ಏಪ್ರಿಲ್ 27.ಸಿರುಗುಪ್ಪ ೪೫ ವರ್ಷಗಳ ಸುಧೀರ್ಘ ರಾಜಕೀಯ ಜೀವನದಲ್ಲಿ ಬಿಜೆಪಿಯಂತಹ ಭ್ರಷ್ಟಾಚಾರ ಸರ್ಕಾರವನ್ನು ನೋಡಿರಲಿಲ್ಲ. ೪೦ ಪರ್ಸೆಂಟ್ ಕಮೀಷನ್ ಹೊಡಿತಿದೆಂದು ಗುತ್ತಿಗೆದಾರರ ಸಂಘದಿಂದ ಮೋದೀಜಿಯವರಿಗೆ ಅಧ್ಯಕ್ಷ ಕೆಂಪಯ್ಯ ಪತ್ರ ಬರಿತಾರೆ. ನಾಖಾವೂಂಗಾ ನಾ ಖಾನೆದೂಂಗಾ ಎನ್ನುವ ಮೋದೀಯವರೇ ಯಾಕೆ ಕ್ರಮ ಕೈಗೊಂಡಿಲ್ಲವೆಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಬಿ.ಎಂ.ನಾಗರಾಜರ ಪರವಾಗಿ ನಡೆದ ಪ್ರಚಾರ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ನೆರೆದಿದ್ದ ಅಪಾರ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಅವರು ಹಗರಣಗಳ ಬಗ್ಗೆ ದಾಖಲಾತಿ ಕೇಳುವ ಬಸವರಾಜ ಬೊಮ್ಮಾಯಿವರೇ ಪೋಲೀಸರ ಅಕ್ರಮ ನೇಮಕಾತಿಯಲ್ಲಿ ಒಬ್ಬ ಎಡಿಜಿಪಿ ಜೈಲಿಗೆ ಹೋದರಲ್ಲ ಅದು ದಾಖಲಾತಿಯಲ್ಲವೇ…?
ನಿಮ್ಮ ಬಿಜೆಪಿಯ ನಿಷ್ಠಾಂವಂತ ಕಾರ್ಯಕರ್ತ ಸಂತೋಷ್ ಪಾಟೀಲ್ ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಕೆಲಸ ಮಾಡಿ ಬಿಲ್ ಕೇಳಿದ್ದಕ್ಕೆ ಬಿಜೆಪಿಯವನಿಂದಲೇ ಈಶ್ವರಪ್ಪ ೪೦ ಪರ್ಸೆಂಟ್ ಕಮೀಷನ್ ಕೇಳಿದ್ರು ಪಾಪ ಸಾಲದ ಭಾಧೆ ತಾಳಲಾರದೇ ಡೆತ್ ನೋಟ್ನಲ್ಲಿ ಈಶ್ವರಪ್ಪನ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡ ಇದು ದಾಖಲಾತಿಯಲ್ಲವೇ ಆದ್ದರಿಂದ ಈ ೪೦ ಪರ್ಸೆಂಟ್ ಸರ್ಕಾರವನ್ನು ಕಿತ್ತೊಗೆಯುವ ಕಾಲ ಬಂದಿದೆ.
ಬಿ.ಎಮ್.ನಾಗರಾಜರನ್ನು ೨೦೧೩ರಲ್ಲಿ ೨೫ ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲಿಸಿದ್ದೀರಿ ಮತದಾರರು ಸರಳತೆ, ಸಜ್ಜನಿಕೆ, ಸಭ್ಯತೆ ಹಾಗೂ ಜನಪ್ರಿಯರಾಗಿರುವ ಅಭ್ಯರ್ಥಿಯನ್ನು ನೆರೆದಿರುವ ಕಾರ್ಯಕರ್ತರು ನೀವು ಮತದೊಂದಿಗೆ ಇನ್ನೂ ೫ಮತಗಳನ್ನು ಹಾಕಿಸುವ ಮೂಲಕ ಈ ಸಾರಿ ೫೦ಸಾವಿರಕ್ಕೂ ಅಧಿಕ ಅಂತರ ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
೨೦೧೩ ರಿಂದ ೨೦೧೮ರವರೆಗೆ ಮಾಡಿದ ನಮ್ಮ ಸರ್ಕಾರದ ಅಭಿವೃದ್ದಿ ಕಾರ್ಯಗಳಾದ ವಸತಿ, ಕೆರೆ, ಕೃಷಿ ಹೊಂಡ ರಸ್ತೆ, ಚರಂಡಿಯಂತಹ ಕಾರ್ಯಗಳಿಂದಾಗಿ ಬಿ.ಎಮ್.ನಾಗರಾಜ್ ಖಚಿತವಾಗಿ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಭಾರಿ ಕಾಂಗ್ರೇಸ್ ೧೩೦ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುವುದು ನಿಶ್ಚಿತ,ಪ್ರತಿಯೊಂದು ಜಿಲ್ಲೆಯಲ್ಲೂ ಕಾಂಗ್ರೇಸ್ ಪರವಾದ ಗಾಳಿ ಬೀಸುತ್ತಿದೆ. ಏಕೆಂದರೆ ಬಿಜೆಪಿ ಅಧಿಕಾರದಿಂದ ಜನ ಬೇಸತ್ತಿದ್ದಾರೆ. ಲಿಂಗಾಯತರಲ್ಲಿ ಹಲವಾರು ನಿಷ್ಠಾವಂತ ಮಂತ್ರಿಗಳು, ಮುಖ್ಯಮಂತ್ರಿಗಳಿದ್ದಾರೆ ಆದರೆ ಬಸವರಾಜ್ ಬೊಮ್ಮಾಯಿ ಒಬ್ಬ ಮಹಾನ್ ಕಳ್ಳನೆಂದು ಜರಿದರು.
ಅಚ್ಚೇ ದಿನ ಆಯೆಂಗೇ ಎನ್ನುವ ಮೋದೀಜಿಯವರೇ ಜನಸಾಮಾನ್ಯರು ಬಳಕೆಯ ಗ್ಯಾಸ್, ಪೆಟ್ರೋಲ್, ಡಿಸೇಲ್, ಬೆಲೆ ಗಗನಕ್ಕೇರಿಸಿದ್ದೀರಿ ಎಲ್ಲಿವೇ ಅಚ್ಚೇ ದಿನಗಳು, ಆದಕಾರಣ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ೨೦೦ ಯುನಿಟ್ ವಿದ್ಯುತ್ ಉಚಿತ, ಗೃಹಲಕ್ಷಿö್ಮ ಯೋಜನೆಯಡಿ ಮನೆಯೊಡತಿಗೆ ಮಾಸಿಕ ೨ಸಾವಿರ, ತಲಾ ೧೦ ಕೆಜಿ ಪಡಿತರ ಅಕ್ಕಿ, ನೀಡುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಕಾಂಗ್ರೇಸ್ ಅಭ್ಯರ್ಥಿ ಬಿ.ಎಂ.ನಾಗರಾಜ, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ಮಾಜಿ ಶಾಸಕ ಟಿ.ಎಂ.ಚAದ್ರಶೇಖರಯ್ಯಸ್ವಾಮಿ, ಎಐಸಿಸಿ ಕಾರ್ಯದರ್ಶಿ ಶೀಲಮ್ಮ, ಬ್ಲಾಕ್ ಸಮಿತಿ ಅಧ್ಯಕ್ಷ ಎನ್.ಕರಿಬಸಪ್ಪ, ಮುಖಂಡರಾದ ನರೇಂದ್ರಸಿAಹ, ಚೊಕ್ಕ ಬಸವನಗೌಡ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.