ಏಪ್ರಿಲ್ 26.ಬಿಸಿಲು ನಾಡು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಯುವ ಸಾಹಿತಿ ಶಂಕರ್ ದೇವರು ಹಿರೇಮಠ್ ಅವರ ಹೆಸರು ಕರ್ನಾಟಕ ಬುಕ್ ಆಫ್ ಅಚೀವರ್ಸ್ ರೆಕಾರ್ಡನಲ್ಲಿ ರಾಷ್ಟ್ರೀಯ ದಾಖಲೆಯಲ್ಲಿ ಹೆಸರು ಸೇರ್ಪಡೆಯಾಗಿದೆ 23.02.2018 ರಿಂದ 19.06.2023ರಲ್ಲಿ ನಾಲ್ಕು ವರ್ಷ ನಾಲ್ಕು ತಿಂಗಳು ಕಡಿಮೆ ಅವಧಿಯಲ್ಲಿ ರಾಜ್ಯ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಆನ್ಲೈನ್ ನಾಗು, ಆಫ್ಲೈನ್ ಗಳ ಮೂಲಕ ಮಕ್ಕಳಿಗೆ ಕನ್ನಡ ಭಾಷೆಯಲ್ಲಿ 50 ಮಕ್ಕಳ ಕವಿ ಗೋಷ್ಠಿಗಳನ್ನು ಆಯೋಜನೆ ಮಾಡಿದ್ದಾರೆ ಕನ್ನಡ ಭಾಷೆಯಲ್ಲಿ ಇದು ಮೊದಲಾಗಿದೆ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಬೇಳಸುವಲ್ಲಿ 50 ಕವಿಗೋಷ್ಠಿ ಸಹಾಯಕವಾಗಿದೆ ಮಕ್ಕಳಿಗಾಗಿ 50 ಕವಿಗೋಷ್ಠಿ ಏರ್ಪಡಿಸಿದ್ದು ಸಾಧನೆಯಾಗಿದೆ.
ಸರ್ಕಾರದ ಹಾಗೂ ಯಾವುದೇ ಸಂಖ್ಯೆಯ ಅನುದಾನ ಪಡೆಯದೆ 50 ಮಕ್ಕಳ ಕವಿಗೋಷ್ಠಿಗಳನ್ನು ಮಾಡಿದ ರಾಯಚೂರು ಜಿಲ್ಲೆಯ ಮಕ್ಕಳ ಸಾಹಿತ್ಯ ಪರಿಷತ್ತು ಮೊದಲ ಸಂಸ್ಥೆಯಾಗಿದೆ ಎಂದು ಕರ್ನಾಟಕ ಬುಕ್ ಆಫ್ ರೆಕಾರ್ಡ್ ಸಂಯೋಜಕ ಮುಕೇಶ್ ಕುಮಾರ್ ಸೋಲಂಕಿ ತಿಳಿಸಿದ್ದಾರೆ.
ಇಂದಿನ ಮಕ್ಕಳೇ ನಾಳಿನ ನಾಗರಿಕರು ಉತ್ತಮ ನಾಗರಿಕರನ್ನು ಸೃಷ್ಟಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಸಾಹಿತ್ಯ ಪ್ರೇಮಿ ಮಕ್ಕಳನ್ನು ಬೆಳೆಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವೂ ಸದಾ ಇದೆ. ನಾವು ಮಕ್ಕಳಿಗಾಗಿ ನಡೆಸುತ್ತಿರುವ ಕವಿಗೋಷ್ಠಿ ಕಾರ್ಯಕ್ರಮಗಳ ಸಂಖ್ಯೆ 50 ಅನ್ನು ದಾಟಿದೆ ಹಿರಿಯರಾದ ನಾವೆಲ್ಲ ಕವಿಗೋಷ್ಠಿಯಲ್ಲಿ ಭಾಗವಹಿಸುವುದು ಸಾಮಾನ್ಯ ಆದರೆ ಮಕ್ಕಳಿಗೆ ಕವಿಗೋಷ್ಠಿಯಲ್ಲಿ ಅವಕಾಶ ಸಿಗುವುದು ಬಹಳ ಕಡಿಮೆ.
ಆ ಕಾರಣಕ್ಕಾಗಿ ಮಕ್ಕಳಿಗಾಗಿ ಕವಿಗೋಷ್ಠಿಯನ್ನು ನಡೆಸಿಕೊಂಡು ಬರುತ್ತಿದ್ದೆವೆ. ದಿನಾಂಕ 23.2.2018 ರಿಂದ 19.6.2022 ರ ನಾಲ್ಕು ವರ್ಷ ನಾಲ್ಕು ತಿಂಗಳ ಅವಧಿಯಲ್ಲಿ ಮಕ್ಕಳಿಗಾಗಿ 50 ಮಕ್ಕಳ ಕವಿಗೋಷ್ಠಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದು ಕನ್ನಡ ಭಾಷೆಯಲ್ಲಿ ಕಡಿಮೆ ಅವಧಿಯಲ್ಲಿ 50ಮಕ್ಕಳ ಕವಿಗೋಷ್ಠಿ ಏಪ೯ಡಿಸಿದ್ದು ರಾಯಚೂರು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಹೆಮ್ಮೆ ಪಡುವ ಸಂಗತಿ ಆಗಿದೆ.
50 ಮಕ್ಕಳ ಕವಿಗೋಷ್ಠಿ ವಿಶೇಷ ಕಾರ್ಯಕ್ರಮ. ಈ ವಿಷಯವು ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ರಾಷ್ಟ್ರೀಯ ದಾಖಲೆಯಾಗಿದೆ
ಈ ದಾಖಲೆಯ ಹಿಂದೆ ಹಲವು ಮಹನೀಯರ ಕೊಡುಗೆ ಇದೆ. ಹಿರಿಯ ಮಕ್ಕಳ ಸಾಹಿತಿಗಳು, ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸಾಹಿತ್ಯ ಪ್ರೇಮಿಗಳು, ನನ್ನ ಗೆಳೆಯರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ವಾಸಿಸುತ್ತಿರುವ ಕನ್ನಡಿಗರ ಪ್ರೋತ್ಸಾಹದ ಫಲವಾಗಿ ಈ ದಾಖಲೆ ಸಾಧ್ಯವಾಗಿದೆ.
ಈ ಸಂಭ್ರಮಕ್ಕೆ ತಾವೆಲ್ಲಾ ಕಾರಣರು. ಮಕ್ಕಳ ಸಾಹಿತ್ಯವನ್ನು ಸಮೃದ್ಧವಾಗಿ ಬೆಳೆಸುವ ನಿಟ್ಟಿನಲ್ಲಿ ನೀವುಗಳು ನೀಡುತ್ತಿರುವ ಪ್ರೋತ್ಸಾಹಕ್ಕೆ ನಾನು ಋಣಿಯಾಗಿರುವೆ. ತಮ್ಮೆಲ್ಲರಿಗೂ ಮತ್ತೊಮ್ಮೆ ತುಂಬು ಹೃದಯದ ಧನ್ಯವಾದಗಳು.
ಮಕ್ಕಳ ಸಾಹಿತ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಮಕ್ಕಳಿಗೆ ಸಾಹಿತ್ಯ ಕೃತಿಗಳನ್ನು ಓದಿಸುವ ಕೆಲಸ ಆಗಬೇಕು. ಮಕ್ಕಳ ಕಮ್ಮಟಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು. ಮಕ್ಕಳ ಸಾಹಿತ್ಯ ಚಟುವಟಿಕೆಗೆ ತಮ್ಮೆಲ್ಲರ ಪ್ರೋತ್ಸಾಹವು ಸದಾ ಇರಲಿ ಎಂದು ಆಶಿಸುವೆ ಎಂದು ಶಂಕರ ದೇವರು ಹಿರೇಮಠ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.