ಮೇ 20. ಸಿಂಧನೂರು ತಾಲೂಕದ್ಯಾಂತ ಎಗ್ಗಿಲ್ಲದೆ ಅಕ್ರಮ ಸಾರಾಯಿ ಮಾರಾಟ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕುವ ಯಾವೊಬ್ಬ ಪ್ರಾಮಾಣಿಕ ಅಧಿಕಾರಿ ,ರಾಜಕಾರಣಿ ,ಜನ ಪ್ರತಿನಿಧಿ ಇಲ್ಲದಿರುವುದು ವಿಷಾದನೀಯ , ಅಕ್ರಮ ಮದ್ಯ ಮಾರಾಟಕ್ಕೆ ಕೃಪಾ ಕಟಾಕ್ಷ ಎನ್ನುವುವಂತೆ ಬ್ರಷ್ಟ ಅಧಿಕಾರಿಗಳ ರಾಜಕಾರಣಿಗಳ ಬೆಂಬಲ ಇರುವುದು ಕಣ್ಣೆದುರಿಗೆ ಕಂಡರೂ ಕಾಣದಂತೆ ವರ್ತಿಸುತ್ತಿರುವ ನಾಲಾಯಕ್ ಅಧಿಕಾರಿ ವರ್ಗಕ್ಕೆ ದಿಕ್ಕಾರ ಎಂದು ಕರ್ನಾಟಕ ರಾಷ್ಟ್ರ ಸಮಿತಿಯಷ ನಿರುಪಾದಿ ಗೋಮರ್ಸಿ ಹೇಳಿದರು.
ಈಗಾಗಲೇ ಅಕ್ರಮ ಮದ್ಯ ಮಾರಾಟದಿಂದ ಸಾಮಾಜಿಕವಾಗಿ ಅರೋಗಿಕವಾಗಿ ಆರ್ಥಿಕವಾಗಿ, ಶೈಕ್ಷಣಿಕ ವಾಗಿ ,ದೈಹಿಕವಾಗಿ ಮಾನಸಿಕವಾಗಿ ಜನ ಸಾಮಾನ್ಯರ ಮೇಲೆ ಕುಟುಂಬ ವರ್ಗದವರ ಮೇಲೆ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಿ ಹಳ್ಳಿಗಳ ತಾಲೂಕ ಅಭಿರುದ್ದೀ ಕುಂಠಿತ ಬೆಳವಣಿಗೆ ಕಾಣಲು ಮುಖ್ಯ ಕಾರಣವಾಗಿದೆ.
ಸಿಂಧನೂರು ತಾಲೂಕಿನ ವಿವಿಧ ಸಂಘ ಸಂಸ್ಥೆಗಳು,ವೇದಿಕೆಗಳು ಮಾಡುವ ಹೋರಾಟ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗುತ್ತಿದೆ , ಅಕ್ರಮ ಮದ್ಯ ಮಾರಾಟ ವಿರುದ್ಧದ ಹೋರಾಟಗಾರರಿಗೆ ಹೆದರಿಕೆ ಬೆದರಿಕೆಗಳು ಬಂದು ಹೋರಾಟದ ಸ್ಥಿತಿ ಗತಿಗಳನ್ನು ಅರಿತು ಅವರನ್ನು ಕುಗ್ಗಿಸುವ ಕಾರ್ಯ ರಾಜಕೀಯ ಮುಖಂಡ ರಿಂದ ನಡೆಯುತ್ತಿದೆ, ಅಕ್ರಮ ಮದ್ಯ ಮಾರಾಟದಿಂದ ಕುಟುಂಬದ ಮಹಿಳೆಯರ ಮೇಲೆ ಹಲ್ಲೆಗಳು ಜಗಳ ಆಸ್ತಿ ಪಾಸ್ತಿ ಮಾರಾಟ ಒಣ ಕಿರಿಕಿರಿಗಳು ,ಕುಟುಂಬದ ಮೇಲೆ ಪ್ರಭಾವ,ಓದುವ ಮಕ್ಕಳ ಮೇಲೆ ಮಾನಸಿಕ ಒತ್ತಡ ಸೃಷ್ಟಿಯಾಗಿ ತಾಲೂಕಿನಲ್ಲಿ ಶೈಕ್ಷಣಿಕ ಪ್ರಗತಿ ಕುಂಠಿತ ಹೊಂದಿರುವುದು ಇತ್ತೀಚೆಗೆ ಬಂದ ದ್ವಿತೀಯ ವರ್ಷದ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶಗಳೇ ಉದಹರಣೆ ಅಧಿಕಾರಿಗಳ
ಕರ್ತವ್ಯ ನಿರ್ಲಕ್ಷ ,ಜನ ಪ್ರತಿನಿಧಿಗಳ ಬೇಜವಾಬ್ದಾರಿ ಆಡಳಿತವೇ ಅಕ್ರಮ ಮದ್ಯ ಮಾರಾಟಕ್ಕೆ ಮುಖ್ಯ ಕಾರಣ.
ಈಗಾಗಲೇ ಸಿಂಧನೂರು ತಾಲೂಕದ್ಯಂತ ಅಕ್ರಮ ಮದ್ಯ ಮಾರಾಟದ ಫಲವಾಗಿ ವಿವಿಧ ಹಳ್ಳಿಗಳಲ್ಲಿ ಅನೇಕ ಸಾವು ನೋವುಗಳು ಅಪಘಾತಗಳು ಆರ್ಥಿಕ ನಷ್ಟ ಆದರೂ ಇದರ ವಿರುದ್ಧ ಸಾವಿರಾರು ದೂರುಗಳು ಬಂದರು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡಿದರೂ ಅ ಪ್ರಯೋಜನ ಇಂತಹ ಘಟನೆಗಳು ,ವರದಿಗಳು ದಿನನಿತ್ಯ ಸಹಜ ಎಂಬಂತೆ ಕಾಣುವ ಜನ ಪ್ರತಿನಿಧಿಗಳು ತೀರ ಆಕ್ರೋಶ ಉಂಟಾದಾಗ ಮಾತ್ರ ಸಾವಿನ ಮನೆಗೆ ಭೇಟಿ ನೀಡಿ ಐದೋ ಹತ್ತೋ ಸಾವಿರ ನೀಡಿ ಕೈ ತೊಳೆದು ಕೊಳ್ಳುವ ವ್ಯವಸ್ಥೆ ತಾಲೂಕಿನಲ್ಲಿ ನಡೆದಿದೆ.
ಪ್ರಾಭಾವಿ ರಾಜಕಾರಣಿಗಳ ಕುಟುಂಬಸ್ಥರು ,ಬಂದು ಬಳಗದವರು ಮದ್ಯ ಮಾರಾಟಕ್ಕೆ ಯಾವುದೇ ಲೈಸೆನ್ಸ್ ಪಡೆಯದೆ ಪ್ರತಿ ಹಳ್ಳಿ ಹಳ್ಳಿಯಲ್ಲೂ ಹತ್ತರಿಂದ ಹನ್ನೆರಡು ಮದ್ಯದಂಗಡಿಗಳು ಕುಡುಕರರನ್ನು ಆಕರ್ಷಿಸುತ್ತಿವೆ
ಸಿಂಧನೂರು ತಾಲೂಕಿನ ಅಕ್ರಮ ಮದ್ಯ ಮಾರಾಟದ ವಿರುದ್ಧದ ಹೋರಾಟಕ್ಕೆ ಈಗಾಗಲೇ ಕೆ ಆರ್ ಎಸ್ ಪಕ್ಷ ನಿರಂತರ ಹೋರಾಟ ,ಜನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದು ಮದ್ಯಪಾನ ಮುಕ್ತ ಕರ್ನಾಟಕ ಮದ್ಯಪಾನ ಮುಕ್ತ ಸಿಂಧನೂರುಗಾಗಿ ಶ್ರಮಿಸುತ್ತಿದೆ ಎಂದು ನಿರುಪಾದಿ ಗೋಮರ್ಸಿ ಹೇಳಿದರು.