ಮೇ. 6 ಸಿಂಧನೂರ ನಗರ ಹಾಗೂ ಗ್ರಾಮೀಣ ಭಾಗದದಲ್ಲಿ ಪ್ರಚಾರ ಅಭಿಯಾನ ನಡೆಸಲಾಗಿದೆ.
ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿಯಾದ ಕಾಮ್ರೇಡ ಡಿ.ಹೆಚ್.ಪೂಜಾರ, TUCI ರಾಜ್ಯ ಕಾರ್ಯದರ್ಶಿಯಾದ ಕೆ.ಬಿ.ಗೋನಾಳ, ಪಕ್ಷದ ಜಿಲ್ಲಾ ಕಾರ್ಯದರ್ಶಿಯಾದ ಬಿ.ಎನ್.ಯರದಿಹಾಳ, ಜನ ಸಾಂಸ್ಕೃತಿಕ ಸಂಘದ ಬಸವರಾಜ ಬಾಗಲವಾಡ, ಶರಣು,ಇತರರು ಭಾಗವಹಿಸಿದ್ದರು. ನಗರದ ಮೂರು ಮೈಲ್ ಕ್ಯಾಂಪ್, ದೋಬಿಗಲ್ಲಿ, ಹಾಗೂ ಜವಳಗೇರ ಇತರೆ ಭಾಗಗಳಲ್ಲಿ ನಡೆಸಲಾಯಿತು.
ಸಿಲಿಂಡರ ಗ್ಯಾಸ್, ಪೆಟ್ರೋಲ್ ಡೀಸೇಲ್ ಇತರೆ ಅಗತ್ಯ ವಸ್ತಗಳು, ಆಹಾರ ಪದಾರ್ಥಗಳ ಬೆಲೆ ಹೆಚ್ಚಿಸಿದ್ದರ ಕುರಿತು, ಪ್ರಧಾನ ಗರೀಬ್ ಕಲ್ಯಾಣ ಯೋಜನೆಯನ್ನು ರದ್ದುಗೊಳಿಸಿ, 10 ಕೇಜಿ ಅಕ್ಕಿಗೆ ಕಲ್ಲು ಹಾಕಲಾಗಿದೆ. ಮತದಾರರು ಈ ಕುರಿತು ಎಲ್ಲಾ ಪಕ್ಷದವರನ್ನು ಪ್ರಶ್ನೆ ಮಾಡಲು ಕರೆ ಕೊಡಲಾಯಿತು.
ಕಾಂಗ್ರೆಸ್ ಬಿಡುಗಡೆ ಮಾಡಿದ ಚುನಾವಣೆ ಪ್ರಣಾಳಿಕೆಯಲ್ಲಿ ಹಲವು ಅಂಶಗಳು ಜನರಿಗೆ ಅನುಕೂಲವಾಗುವಂತವಾಗಿವೆ.
(ಅಧಿಕಾರಕ್ಕೆ ಬಂದರೆ ಜಾರಿಗೊಳಿಸುತ್ತಾರೋ ಇಲ್ಲ ಗೊತ್ತಿಲ್ಲ)
ಮೀಸಲಾತಿ 76 ಕ್ಕೆ ಹೆಚ್ಚಳ, ಖಾಲಿ ಇರುವ ಹುದ್ದೆಗಳ ನಮಕಾತಿ ಭರ್ತಿ ಮಾಡಿಕೊಳ್ಳುವುದು, 25 ಸಾವಿರ ಪೌರಕಾರ್ಮಿಕರ ಕಾಯಂ, ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಇತ್ಯಾದಿ.
ಮುಖ್ಯವಾಗಿ ಎಪಿಎಂಸಿ, ಭೂ ಗುತ್ತಿಗೆ, ಮತಾಂತರ ನಿಷೇಧ ಕಾಯ್ದೆ, ಜಾನುವಾರು ಸಂರಕ್ಷಣೆ ತಿದ್ದುಪಡಿ, ಇತರೆ ತಿದ್ದುಪಡಿ ಕಾಯ್ದೆಗಳನ್ನು ವಾಪಸ ಪಡೆಯುವ, ನೂತನ ಶಿಕ್ಷಣ ನೀತಿಯನ್ನು (NEP) ಕೈಬಿಡುವ ಇತರೆ ಅಂಶಗಳು ಅತ್ಯಂತ ಪ್ರಮುಖವಾಗಿವೆ.
ಈ ಅಂಶಗಳಗಳನ್ನು ಮರೆ ಮಾಚಲು ಬಿಜೆಪಿಯವರು ಬಜರಂಗಿಯ ವಿಷಯವನ್ನು ಮುನ್ನೆಲ್ಲೆಗೆ ತಂದಿದ್ದಾರೆ.
60 ರ್ವರ್ಷಗಳ ಕಾಂಗ್ರೆಸ್ ಆಳ್ವಿಕೆಯ ಇತಿಹಾಸ ಸಂಪೂರ್ಣ ಜನಪರವಾಗಿಯೇನು ಇರಲಿಲ್ಲ. ಆದರೆ ಕನಿಷ್ಠ ಸಂವಿಧಾನ ಚೌಕಟ್ಟಿನಲ್ಲಿ ತಮ್ಮ ಆಳ್ವಿಕೆಯನ್ನು ನಡೆಸುತ್ತಿದ್ದರು . ಅಂಬೇಡ್ಕರ್ ರವರ ಸಮಾಜವಾದಿ ಆಶಯಗಳನ್ನು ಬಲಿ ಕೊಡಲಾಗುತ್ತದೆ.ಬಿಜೆಪಿಯವರು ಸಂವಿಧಾನವನ್ನು ಧ್ವಂಸಗೊಳಿಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.
ಹಿಂದೂ ರಾಷ್ಟ್ರದ ಅಜಂಡ, ಜಾತಿ ವ್ಯವಸ್ಥೆಯನ್ನು ಇನ್ನಷ್ಟು ಭದ್ರಗೊಳಿಸಿ,ಅಸ್ಪೃಶ್ಯತೆ, ಆಚರಣೆ ಮಹಿಳೆಯರ ಶೋಷಣೆಯ ಮರುಸ್ಥಾಪಿಸುವುದಾಗಿದೆ. ಈ ಕಾರಣಕ್ಕಾಗಿಯೆ ಬಿಜೆಪಿಯನ್ನು ಸೋಲಿಸಬೇಕಾಗಿದೆ.
ರಾಜ್ಯದಲ್ಲಿ ಯಾವುದೆ ಪಕ್ಷವಾಗಲಿ ಅಥವಾ ಪಕ್ಷೇತರ ಅಭ್ಯರ್ಥಿಯಾಗಲಿ ಬಿಜೆಪಿಯನ್ನು ಸೋಲಿಸುವ ಸಾಮರ್ಥ್ಯ ಇದ್ದವರಿಗೆ ಮತ ನೀಡಬೇಕೆಂದು ಕೋರಲಾಗಿದೆ.