ಸಿರುಗುಪ್ಪ : ಕಳೆದ ಮಾ.೩೧ ರಿಂದ ಏ.೧೫ರವರೆಗೆ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪಲಿತಾಂ HBಶವು ಸೋಮವಾರ ಪ್ರಕಟಗೊಂಡಿದ್ದು ತಾಲೂಕಿನ ನಡವಿ ಗ್ರಾಮದಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಎ.ವೈಶಾಲಿ ೬೨೫ಕ್ಕೆ ೬೧೭ ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನದಲ್ಲಿದ್ದರೆ, ಅದೇ ಶಾಲೆಯ ವಿದ್ಯಾರ್ಥಿನಿ ಅಂಜಲಿ.ಆರ್.ಎಮ್, ನಡವಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ, ಹರ್ಷದ್ವಲಿ, ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಅಖಿಲ್ ಕುಮಾರ್.ಎಚ್.ಎಮ್. ತಲಾ ೬೧೨ ಅಂಕಗಳನ್ನು ಪಡೆದು ಮೂವರು ದ್ವಿತಿಯ ಸ್ಥಾನವನ್ನು ಪಡೆದಿದ್ದಾರೆ.
ಈ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕುಳಿತ ಒಟ್ಟು ೩೫೪೮ ವಿದ್ಯಾರ್ಥಿಗಳ ಪೈಕಿ ೨೦೭೧ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಪಲಿತಾಂಶದಲ್ಲಿ ಶೇ.೫೮.೩೭ರ ಕಳಫೆ ಸಾಧನೆಯಾಗಿದಲ್ಲದೇ ಸರ್ಕಾರಿ ಶಾಲೆಗಳೇ ಮೇಲುಗೈ ಸಾಧಿಸಿವೆ.
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿನ ೪೯ ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು, ೩೪ ಡಿಷ್ಟಿಂಕ್ಷನ್, ಪ್ರಥಮ ದರ್ಜೆಯಲ್ಲಿ ೧೫, ವಿದ್ಯಾರ್ಥಿನಿಯರು ಪಾಸಾಗಿದ್ದು ನೂರಕ್ಕೆ ನೂರರಷ್ಟು ಪಲಿತಾಂಶ ಬಂದಿದೆ.
ಅನೇಕ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲೂ ಮಾಡದ ಸಾಧನೆಯನ್ನು ಸರ್ಕಾರಿ ವಸತಿಯುತ ಮತ್ತು ವಸತಿ ರಹಿತ ಶಾಲೆಗಳ ವಿದ್ಯಾರ್ಥಿಗಳ ಸಾಧನೆಗೆ ತಾಲೂಕಿನಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಆಗಮಿಸಿದ ಅಖಿಲ್ ಕುಮಾರ್.ಎಚ್.ಎಮ್. ಆದರ್ಶ ವಿದ್ಯಾಲಯದ ವಿದ್ಯಾರ್ಥಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಗರ್ರಪ್ಪ ಸಿಹಿ ತಿನ್ನಿಸಿ ಇದೇ ರೀತಿ ಉನ್ನತ ವ್ಯಾಸಂಗದಲ್ಲೂ ಉತ್ತಮ ಮಾಡುವಂತೆ ಹಾರೈಸಿದರು