ಸಿಂಧನೂರ ಜೂನ್ 30.ವನಸಿರಿ ಫೌಂಡೇಶನ್ ಸುಮಾರು 9ವರ್ಷಗಳಿಂದ ತನ್ನ ಸಣ್ಣದಾದ ಹೆಜ್ಜೆಗಳನ್ನು ಇಡುತ್ತಾ ಪರಿಸರ ರಕ್ಷಣೆ, ಸಸಿಗಳನ್ನು ನೆಡುವುದು,ಶಾಲಾ ಮಕ್ಕಳಿಗೆ ಪರಿಸರ ಜಾಗೃತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು,ಗಿಡಮರಗಳನ್ನು ರಕ್ಷಣೆ ಮಾಡುವುದು, ಬೇಸಿಗೆಯಲ್ಲಿ ಆಹಾರ ನೀರಿನ ಅರವಟ್ಟಿಗೆಗಳನ್ನು ನಿರ್ಮಿಸಿ ಪ್ರಾಣಿ ಪಕ್ಷಿಗಳಿಗೆ ಅರವಟ್ಟಿಗೆಗಳನ್ನು ನಿರ್ಮಿಸುವುದು,ಪರಿಸರ ಜಾಥಾ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು,ಶಿಕ್ಷಕರೊಡನೆ ಪರಿಸರ ಜಾಗೃತಿ ಬಗ್ಗೆ ಪ್ರಬಂಧ ಸ್ಪರ್ಧೆಯಲ್ಲಿ ಮಕ್ಕಳನ್ನು ಭಾಗವಹಿಸುವಂತೆ ಮಾಡುವುದು,ಶಾಲೆ,ಕಾಲೇಜು, ದೇವಸ್ಥಾನ, ಮಸೀದಿ,ಚರ್ಚುಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವುದು,ಜೊತೆಗೆ ಇತ್ತೀಚೆಗೆ ಕಡಿದು ಹಾಕಿದ ಆಲದ ಮರಕ್ಕೆ ಮರುಜೀವ ನೀಡಲಾಗಿದ್ದು ಇದನ್ನು ವೀಕ್ಷಿಸಲು ಕೊಪ್ಪಳದ ಗವಿಶಿದ್ದೇಶ್ವರ ಮಹಾಸ್ವಾಮಿಗಳು, ಜಿಲ್ಲೆಯ ಪರಮ ಪೂಜ್ಯರುಗಳು, ರಾಜಕೀಯ ಮುಖಂಡರು,ಅಧಿಕಾರಿ ವರ್ಗದವರು,ಸಾಹಿತಿಗಳು,ಪರಿಸರ ಪ್ರೇಮಿಗಳು,ಶಿಕ್ಷಣ ಪ್ರೇಮಿಗಳು,ಸಂಘ ಸಂಸ್ಥೆಗಳ ಮುಖಂಡರುಗಳು ಭೇಟಿ ನೀಡಿ ವನಸಿರಿ ಫೌಂಡೇಶನ್ ಪರಿಸರ ಜಾಗೃತಿಗೆ ಕೈಗೊಂಡಿರುವುದರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಪರಿಸರ ಜಾಗೃತಿಗಾಗಿ ವನಸಿರಿ ಫೌಂಡೇಶನ್ ಜೊತೆಗೆ ಕೈಜೋಡಿಸಿರುವುದು,ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಮ್ಮ ಕಾರ್ಯಗಳನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ನೀಡಿ ಗೌರವಿಸಿದೆ.ವನಸಿರಿ ಫೌಂಡೇಶನ್ ಇಂದು ಹೆಮ್ಮರವಾಗಿ ಬೆಳೆಯಲು ಮಾಧ್ಯಮ ಮಿತ್ರರೇ ಕಾರಣ.
ಫೌಂಡೇಶನ್ ಇಷ್ಟು ಎತ್ತರವಾಗಿ ಬೆಳೆಯಲು ಎಲ್ಲಾ ಮಾದ್ಯಮ ಮಿತ್ರರ ಸಹಕಾರ,ಪ್ರೋತ್ಸಾಹವೇ ಕಾರಣ ಇಂತಹ ಒಂದು ಮಾದ್ಯಮ ಕ್ಷೇತ್ರದಿಂದ ಸಮಾಜದ ಅಂಕುಡೊಂಕುಗಳನ್ನು ತಿದ್ದಿ,ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯಗಳನ್ನು ಕೊಡಿಸಲು ಸಹಕಾರಿಗಳಾಗಿ,ಶಿಕ್ಷಣ ಕ್ಷೇತ್ರ, ಪರಿಸರ ಕ್ಷೇತ್ರ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಅತ್ಯಂತ ಹೆಚ್ಚು ಸಾಧನೆ ಮಾಡಲು ಮಾದ್ಯಮ ಕ್ಷೇತ್ರ ಅತ್ಯಂತ ಹೆಚ್ಚು ಮುಖ್ಯವಾಗಿದೆ.ಪರಿಸರ ಕ್ಷೇತ್ರದಲ್ಲಿ ನಮ್ಮ ವನಸಿರಿ ಫೌಂಡೇಶನ್ ಗೆ ಸದಾಕಾಲ ಬೆಂಬಲವಾಗಿ ನಿಂತ ಎಲ್ಲ ಪತ್ರಿಕಾ ಹಾಗೂ ಮಾಧ್ಯಮ ಮಿತ್ರರಿಗೆ ವಿಶ್ವ ಮಾಧ್ಯಮ ದಿನಾಚರಣೆಯ ಶುಭಾಶಯಗಳು ಎಂದು ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಅವರು ತಮ್ಮ ವನಸಿರಿ ಫೌಂಡೇಶನ್ ಕಾರ್ಯಾಲಯದಲ್ಲಿ ತಿಳಿಸಿದರು.