ಮೇ 05.ಸಿಂಧನೂರು ತಾಲೂಕಿನ ದೇವರಗುಡಿ ಮತ್ತು ಮಲ್ಲಾಪೂರ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಬಾಗಿದ ಗಿಡಗಳಿಗೆ ಇಂದು ವನಸಿರಿ ಫೌಂಡೇಶನ್ ಅಮರೇಗೌಡ ಮಲ್ಲಾಪೂರ ಅವರ ಸಹೋದರನಾದ ಮಂಜುನಾಥ ಅವರು ಕಟ್ಟಿಗೆ ಮತ್ತು ಮುಳ್ಳಿನ ಬೇಲಿಯನ್ನು ಹಚ್ಚಿ ಗಿಡಮರಗಳ ರಕ್ಷಣೆ ಮಾಡಿದರು.
ವನಸಿರಿ ಫೌಂಡೇಶನ್ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರ ಹಿರಿಯ ಸಹೋದರನಾದ ಮಂಜುನಾಥ ಮಲ್ಲಾಪೂರ ಅವರು ಮಳೆಗಾಳಿಗೆ ಬಾಗಿ ಬಿದ್ದ ಗಿಡಮರಗಳಿಗೆ ಕಟ್ಟಿಗೆ ಮತ್ತು ಮುಳ್ಳಿನ ಬೇಲಿ ಹಚ್ಚುವ ಮೂಲಕ ಅವರ ತಮ್ಮನಾದ ಅಮರೇಗೌಡ ಮಲ್ಲಾಪೂರ ಅವರ ಪರಿಸರ ರಕ್ಷಣೆಯ ಕಾರ್ಯಕ್ಕೆ ಕೈಜೋಡಿಸಿರುವುದು ತುಂಬಾ ಸಂತೋಷದ ವಿಷಯ. ಪರಿಸರ ರಕ್ಷಣೆಗಾಗಿ ಪರಿಸರ ಕಾಳಜಿ ಕುಟುಂಬದ ಮೇಲೆ ಬೀರಿದೆ ಈ ಕುಟುಂಬಕ್ಕೆ ಪರಿಸರದ ವೃಕ್ಷಮಾತೆಯ ಆರ್ಶೀವಾದ ಸದಾಕಾಲ ಇರಲೆಂದು ಸರ್ವ ಪರಿಸರ ಪ್ರೇಮಿಗಳು ಹಾರೈಸುವುದರ ಜೊತೆಗೆ ಈ ಕಾರ್ಯ ಎಲ್ಲ ಪರಿಸರ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನು ತಿಳಿದ ಅಮರೇಗೌಡ ಮಲ್ಲಾಪೂರ ಅವರು ನನ್ನ ಹಿರಿಯ ಅಣ್ಣ ಪರಿಸರ ರಕ್ಷಣೆ ಕೈಜೋಡಿಸಿರುವುದು ತುಂಬಾ ಸಂತೋಷವಾಗುತ್ತಿದೆ ಇದೇರೀತಿ ಪ್ರತಿಯೊಬ್ಬರೂ ಪರಿಸರ ರಕ್ಷಣೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಇರುವ ಯಾವ ಅಭ್ಯರ್ಥಿ ಕೂಡ ಪರಿಸರ ಬೆಳೆಸೋಣ ಅಂತಾ ಯಾಕೆ ಹೇಳುತ್ತಿಲ್ಲ,ಗಿಡ ಮರಗಳ ಇದ್ರೆನೇ ನಾವು ಬದುಕುವುದಕ್ಕೆ ಸಾಧ್ಯ ಇದುವರಿಗೂ ಆದ್ರು ಒಬ್ಬ ಅಭ್ಯರ್ಥಿ ಆದ್ರು ಪರಿಸರ ಬಗ್ಗೆ ಮಾತಾಡುತ್ತಿಲ್ಲ,ಗಿಡ ಮರಗಳಿಂದ,ಒಳ್ಳೆಯ ನೆರಳು, ಒಳ್ಳೆಯ ಗಾಳಿ,ಹಣ್ಣು ಹಂಪಲು,ಒಳ್ಳೆಯ ಮಳೆ ಆಗಬೇಕು ಇವೆಲ್ಲವುಗಳ ಜೊತೆಗೆ ನಮ್ಮ ವಾಹನ,ನಾವು ನಿಲ್ಲಬೇಕು ಆದ್ರೆ ಗಿಡಗಳ ಬೇಕು,ಈ ಪರಿಸರದ ಬಗ್ಗೆ ರಾಜಕೀಯ ಪಕ್ಷದವರಾದ ನೀವು ಏಕೆ ಮಾತನಾಡುತ್ತಿಲ್ಲ?ಎಂದು ಪರಿಸರ ಪ್ರೇಮಿಗಳು ಪ್ರಶ್ನೆಮಾಡುವಂತಾಗಿದೆ.