ಮೇ 09 ಸಿರುಗುಪ್ಪ: ತಾಲ್ಲೂಕಿನ ಸಿರಿಗೇರಿ ಗ್ರಾಮದ ಬಸವನಪೇಟೆಯ ಸಾರ್ವಜನಿಕರು ಸೋಮವಾರ ಏಕಾಏಕಿ ಪೋಲೀಸ್ ಠಾಣೆಗೆ ಮಹಿಳೆಯರು ಪ್ರತಿಭಟನೆ ಮಾಡಿದರು.ಕಾರಣ ನಾವುಗಳು ೧೫೦ ಕುಟುಂಬಗಳು ಸುಮಾರು ೩೫ ವರ್ಷಗಳಿಂದ ವಾಸವಿದ್ದು,ಈಗಾಗಲೆ ಮನೆಗಳ ನಿರ್ಮಿಸಿಕೊಂಡಿದ್ದು,ಕೂಲಿನಾಲಿ ಮಾಡುತ್ತಿದ್ದೇವೆ.ಈಗ ಖಾಸಗಿ ವ್ಯಕ್ತಿಯು ಈ ೫.೮೦ ಸೆ.ಭೂಮಿಯನ್ನು ಖರೀದಿ ಮಾಡಿಕೊಂಡಿದ್ದು,ಈಗ ಆ ವ್ಯಕ್ತಿಯಿಂದ ನಮ್ಮ ಮನೆಗಳನ್ನು ತೆರವು ಮಾಡುವುದಕ್ಕೆ ಮುಂದಾಗಬಹುದು. ಈಗಾಗಿ ನಮಗೆ ದಾರಿಯೇ ಇಲ್ಲದೆ ಅನಿವಾರ್ಯವಾಗಿ ಠಾಣೆಗೆ ಬರಬೇಕಾಯಿತು.ನಮ್ಮಗಳ ಅಭದ್ರತೆಗೆ ಎಡೆಮಾಡಿಕೊಟ್ಟಿದೆ ಎಂದು ನಿವಾಸಿ ಹಳ್ಳಿ ನಾಗಪ್ಪ ಖಾರವಾಗಿ ಮಾತನಾಡಿದರು.
ನಂತರ ಎದರು ಬಸವಣ್ಣ ಹತ್ತಿರ ನಿವಾಸಿಗಳು ಕೂಡಿಕೊಂಡು ಮಂಗಳವಾರದಂದು ಬಸವನಪೇಟೆಯಲ್ಲಿ ಬೆಳ್ಳಂಬೆಳಿಗ್ಗೆ ಪ್ರತಿಭಟನೆ ಮಾಡುತ್ತೇವೆ.ಬುಧವಾರ ನಡೆಯುವ ವಿಧಾನ ಸಭಾ ಚುನಾವಣೆಗೆ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಹೇಳಿದರು.
ಸಂಬಂಧಪಟ್ಟ ಅಧಿಕಾರಿಗಳಾದ ಜಿಲ್ಲಾಧಿಕಾರಿಗಳು,ತಹಶಿಲ್ದಾರರು ಸ್ಥಳಕ್ಕೆ ಬರೋವರೆಗೂ ನಾವು ಮತದಾನ ಮಾಡುವುದಿಲ್ಲ ಎಂದು ಎಚ್ಚರಿಸಿದರು.ಈ ಸಮಸ್ಯೆಯನ್ನು ಇಲ್ಲಿಗೆ ಅಧಿಕಾರಿಗಳು ಬಗೆಹರಿಸಬೇಕು ಎಂದು ಸಾರ್ವಜನಿಕರು ತಿಳಿಸಿದರು.
ಸರಿಯಾದ ಅರ್ಜಿಯೊಂದಿಗೆ ದಾಖಲೆ ನೀಡಿ,ಸಂಬಂಧಪಟ್ಟ ಅಧಿಕಾರಗಳನ್ನು ವಿಚಾರಿಸಿ ಎಂದು ಪೋಲೀಸ್ ಸಿಬ್ಬಂದಿ ಶಿವರಾಯಪ್ಪ ತಿಳಿಸಿ ಸಾರ್ವಜನಿಕರನ್ನು ಕಳುಹಿಸಿದರು.
ಈ ಸಂದರ್ಭದಲ್ಲಿ ನಿಂಗಮ್ಮ,ದೊಡ್ಡಬಸಮ್ಮ,ಯಲ್ಲಮ್ಮ,ವಡ್ಡರು ಹುಲಿಗೆಮ್ಮ,ಗುಳೆಮ್ಮ,ನೆನಕ್ಕಿ ಗೌರಮ್ಮ,ಬಿಚ್ಚುಗತ್ತಿ ಗಂಗಮ್ಮ,ತಿಮ್ಮಕ್ಕ,ಕಜ್ಜಿ ಯಲ್ಲಮ್ಮ,ಕುಂಬಾರು ಹನುಂತರಾಯ,ಡ್ರವರ್ ಹುಲುಗಪ್ಪ,ಕೊಳ್ಳಿ ಮೂಕಯ್ಯ,ವಡ್ಡರ್ ಶೇಖರ್,ದೊಡ್ಡ ಹೋನ್ನೂರ,ಬಿಚ್ಚುಗತ್ತಿ ಮಲ್ಲಯ್ಯ,ಬಿಚ್ಚಿಗತ್ತಿ ದೊಡ್ಡಬಸವ,ಬಿ.ಸೋಮನಾಯ್ಕ್,ಕೊಳ್ಳಿ ಸೋಮೇಶ್.ನೆನಕ್ಕಿ ನಾಗರಾಜ,ಕೊಳ್ಳಿ ಗಾದಿ,ಮಾಬುಸಾಬ್, ಹುಸೇನಿ, ಮೌಲಾಲಿ ಮತ್ತಿತರರು ಇದ್ದರು