕಟ್ಟುವ ಬಗ್ಗೆ ಯುವ ಕೃಷಿ ವಿಜ್ಞಾನಿಗಳಾದ ಡಾ.ಮಲ್ಲರಡ್ಡಿ ಮಕ್ಕಳಿಗೆ ತಿಳಿಹೇಳಿದರು.ಈ ಪ್ರಕೃತಿಯಲ್ಲಿ ಸಕಲ ಜೀವ ರಾಶಿಗಳೂ ಬದುಕುವ ಹಕ್ಕನ್ನು ಹೊಂದಿವೆ,ಭೂಮಿಯ ಮೇಲೆ,ಆಕಾಶದಲ್ಲಿ,ನೀರಿನಲ್ಲಿ ಹೀಗೆ ಎಲ್ಲಾ ಕಡೆಗಳಲ್ಲಿ ಬದುಕುವ ಹಕ್ಕನ್ನು ಹೊಂದಿವೆ ಇಲ್ಲಿ ಕೆಲವು ಜೀವಿಗಳು ಮಾತನಾಡುತ್ತವೆ ಕೆಲವು ಜೀವಿಗಳು ಮಾತುಗಳನ್ನಾಡುವುದಿಲ್ಲ ಇಂತಹ ಒಂದು ಜೀವಿಗಳಲ್ಲಿ ಮನುಷ್ಯನೊಬ್ಬನೇ ಮಾತನಾಡುವ ಜೀವಿ.ಪಕ್ಷಿಗಳಿಗೆ ಬೇಸಿಗೆಯಲ್ಲಿ ಬಾಯಾರಿಕೆಯಾದಾಗ ನೀರಿಗಾಗಿ ಪರದಾಡುತ್ತವೆ. ನೀರನ್ನು ಹುಡುಕಿಕೊಂಡು ಬೇರೆ ಬೇರೆ ಸ್ಥಳಗಳಿಗೆ ತೆರಳುತ್ತಾ ಸಂಚರಿಸುತ್ತವೆ. ವನಸಿರಿ ಫೌಂಡೇಶನ್ ತಂಡದ ಸದಸ್ಯರು ಮೂಕ ಪ್ರಾಣಿ ಪಕ್ಷಿಗಳಿಗೆ ಅರವಟ್ಟಿಗೆಗಳನ್ನು ಕಟ್ಟಿ ನೀರುಣಿಸು ಕಾರ್ಯಕ್ಕೆ ಮುಂದಾಗಿದೆ.ಇಂತಹ ಕಾರ್ಯವನ್ನು ಮಾಡುತ್ತಿರು ಸಿಂಧನೂರಿನ ವನಸಿರಿ ತಂಡಕ್ಕೆ ನಮ್ಮ ಪತಂಜಲಿ ಯೋಗ ಶಿಕ್ಷಣ ಸಮಿತಿಯ ವತಿಯಿಂದ ಹೃದಯ ಪೂರ್ವಕ ಧನ್ಯವಾದಗಳು ವನಸಿರಿ ತಂಡದ ಜೊತೆಗೆ ನಾವುಗಳೆಲ್ಲರೂ ಕೈಜೋಡಿಸೋಣ ಎಂದು ಮಕ್ಕಳಿಗೆ ಪ್ರೇರಣೆ ನೀಡಿದರು.
ಈ ಸಂದರ್ಭದಲ್ಲಿ ಶಕ್ತಿನಗರದ ಸುಮಾರು70ಕ್ಕೂ ಹೆಚ್ಚು ಯೋಗಪಟು ವಿದ್ಯಾರ್ಥಿಗಳು ಮತ್ತು ಯುವ ಕೃಷಿ ವಿಜ್ಞಾನಿಗಳಾದ ಡಾ.ಮಲ್ಲರಡ್ಡಿ, ವೀಣಾ ಹಾಗೂ ವಿದ್ಯಾರ್ಥಿಗಳು, ಹಾಗೂ ವನಸಿರಿ ತಂಡದ ಸದಸ್ಯರು ಭಾಗವಹಿಸಿದ್ದರು.