ಏಪ್ರಿಲ್ 24. ರಾಯಚೂರು ಭಾರತಿಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ರಾಯಚೂರು ಜಿಲ್ಲೆಯ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಅನಿತಾ ಬಸವರಾಜ್ ಮಂತ್ರಿ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷರಾದ ವಿಜಯ ರಾಜೇಶ್ವರಿ ಗೋಪಶೆಟ್ಟಿ ಅವರು ತಿಳಿಸಿದ್ದಾರೆ.
ದಿನಾಂಕ 24 4 2023 ರಂದು ಬಿಜೆಪಿಯ ಹಲವಾರು ಹಿರಿಯ ಮುಖಂಡರು ನೇತೃತ್ವದಲ್ಲಿ ಅನಿತಾ ಬಸವರಾಜ್ ಮಂತ್ರಿ ಅವರನ್ನು ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚದ ರಾಯಚೂರು ಜಿಲ್ಲೆಯ ಜಿಲ್ಲಾ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದರು.
ನಂತರ ಮಾತನಾಡಿದ ಮುಖಂಡರು ಈಗಾಗಲೇ ಸಾಕಷ್ಟು ಸಮಾಜ ಸೇವೆ ಸಂಘ-ಸಂಸ್ಥೆಗಳಲ್ಲಿ ಹೋರಾಟಗಳನ್ನು ಮಾಡಿ ಸದಾ ಸಮಾಜದಲ್ಲಿ ಮುಂಚೂಣಿಯಲ್ಲಿರುವ ಅನಿತಾ ಬಸವರಾಜ್ ಮಂತ್ರಿಯವರನ್ನು ಗುರುತಿಸಿ ಇಂದಿನಿಂದಲೇ ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ತಕ್ಷಣವೇ ಪಕ್ಷದ ಸಂಘಟನೆಯ ಶಕ್ತಿಯನ್ನು ಹೆಚ್ಚಿಸಲು ತಾವು ಸಕ್ರಿಯವಾಗಿ ತೊಡಗಿಸಿಕೊಂಡು ನೂತನ ಜವಾಬ್ದಾರಿಯಂತೆ ಕಾರ್ಯಪ್ರವೃತ್ತರಾಗಲು ತಮಗೆ ತಿಳಿಸಲಾಗಿದೆ ಎಂದು ತಿಳಿಸಲಾಯಿತು