ಜೂನ್ 16.ಕರೋನ ಸಮಯದಲ್ಲಿ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾದಂತೆ ಮಕ್ಕಳ ಕಲಿಕೆ ಹಾಗೂ ಶೈಕ್ಷಣಿಕ ಜಾಗೃತಿ, ಕರೋನಾ ಸಮಯದಲ್ಲಿ ತೆಗೆದುಕೊಳ್ಳಬಹುದಾದ ಮುಂಜಾಗೃತಾ ಕ್ರಮ ,ವಠಾರ ಶಾಲೆಯಲ್ಲಿ ನಡೆಯುವ ಕಲಿಕೆಯ ಕುರಿತಾದ ಮಾಹಿತಿಯನ್ನು ಒಳಗೊಂಡ ಕಿರುಚಿತ್ರ ವಿದ್ಯಾಗಮ. ವಿದ್ಯಾಗಮ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದ ಕನಾ೯ಟಕದ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಶಂಕರ ದೇವರು ಹಿರೇಮಠ ಅವರ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರ್ಪಡೆಯಾಗಿದೆ ಎಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ ಮುಖ್ಯಸ್ಥರಾದ ಡಾ. ಬಿಶ್ವಾಸ ಸ್ವರೂಪರಾಯ ಚೌದರಿ ಅವರು ತಿಳಿಸಿದ್ದಾರೆ.
ಸಿಂಧನೂರು ತಾಲೂಕಿನ ಇತಿಹಾಸ ಪ್ರಸಿದ್ಧ ವಚನಕಾರಾದ ಚಿಕ್ಕಯ್ಯ ಪಂಡಿತ ವಾಸವಿದ್ದ ದೇವರಗುಡಿ ಗ್ರಾಮದ ಪಕ್ಕದಲ್ಲಿರುವ ದುಗ್ಗಮ್ಮನಗುಂಡ ಗ್ರಾಮದಲ್ಲಿ ಸರಕಾರಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶಂಕರ ದೇವರು ಹಿರೇಮಠ. ಲಾಕ್ಡೌನ್ ಸಮಯದಲ್ಲಿ ಶಾಲೆಗಳು ತಾತ್ಕಾಲಿಕವಾಗಿ ಮುಚ್ಚಿದ್ದವು. ತದನಂತರ ಶಾಲೆಗಳು ಪುನರಾರಂಭವಾದಾಗ ಪಾಲಕರು ವಿದ್ಯಾರ್ಥಿಗಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದರು. ಆ ಸಮಯದಲ್ಲಿ ಸರಕಾರವು ವಿದ್ಯಾಗಮ ಯೋಜನೆಯನ್ನು ಜಾರಿಗೊಳಿಸಿತ್ತು. ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಲ್ಲಿ ಜಾಗೃತಿ ಮೂಡಿಸಿ ಆ ಸಮಯದಲ್ಲಿ ಸಾಮಾಜಿಕ ಅಂತರ, ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಶಾಲೆಗೆ ಬರುವಂತೆ ಪ್ರೇರೇಪಣೆ ನೀಡಲು ವಿದ್ಯಾಗಮ ಕಿರುಚಿತ್ರ ಮಹತ್ವದ ಪಾತ್ರವನ್ನು ವಹಿಸಿತ್ತು.
ಸರಕಾರಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಯಿಸಿ ಕರೋನದ ವಿರುದ್ಧ ಜಾಗೃತಿ ಮೂಡಿಸಿ ವಿದ್ಯಾರ್ಥಿಗಳು ಶಾಲೆಗೆ ಬರುವಂತೆ ಪ್ರೇರಣೆ ನೀಡಿತು. ವಿದ್ಯಾಗಮ ಕಿರುಚಿತ್ರದಲ್ಲಿ ಶಂಕರ ದೇವರು ಹಿರೇಮಠ, ಶ್ರೀಶೈಲ ಅಂಬಿಗೇರ, ವಿರುಪಾಕ್ಷಪ್ಪ ಫಕೀರಪೂರ, ವೀರೇಶ ಸಾಲಿಮಠ, ಚೆನ್ನಮ್ಮ ಪಾಟೀಲ್, ಯಲ್ಲಮ್ಮ ಶಿಕ್ಷಕರು ಅಭಿನಯಿಸಿದ್ದಾರೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಶ್ರೀ ಚಿಕ್ಕಯ್ಯ ಪಂಡಿತ್ ಕಬ್ ಘಟಕದ ವಿದ್ಯಾರ್ಥಿಗಳು ಈ ಕಿರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸೆಪ್ಟೆಂಬರ್ 16 ,2020 ರಂದು ಸಿಂಧನೂರಿನ ಆದರ್ಶ ವಿದ್ಯಾಲಯದಲ್ಲಿ ಬಿಡುಗಡೆಯಾದ ಕಿರುಚಿತ್ರ 19 ನಿಮಿಷ 37 ಸೆಕೆಂಡ್ ಇದೆ. ವಠಾರ ಶಾಲೆಯಲ್ಲಿ ವಿದ್ಯಾರ್ಥಿಗಳು ಹೇಗೆ ಕಲಿಕೆ ಮಾಡಿದರು.ಶಿಕ್ಷಕರು ಹೇಗೆ ಪಾಲಕರನ್ನು ಮನವೊಲಿಸಿ ಮರಳಿ ಶಾಲೆಗೆ ಕರೆತಂದರು ಎಂದು ಈ ಕಿರುಚಿತ್ರದಲ್ಲಿ ತೋರಿಸಿದ್ದಾರೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಶಂಕರ ದೇವರ ಹೆಸರು ಸೇರ್ಪಡೆಯಾದ ವಿಷಯ ಸಂತೋಷ ವಾಗಿದೆ ಎಂದು ಅಭಿನಂದಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಾಯಾಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು, ದೇವರಗುಡಿ ಹಾಗೂ ದುಗ್ಗಮ್ಮನಗುಂಡ ಗ್ರಾಮದ ಗ್ರಾಮಸ್ಥರು, ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯದ್ಯಕ್ಷರಾದ ಸಿ.ಎನ್ ಅಶೋಕ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ರಂಗಣ್ಣ ಪಾಟೀಲ್, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಅಧ್ಯಕ್ಷರಾದ ಪಂಪಯ್ಯ ಸ್ವಾಮಿ ಸಾಲಿಮಠ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬೀರಪ್ಪ ಶಂಬೋಜಿ, ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಮೌಲಪ್ಪ ಮಾಡಶಿರವಾರ, ಸರಕಾರಿ ನೌಕರ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಹಿರೇಮಠ, ಶಿಕ್ಷಕರ ಸಂಘದ ನಿರ್ದೇಶಕರು, ಮಕ್ಕಳ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಸರಕಾರಿ ನೌಕರರ ಗೆಳೆಯರ ಬಳಗ ಅಭಿನಂದಿಸಿದ್ದಾರೆ.