ಏಪ್ರಿಲ್ 30.ಸಿರುಗುಪ್ಪ: ತಾಲ್ಲೂಕಿನ ಸಿರಿಗೇರಿ ಗ್ರಾಮದ ಶನಿವಾರ ರಾತ್ರಿ ಸುರಿದ ಬಾರಿ ಮಳೆಗೆ ೪ ನೇ ವಾರ್ಡಿನ ರಸ್ತೆಯ ಮೇಲೆ ಚರಂಡಿ ನೀರು ಹರಿದು ಕಾಲುವೆಯಂತೆಯಾಗಿದೆ.ಸಾರ್ವಜನಿಕರು,ಬೈಕ್ ಸವಾರರು,ಗಬ್ಬು ನಾರುತ್ತಿರುವ ಚರಂಡಿಯ ನೀರಿನ ಮೇಲೆ ನಡೆದು ಹೋಗಬೇಕು.ರೋಗರುಜಿನಗಳಿಗೆ ಬಲಿಯಾಗಬೇಕಾ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.
೪ ವಾರ್ಡಿನ ಸದಸ್ಯರಾದ ಕುರುಬರು ದ್ಯಾವಣ್ಣ ಮಾತನಾಡಿ ಗ್ರಾಮದಲ್ಲಿರುವ ೩೧ ವಾರ್ಡ್ಗಳಲ್ಲಿನ ಹರಿಯುವ ಚರಂಡಿ ನೀರು ೪ನೇ ವಾರ್ಡಿನ ಭಾಗಕ್ಕೆ ಬರುತ್ತದೆ.೪ ವರ್ಷದಿಂದ ಮಳೆ ಬಂದರೆ ಸಾಕು ಈ ಸಮಸ್ಯೆ ಬಗ್ಗೆ ಹೇಳುತ್ತಾ ಬಂದಿದೆಯಾದರೂ ಪರಿಹಾರ ಮಾಡುವವರಿಲ್ಲ.ಈಗಾಗಲೆ ಪಿಡಿಒ ಗಮನಕ್ಕೆ ತಂದಾದರೂ ಒಮ್ಮೆ ಸ್ವಚ್ಚತೆ ಮಾಡಿಸಿದ್ದು ಹಣವು ಬಿಡುಗಡೆಯಾಗಿಲ್ಲ ಈ ಬಗ್ಗೆ ಅಧಿಕಾರಿಗಳ ಇತ್ತ ಗಮನ ಹರಿಸಿಲ್ಲ ಕ್ರಮ ಕೈಗೊಂಡಿಲ್ಲ.ಗ್ರಾಮದ ಪ್ರತಿಯೊಂದು ವಾರ್ಡಿನ ಸಮಸ್ಯೆ ಇದು.ಗ್ರಾ ಪಂಚಾಯಿತಿಯ ಸದಸ್ಯರ ಗೋಳಾದರೆ ಇನ್ನು ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಾರೆಯೇ ಎಂಬ ಪ್ರಶ್ನೆ ಎದುರಾಗುತ್ತದೆ.ಸಮಸ್ಯೆಯನ್ನು ಬಗೆಹರಿಸುವುದಾಗಲೀ ಪರಿಶೀಲನೆ ಮಾಡುವುದಕ್ಕಾಲೀ ಆಗಮಿಸಿಲ್ಲ.
ನನ್ನ ಅವಧಿಯಲ್ಲಿ ಯಾವುದೇ ಅನುದಾನ ನಿಲ್ಲಿಸಿಲ್ಲ ಆಯಾ ವಾರ್ಡಿನ ಸದಸ್ಯರಿಗೆ ಅನುದಾನ ನೀಡಿದ್ದೇನೆ.ಅನದಾನವನ್ನು ಯಾವುದಕ್ಕೆ ನೀಡಿರುತ್ತೇವೆ ಅದಕ್ಕೆ ಸರಿಯಾದ ರೀತಿಯಲ್ಲಿ ಸದ್ಬಳಗೆ ಮಾಡಿದರೆ ಈ ಸಮಸ್ಯೆ ಉದ್ಬವ ಆಗುತ್ತಿರಲಿಲ್ಲ.ವಾರ್ಡಿನ ಸದಸ್ಯರುಗಳು ಸಮಸ್ಯೆಯನ್ನು ನೋಡಿ ಬಗೆಹರಿಸಬೇಕು.ನನಗೆ ನೀಡಿ ಕೆಲಸ ನಾವಾದರು ಮಾಡುತೇವೆ.ಎಲ್ಲ ಸಮಸ್ಯೆಗಳು ಚುನಾವಣಾ ಸಮಯದಲ್ಲೇ ಬಂದರೆ ಈ ಸಮಯದಲ್ಲಿ ಎನು ಮಾಡಲು ಸಾಧ್ಯ ತಾತ್ಕಾಲಿಕವಾಗಿ ಸ್ವಚ್ಚತೆ ಮಾಡಿಸುತ್ತೇನೆ ಎಂದು ಗ್ರಾಂ.ಪಂ. ಪಿ.ಡಿ.ಓ ಶಿವಕುಮಾರ ಕೋರಿ ಹೇಳಿದರು.