ರಾಯಚೂರು,ಏ.25(ಕ.ವಾ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಶ್ರೀ ಶಂಕರಚಾರ್ಯರ ಜಯಂತಿಯನ್ನು ಶಂಕರಚಾರ್ಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಏ.25ರ(ಮಂಗಳವಾರ) ನಗರದ ಕನ್ನಡ ಭವನದಲ್ಲಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ, ಸಿಬ್ಬಂದಿಗಳಾದ ರಮೇಶ, ಇಸ್ಮಾಯಿಲ್, ಶ್ರೀದೇವಿ, ಸಿದ್ದು, ವಿನೋದಕುಮಾರ, ದಂಡಪ್ಪ ಬಿರಾದಾರ, ಸಮಾಜದ ಮುಖಂಡರಾದ ಕೃಷ್ಣ ಮೂರ್ತಿ ಹೆಗನೂರು, ಹನುಮಂತ ರಾವ್, ಸಿ.ವಸಂತರಾವ್, ಉದಯ ಶಂಕರ ದೇಸಾಯಿ, ಸದಾನಂದ ಹಿಮಗಿರಿ, ಈಶ್ವರ ಹೆಗಡೆ, ಶ್ರೀಪಾದ ದೇಸಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.