ಮೇ 09.ಸಿರುಗುಪ್ಪ ನಗರದ ವೀರಶೈವ ವಿದ್ಯಾವರ್ಧಕ ಸಂಘದ ಶ್ರೀ ವಿವೇಕಾನಂದ ಪಬ್ಲಿಕ್ ಶಾಲೆಯಲ್ಲಿ ೨೦೨೩ನೇ ಸಾಲಿನ ವಿಧಾನಸಭೆ ಚುನಾವಣೆಯ ನಿಮಿತ್ತ ಎಲ್ಲಾ ಮತಗಟ್ಟೆಗಳಿಗೆ ಚುನಾವಣಾ ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್, ವಿವಿಪ್ಯಾಡ್, ಶಾಹಿ, ಇನ್ನಿತರ ಸಾಮಗ್ರಿಗಳನ್ನು ಸಿಬ್ಬಂದಿಗಳಿಗೆ ನೀಡಿ ಆಯಾ ಮತಗಟ್ಟೆಗಳಿಗೆ ಕಳುಹಿಸಿಕೊಡಲಾಯಿತು.
ಚುನಾವಣಾಧಿಕಾರಿ ಸತೀಶ್.ಹೆಚ್.ಕೆ. ಮಾತನಾಡಿ ತಾಲೂಕಿನಲ್ಲಿ ಒಟ್ಟು ೨೧೭೧೮೧ ಮತದಾರರಿದ್ದು, ಹೆಚ್ಚುವರಿ ಮತಗಟ್ಟೆ ಸೇರಿ ೨೨೭ ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆಗೆ ಪಿಆರ್ಓ, ಎಪಿಆರ್ಓ, ಪಿ.ಓ, ಆಯಾ ಮತ್ತು ಭದ್ರತೆ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಚುನಾವಣೆಯಲ್ಲಿ ನಡೆಯುವ ಅಕ್ರಮಗಳನ್ನು ತಡೆಗಟ್ಟಲು ಸೆಕ್ಟçಲ್ ಅಧಿಕಾರಿ, ಸೂಕ್ಷಂ ವೀಕ್ಷಕರ ತಂಡಗಳಲ್ಲಿ ತಾಲೂಕು ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ.
ಸಿರುಗುಪ್ಪ ವಿಧಾನಸಭೆ ೯೨ ಕ್ಷೇತ್ರಕ್ಕೆ ಸಂಬಂದಿಸಿದಂತೆ ೪೯ ಕಂಟ್ರೋಲ್ ಯುನಿಟ್, ೪೯ ಬ್ಯಾಲೆಟ್ ಯುನಿಟ್ ಮತ್ತು ೭೧ ವಿವಿ ಪ್ಯಾಡ್ಗಳನ್ನು ಹೆಚ್ಚುವರಿಯಾಗಿ ಕಾಯ್ದಿರಿಸಲಾಗಿದೆ. ಎಲ್ಲಾ ಸಿಬ್ಬಂದಿಗಳಿಗೆ ೬೩ ರೂಟ್ ಮೂಲಕ ಸಾರಿಗೆ ಬಸ್ಸು ಮತ್ತು ಟ್ರಾಕ್ಷಿಗಳ ಮೂಲಕ ಮತಗಟ್ಟೆಗಳಿಗೆ ತಲುಪಿಸಲಾಗುತ್ತದೆ.
ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಶಾಂತಿಯುತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಆಯೋಗದ ಮಾರ್ಗದರ್ಶನದಂತೆ ಸಕಲ ಸಿದ್ದತೆಯನ್ನು ಕೈಗೊಳ್ಳಲಾಗಿದೆ. ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಿ ಪ್ರಜಾಪ್ರಭುತ್ವದ ಮೌಲ್ಯ ಕಾಪಾಡಬೇಕೆಂದು ತಿಳಿಸಿದರು.
ಇದೇ ವೇಳೆ ತಹಶೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ, ಡಿವೈಎಸ್ಪಿ ವೆಂಕಟೇಶ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಚುನಾವಣೆ ಪ್ರಕ್ರಿಯೆಗೆ ಸಾಥ್ ನೀಡಿದರು