ಏಪ್ರಿಲ್ 24.ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನಮ್ಮ ಭಾಗದಲ್ಲಿ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಅಭಿನಂದ ಸಂಸ್ಥೆ ರಾಜ್ಯಮಟ್ಟದಲ್ಲಿ ಹೆಸರು ಮಾಡುತ್ತಿದೆ ಹಾಗೂ ಬಸವೇಶ್ವರ ಜಯಂತಿ ಅಂಗವಾಗಿ ವಚನ ಸ್ಪರ್ಧೆ ಕಾರ್ಯಕ್ರಮ ನಿಜವಾಗಲೂ ಅರ್ಥಪೂರ್ಣವಾದ ಕಾರ್ಯಕ್ರಮವಾಗಿದೆ ಈ ಕಾರ್ಯಕ್ರಮದಿಂದ ಮಕ್ಕಳಲ್ಲಿ ವಿಶಾಲ ಮನೋಭಾವನೆ ಸ್ತ್ರೈರ್ಯ,ಧೈರ್ಯ ಮುಂತಾದವುಗಳನ್ನು ಬೆಳೆಸಿಕೊಳ್ಳಲು ಈ ವಚನ ಸ್ಪರ್ಧೆ ಎಂದು ಸಿದ್ದರಾಮೇಶ್ವರ ಅಂಗಡಿ ನುಡಿದರು.
ಈ ವಚನ ಸ್ಪರ್ಧಾ ಕಾರ್ಯಕ್ರಮದಲ್ಲಿ ಹಲವಾರು ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಥಮ ಸ್ಥಾನವನ್ನು ಲೈನ್ಸ್ ಶಾಲೆಯ ಅದ್ವಿತಿ ಅಂಗಡಿ ದ್ವಿತೀಯ ಬಹುಮಾನವನ್ನು ಗವಿಶರಣಂ ಶಾಲೆಯ ವಚನ ಪಟ್ಟಣಶೆಟ್ಟಿ ದ್ವಿತೀಯ ಸ್ಥಾನ ಪಡೆದರು. ಭಾಗವಹಿಸಿದ ಎಲ್ಲ ಮಕ್ಕಳಿಗೂ ಸಮಾಧಾನಕರ ಬಹುಮಾನವನ್ನು ನೀಡಲಾಯಿತು ಈ ಸಂದರ್ಭದಲ್ಲಿ ಅಭಿನಂದನ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ ಶಿಕ್ಷಕರಾದ ದೊಡ್ಡಪ್ಪ ಗಬ್ಬುರ್ ಜಾಫರ್ಮೀಯ ಮಲ್ಲಪ್ಪ ಕಂಬಾರ್ ಅಮರೇಶ್ ಕಿಲ್ಲಾರೆಟ್ಟಿ ಬಸವರಾಜ್ ಬಾದಲಿ ಹಾಗೂ ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.