ಸಿರುಗುಪ್ಪ : ಮೇ.೮ರ ಸಂಜೆ ೬ಕ್ಕೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಪಕ್ಷದ ಪ್ರಚಾರಕ್ಕೆ ಬಂದ ಮುಖಂಡರಾಗಲೀ, ಸ್ಟಾರ್ ಕ್ಯಾಂಪೇನ್ಗಳಾಗಲೀ ವಾಸ್ತವ್ಯ ಹೂಡುವಾಗಿಲ್ಲ ಹಾಗೂ ಮುಂದಿನ ೪೮ಗಂಟೆಗಳ ಕಾಲ ಜಿಲ್ಲಾಧಿಕಾರಿಗಳು ಸೆಕ್ಷನ್ ೧೪೪ ಜಾರಿ ಮಾಡಲಿದ್ದು, ೫ಕ್ಕಿಂತ ಹೆಚ್ಚಿನ ಜನ ಗುಂಪು ಸೇರುವಾಗಿಲ್ಲವೆಂದು ಚುನಾವಣಾಧಿಕಾರಿ ಸತೀಶ್.ಹೆಚ್.ಕೆ. ತಿಳಿಸಿದ್ದಾರೆ.
ನಗರದ ತಾಲೂಕು ಕಛೇರಿಯಲ್ಲಿ ಮೇ.೧೦, ಬುಧವಾರದಂದು ನಡೆಯುವ ಸಾರ್ವತ್ರಿಕ ಮತದಾನ ಅಂಗವಾಗಿ ಚುನಾವಣಾ ಆಯೋಗದಿಂದ ಕೈಗೊಂಡಿರುವ ಸಕಲ ಸಿದ್ದತೆಯ ಕುರಿತು ಅವರು ಸುದ್ದಿಗೋಷ್ಠಿ ನಡೆಸಿದ ಅವರು ಮೇ.೯ರಂದು ಚುನಾವಣೆ ಸಿಬ್ಬಂದಿಗಳು ಆಗಮಿಸಲಿದ್ದು ೨೨೭ ಮತಗಟ್ಟೆಗಳಿಗೆ ಸಂಬಂದಿಸಿದ ಇವಿಎಂ. ಇನ್ನಿತರ ಸಾಮಗ್ರಿಗಳನ್ನು ಒಪ್ಪಿಸಿ ೬೦ ಮಾರ್ಗಗಳಿಂದ ಬಸ್ಸು ಮತ್ತು ಟ್ರಾಕ್ಸಿಗಳ ಮೂಲಕ ಮತಗಟ್ಟೆಗಳಿಗೆ ತಲುಪಿಸಲಾಗುವುದು.
ಗಡಿಭಾಗದಲ್ಲಿನ ಸೂಕ್ಷಂ ಮತ್ತು ಅತಿಸೂಕ್ಷಂ ವಿರುವ ೧೧೩ ಮತಗಟ್ಟೆಗಳಲ್ಲಿನ ಪ್ರಕ್ರಿಯೆಗಳನ್ನು ವೆಬ್ಕ್ಯಾಸ್ಟಿಂಗ್ ಮೂಲಕ ಕಛೇರಿಯಲ್ಲೇ ಕುಳಿತು ವೀಕ್ಷಿಸುವ ವ್ಯವಸ್ಥೆ ಕೈಗೊಳ್ಳಲಾಗಿದೆ. ಮತಗಟ್ಟೆಗಳಿಗೆ ಅವಶ್ಯಕವಾದ ೨೨೭ ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್ ಹಾಗೂ ವಿವಿಪ್ಯಾಡ್ಗಳಲ್ಲದೇ ರಿಸರ್ವ್ ಆಗಿ ಬ್ಯಾಲೆಟ್ ಮತ್ತು ಕಂಟ್ರೋಲ್ ಯುನಿಟ್ ೪೯ ಇದ್ದರೆ ವಿ.ವಿ.ಪ್ಯಾಡ್ ೭೧ ರಿಸರ್ವ್ ಇಡಲಾಗಿದೆ.
ಕಡ್ಡಾಯ ಮತದಾನಕ್ಕಾಗಿ ಮತದಾರರಿಗೆ ವಿಶ್ರಾಂತಿ ಕೊಠಡಿ ವ್ಯವಸ್ಥೆ, ಶುದ್ದ ಕುಡಿಯುವ ನೀರು, ಕೊಠಡಿ ವ್ಯವಸ್ಥೆಯಿಲ್ಲದ ಕಡೆ ಶಾಮಿಯಾನ ಕುರ್ಚಿ ವ್ಯವಸ್ಥೆ ಕಲ್ಪಿಸಲಾಗಿದ್ದು ಈ ಸಲ ಶೇ.೮೫ರ ಗುರಿಯನ್ನು ಹೊಂದಲಾಗಿದೆಂದು ತಿಳಿಸಿದರು.
ಇದೇ ವೇಳೆ ತಹಶೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ ತೆಕ್ಕಲಕೋಟೆ ಸಿಪಿಐ ಸುಂದ್ರೇಶ್ ಹೊಳೆಣ್ಣನವರ್ ಇದ್ದರು