ಮೇ 10.ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ ಕರಿಯಪ್ಪ ಅವರು ವಾರ್ಡ್ ನಂಬರ್ – 27 ರಲ್ಲಿ ಮತದಾನ ಮಾಡಿದರು.
ಬಿಜೆಪಿ ಅಭ್ಯರ್ಥಿಗೆ ಕರಿಯಪ್ಪ ಅವರು ಸಂಪ್ರದಾಯದಂತೆ ಮನೆಯ ದೇವರಿಗೆ ನಮಸ್ಕರಿಸಿ ಹಿರಿಯರ ಆಶೀರ್ವಾದ ಪಡೆದುಕೊಂಡು ನಂತರ ವಾರ್ಡ್ ನಂಬರ್ – 27 ಬೂತ್ ಸಂಖ್ಯೆ – 159 ಕೋಟೆ ಏರಿಯಾದಲ್ಲಿ ಮತದಾನ ಮಾಡಿ ನಂತರ ಮಾತನಾಡಿದ ಅವರು ಮತದಾನ ನಮ್ಮ ಹಕ್ಕು ಎಲ್ಲರು ತಪ್ಪದೇ ಮತದಾನ ಮಾಡುವಂತೆ ಕೋರಿದರು.