ಏಪ್ರಿಲ್ 24. ಮೇ 10ರಂದು ರಾಜ್ಯಾದ್ಯಂತ ನಡೆಯುತ್ತಿರುವ 2023ನೇ ಸಾಲಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಯು ದಿನದಿಂದ ದಿನಕ್ಕೆ ರಾಜಕೀಯ ರಂಗೇರುತ್ತಿದೆ ಇಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ಬಸನಗೌಡ ಬಾದರ್ಲಿ ಅವರು ನಾಮಪತ್ರ ಸಲ್ಲಿಸಿದ್ದು ತಾತನ ವಿರುದ್ಧ ತೊಡೆತಟ್ಟಿದ ಮೊಮ್ಮಗ ಇಂದು ನಾಮಪತ್ರ ವಾಪಸ್ ಪಡೆಯಲಿದ್ದಾರೆಯೆ ….?
ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 15 ದಿನಗಳಿಂದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಬಸನಗೌಡ ಬಾದರ್ಲಿ ಅವರು ಟಿಕೆಟ್ಗಾಗಿ ಜಿದ್ದಾಜಿದ್ದಿ ಪೈಪೋಟಿ ನಡೆಸಿದ್ದರು ಆದರೆ ಮೊಮ್ಮಗನ ವಿರುದ್ಧ ಹೋರಾಡಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಹಂಪನಗೌಡ ಬಾದರ್ಲಿಗೆ ಮತ್ತೊಂದು ಸಂಕಷ್ಟ ಎದುರಾಗಿತ್ತು ಅದೇನಂದರೆ, ಸಂಬಂಧದಲ್ಲಿ ಮೊಮ್ಮಗನಾದ ಸ್ವಪಕ್ಷದಲ್ಲಿ ಇದ್ದಂತ ಬಸನಗೌಡ ಬಾದರ್ಲಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಬಂಡಾಯದ ಬಿಸಿ ಮುಟ್ಟಿಸಲು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.
ಈ ವಿಷಯವನ್ನು ತಿಳಿದ ಕಾಂಗ್ರೆಸ್ ಹೈಕಮಾಂಡ್ ಬಸನಗೌಡ ಬಾದರ್ಲಿ ಅವರು ನಾಮಪತ್ರ ಸಲ್ಲಿಸಿದ ದಿನವೇ ಬಂಡಾಯದ ಬಿಸಿಯನ್ನು ತಪ್ಪಿಸಲು ರಾಜ್ಯ ಚುನಾವಣೆ ಉಸ್ತುವಾರಿಯಾದ ರಣದೀಪ್ ಸುರ್ಜಿವಾಲ ಕೇರಳದ ರಾಜ್ಯಸಭಾ ಸದಸ್ಯ ಜೆಬಿ ಮಾಥರ್ ರಾಜ್ಯ ಯುವ ಕಾಂಗ್ರೆಸ್ ನ ಅಧ್ಯಕ್ಷ ಮಹಮ್ಮದ್ ನಲಪಾಡ್ ಸೇರಿ ಹಲವು ಮುಖಂಡರು ಸಿಂಧನೂರಿನ ಜನಸ್ಪಂದನಾ ಕಾರ್ಯಾಲಯದಲ್ಲಿ ಬಸನಗೌಡ ಬಾದರ್ಲಿ ಅವರ ಜನಸ್ಪಂದನಾ ಕಾರ್ಯಾಲಯದಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್ ಪಕ್ಷವು ನಮ್ಮ ತಾಯಿ ಇದ್ದಂತೆ ನಾವು ಒಂದೇ ತಂದೆ ತಾಯಿಗೆ ಹುಟ್ಟಿದೆ ಇರಬಹುದು ಆದರೆ ಸ್ವಂತ ಅಣ್ಣ ತಮ್ಮಂದಿರು ಇದ್ದಂತೆ ನನ್ನ ಅಣ್ಣನಿಗೆ ಅನ್ಯಾಯವಾಗಲು ಬಿಡುವುದಿಲ್ಲ ಹೆತ್ತ ತಾಯಿ ಎಂದಿಗೂ ಕೂಡ ಮಕ್ಕಳಿಗೆ ಮೋಸ ಮಾಡುವುದಿಲ್ಲ ನಮ್ಮ ಅಣ್ಣನಿಗೆ ಮುಂದೊಂದು ದಿನ ನ್ಯಾಯ ಸಿಕ್ಕೇ ಸಿಗುತ್ತದೆ ದಯವಿಟ್ಟು ಯಾರು ಕೂಡ ಅವಸರ ಮಾಡಬೇಡಿ ಎಂದು ಮನವಿ ಮಾಡುತ್ತಾರೆ.
ನಂತರ ಮಾತನಾಡಿದ ಕಾಂಗ್ರೆಸ್ ಪಕ್ಷದ ರಾಜ್ಯ ಚುನಾವಣೆ ಉಸ್ತುವಾರಿಯಾದ ರಣದೀಪ ಸುರ್ಜಿವಾಲ ದಯವಿಟ್ಟು ಯಾರೂ ಕೂಡ ಅವಸರ ಮಾಡಬೇಡಿ, ಬಸನಗೌಡ ಬಾದರ್ಲಿ ಅವರ ಮೇಲೆ ನಿಮಗೆ ಎಷ್ಟು ಅಭಿಮಾನ ಇದೆ ಅಷ್ಟೇ ಅಭಿಮಾನ ನನಗೂ ಕೂಡ ಇದೆ ಸ್ವಂತ ತಮ್ಮ ಇದ್ದಂತೆ ಅವರಿಗೆ ಯಾವುದೇ ರೀತಿ ಅನ್ಯಾಯವಾಗಲು ಬಿಡುವುದಿಲ್ಲ ಕಾಂಗ್ರೆಸ್ ಪಕ್ಷವು ನಮಗೆ ಎಂದೂ ಕೂಡ ದ್ರೋಹ ಬಗೆಯುವುದಿಲ್ಲ ಹೀಗಾಗಿ ನೀವೆಲ್ಲರೂ ಕೂಡ ತಾಳ್ಮೆಯಿಂದ ಇರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೊಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮೆಲ್ಲರ ಗುರಿಯಾಗಬೇಕು ಎಂದು ಹೇಳಿದರು.
ಕಾಂಗ್ರೆಸ್ ಹೈಕಮಾಂಡ ಬಸನಗೌಡ ಬಾದರ್ಲಿ ಅವರನ್ನು ಗುರುತಿಸಿ ಅವರಿಗೆ ಶುಭ ಸುದ್ದಿಯನ್ನು ನೀಡಲು ಹೈಕಮಾಂಡ್ ನನ್ನನ್ನು ಇಲ್ಲಿಗೆ ಕಳಿಸಿದೆ ಅದೇನಂದರೆ, ನನ್ನ ತಮ್ಮ ಅಂದರೆ ನಿಮ್ಮೆಲ್ಲರ ಅಣ್ಣ ಬಸನಗೌಡ ಬಾದರ್ಲಿ ಅವರಿಗೆ ಇನ್ನು ಎಂಟು ತಿಂಗಳ ಬಾಕಿ ಇರುವ ಲೋಕಸಭೆ ಚುನಾವಣೆಗೆ ಅಭ್ಯರ್ಥಿಯನ್ನಾಗಿಸಲು ಒಪ್ಪಿಗೆ ನೀಡಿದ್ದು ಜೊತೆಗೆ ಮಂತ್ರಿ ದರ್ಜಿಯ ನಿಗಮ ಮಂಡಳಿ ಅಧ್ಯಕ್ಷ ಸಾನ ನೀಡುತ್ತದೆ ಮತ್ತು ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಮತ್ತು ಸ್ಥಳೀಯ ನಾಮಿನೇಟೆಡ್ ಶೇಕಡ 50ರಷ್ಟು ಅವರಿಗೆ ನೀಡಲಾಗುತ್ತದೆ ಇದಕ್ಕಿಂತ ಸಂತೋಷದ ವಿಚಾರ ಇನ್ನೊಂದೆಲ್ಲಿದೆ ಹೀಗಾಗಿ ತಾವೆಲ್ಲರೂ ಕೂಡ ಈ ನಾಮಪತ್ರವನ್ನು ವಾಪಸ್ ಪಡೆಯಿರಿ ಎಲ್ಲರೂ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯೋಣ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದು ಹೇಳಿದ್ದರು.
ಆದರೆ ಇದಕ್ಕೆಲ್ಲವೂ ಕೂಡ ತೆರೆ ಯಾವಾಗ ಎಂಬುವುದು ಇನ್ನೂ ಕೂಡ ನಿಗೂಢವಾಗಿದೆ ನಾಮಪತ್ರ ವಾಪಸ್ ಪಡೆಯಲು ಇಂದು ಕೊನೆಯ ದಿನವಾಗಿದ್ದು ಕಾಂಗ್ರೆಸ್ ಹೈಕಮಾಂಡ್ ನ ಮನವಿಯಂತೆ ನಾಮಪತ್ರವನ್ನು ವಾಪಸ್ ಪಡೆಯಲಿದ್ದಾರಾ ಅಥವಾ ರಾಜಕೀಯವೆಂಬ ರಣರಂಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಬಸನಗೌಡ ಬಾದರ್ಲಿ ಇಂದು ಕಾದು ನೋಡಬೇಕಾಗಿದೆ