ಜೂನ್ 25.ಸಿಂಧನೂರು ಜಿಲ್ಲಾ ಕೇಂದ್ರ ಸ್ಥಾಪನ ಕೇಂದ್ರ ಸಮಿತಿ ವತಿಯಿಂದ ಸಿಂಧನೂರು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಸರ್ವ ಸಂಘಟನೆಗಳ ಒಕ್ಕೂಟಗಳ ಸಭೆ ಯನ್ನೂ ಕರೆದು ಸಿಂಧನೂರು ಜಿಲ್ಲಾ ಕೇಂದ್ರವಾಗಿಸಲು ಸರ್ವಾನುಮತದಿಂದ ನಿರ್ಣಯಿಸಲಾಯಿತು.
ಈ ಸಂದರ್ಭದಲ್ಲಿ ಸಿಂಧನೂರು ತಾಲೂಕಿನ ಕನ್ನಡಪರ, ರೈತಪರ, ಮಹಿಳಾಪರ, ವಿದ್ಯಾರ್ಥಿಗಳ , ಕಾರ್ಮಿಕ ಪರ,ಶೈಕ್ಷಣಿಕ ಸಂಘಟನೆಗಳ ಮುಖಂಡರುಗಳು ಹಾಗೂ ಪದಾಧಿಕಾರಿಗಳು ಭಾಗಿಯಾಗಿ ಸಿಂಧನೂರು ಜಿಲ್ಲಾ ಕೇಂದ್ರವನ್ನಾಗಿಸಲು ಮುಂದಿನ ಹೋರಾಟದ ರೂಪರೇಷೆಗಳು ಹಾಗೂ ಸಿದ್ಧತೆಗಳು ಕುರಿತು ಚರ್ಚಿಸಲಾಯಿತು .
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಉಪಾಧ್ಯಕ್ಷರಾದ ಶಿವರಾಜ ಗೌಡ ಹಂಚಿನಾಳ ರವರು ಶೈಕ್ಷಣಿಕವಾಗಿ ಸಾಮಾಜಿಕವಾಗಿ ಸಿಂಧನೂರು ಹಿಂದುಳಿದಿದ್ದು ಹಾಗೂ ಸಿಂಧನೂರು ಸುತ್ತಮುತ್ತಲಿನ ತಾಲೂಕುಗಳಾದ ಮಸ್ಕಿ, ಸಿರಗುಪ್ಪ,ಮಾನ್ವಿ ,ಕಾರಟಗಿ, ಲಿಂಗಸುಗೂರು ಹಾಗೂ ತಾವರಗೇರಾ ಸೇರಿದಂತೆ ಈ ತಾಲೂಕುಗಳ ಸಹ ಆಡಳಿತಾತ್ಮಕ ಕಾರಣಗಳಿಂದ ತೀರ ಹಿಂದುಳಿದಿದ್ದು ಈ ನಿಟ್ಟಿನಲ್ಲಿ ತಾಲೂಕುಗಳ ಅಭಿವೃದ್ಧಿಗಾಗಿ ಸಿಂಧನೂರು ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿ ಕಲ್ಯಾಣ ಕರ್ನಾಟಕದ ಹಿಂದುಳಿದ ತಾಲೂಕುಗಳನ್ನು ಮೇಲೆತ್ತುವ ಕೆಲಸ ರಾಜ್ಯ ಸರ್ಕಾರ ಮಾಡಬೇಕೆಂದು ಒತ್ತಾಯಿಸಿದರು,
ಈ ಸಂದರ್ಭದಲ್ಲಿ ವಿರೇಶ ನೆಟಕಲ್ಲು ಮಾತನಾಡಿ ಸಿಂಧನೂರು ಹಾಗೂ ಸುತ್ತಮುತ್ತಲಿನ ತಾಲೂಕಿನ ಸರ್ವ ಸಂಘ ಸಂಸ್ಥೆಗಳು ಒಗ್ಗೂಡಿ ಹಾಗೂ ರಾಜಕೀಯ ಜನ ಪ್ರತಿನಿಧಿಗಳು ಸಿಂಧನೂರು ಜಿಲ್ಲಾ ಕೇಂದ್ರವಾಗಿ ನಿರ್ಮಿಸಲು ಕೈಗೊಡಿಸಬೇಕು ಎಂದು ತಿಳಿಸಿದರು.
ತಾಲೂಕಿನ ವಿವಿಧ ಸಂಘಟನೆಗಳು ಮುಖಂಡರಾದ ಈ ಸಂದರ್ಭದಲ್ಲಿ ನರೇಂದ್ರನಾಥ್, ದೇವೇಂದ್ರ ಗೌಡ ,ನಿರುಪಾದಿ ಕೆ ಗೋಮರ್ಶಿ ಅವಿನಾಶ್ ದೇಸಾಯಿ ,ಲಕ್ಷ್ಮಣ ಬೋವಿ ,ದವಲ ಸಾಬ್ ದೊಡ್ಮನಿ ಉಮೇಶ್ ಗೌಡ, ಮಲ್ಲಿಕಾರ್ಜುನ ಸ್ವಾಮಿ ,ಇಂದ್ರಮ್ಮ ಶಾಂತಗೌಡರ್, ವೀರೇಶ್ ಅಗ್ನಿ, ಚನ್ನಪ್ಪ ಪಂಪಾಪತಿ ಸೇರಿದಂತೆ ಇನ್ನಿತರರು ಉಪಸ್ಥಿತಿಯಲ್ಲಿದ್ದರು.