ಏಪ್ರಿಲ್ 26.ರಾಯಚೂರು ವಿಶ್ವವಿದ್ಯಾಲದ ಮುಖ್ಯ ಆವರಣದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ರಾಯಚೂರು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಗಳಾದ ಶ್ರೀ ನಾಗರಾಜ ನಾಯಕ ಹಾಗೂ ಇನ್ನೊರ್ವ ಅತಿಥಿಯಾಗಿ ರಿಮ್ಸ್ ಮತ್ತು ಕೃಷಿ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಗಳಾದ ಶ್ರೀ ಹನುಮೇಶ್ ನಾಯಕ ಉಪ ಕುಲಸಚಿವರಾದ ಡಾಕ್ಟರ್ ಜಿ. ಎಸ್. ಬಿರಾದಾರ್ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೋ. ಪಾರ್ವತಿ ಸಿ.ಎಸ್ . ಹಾಗೂ ವಾಣಿಜ್ಯ ಶಾಸ್ತ್ರ ವಿಭಾಗದ ಸಂಯೋಜಕರಾದ ಡಾಕ್ಟರ್ ಶಾಂತಕುಮಾರ್ ನಾಯಕ್ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಮುಖ್ಯ ಅತಿಥಿಗಳಾದ ಶ್ರೀ ನಾಗರಾಜ್ ನಾಯಕ ಸರ್ ವಿದ್ಯಾರ್ಥಿಗಳಿಗೆ ಸ್ಪರ್ದಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿ ಒಂದು ಗುರಿಯನ್ನು ನಿಗದಿಪಡಿಸಿಕೊಂಡು ಸಂಕಲ್ಪ ಬಲದೊಂದಿಗೆ, ಬರವಸೆಯೊಂದಿಗೆ ಅಧ್ಯಯನ ಮಾಡಿ ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸುಪಡೆಯಬೇಕೆಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ದ್ವಿತೀಯ ವರ್ಷದ ವಾಣಿಜ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯಾದ ಸುರಕ್ಷಾ ಮತ್ತು ತಂಡದಿಂದ ಪ್ರಾರ್ಥನಾ ಗೀತೆಯನ್ನು ಹಾಡಲಾಯಿತು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿನ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ವಿನಾಯಕ ಕಮಲಾಪುರ್ ಅವರು ನೆರವೇರಸಿಕೊಟ್ಟರು.
ಶರೀಪಾ ಬೇಗಂ ಕಾರ್ಯಕ್ರಮವನ್ನು ನಿರೂಪಿಸಿದರೆ ಆನಂದ್ ಸ್ವಾಗತಿಸಿದರು ಸುನೀಲ್ ಕುಮಾರ್ ನಾಯಕ್ ವಂದಿಸಿದರು ನಂತರ ಸಂಗೀತ ಮತ್ತು ಮನರಂಜನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀಮತಿ ರೂಪ ಎಂ. ಶ್ರೀ ಗೋವಿಂದರೆಡ್ಡಿ ಶ್ರೀಮತಿ ವಿಜಯಲಕ್ಷ್ಮಿ ಶ್ರೀ ಹನುಮೇಶ್ ನಾಯಕ್ ಜೇನೂರು ಶ್ರೀ ಲಕ್ಷ್ಮೀಕಾಂತ್ ಹಾಗೂ ಶ್ರೀಮತಿ ಗೀತಾ ಗೋಪಾಲಾಕೃಷ್ಣ ಮತ್ತು ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳು ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.