ಸಿಂಧನೂರಿನ ಜುಲೈ.03.ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಇಂದು ಪ್ರಾದೇಶಿಕ ಅರಣ್ಯ ವಲಯ ಹಾಗೂ ವನಸಿರಿ ಫೌಂಡೇಶನ್ ಮತ್ತು ಸನ್ ರೈಸ್ ಕಾಲೇಜು ವತಿಯಿಂದ ಹಡಪದ ಅಪ್ಪಣ್ಣ ಜಯಂತಿಯ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟಕರಾಗಿ ಸಿಂಧನೂರು ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷರಾದ ಡಿ.ಎಚ್ ಕಂಬಳಿ ಸರ್ ಅವರು ಸಸಿ ನೆಟ್ಟು ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿ ಕಾಯಕಯೋಗಿ ಬಸವಣ್ಣನವರ ಕಲ್ಯಾಣದ 770 ಗಣಾಂಗಗಳ ವಚನಕಾರರಲ್ಲಿ ಹಡಪದ ಹಪ್ಪಣ್ಣ ಕೂಡ ಒಬ್ಬರು.ಬಸವಣ್ಣನವರ ಕಲ್ಯಾಣದಲ್ಲಿ ಹಡಪದ ಅಪ್ಪಣ್ಣ ಅವರು ಶ್ರಮ ಅಪಾರವಾದದ್ದು ಮತ್ತು ಬಸವಣ್ಣನವರ ಆಪ್ತ ಸಹಾಯಕರಾಗಿದ್ದರು.ಇಂತಹ ಮಹಾನ್ ವಚನಕಾರರ ಜಯಂತಿಯ ಅಂಗವಾಗಿ ಅಮರೇಗೌಡ ಮಲ್ಲಾಪೂರ ಅವರು ವನಸಿರಿ ಎಂದು ಹೆಸರಿಟ್ಟುಕೊಂಡಿದ್ದಾರೆ ವನಸಿರಿ ಎಂದರೆ ಸಂಪತ್ತು.ವನದ ಸಂಪತ್ತು ಹೆಚ್ಚಿಸಿದರೆ ಮನುಷ್ಯರ ಜೀವಸಂಪತ್ತು ಹೆಚ್ಚಿಸಿದಂತೆ,ಜೀವಸಂಕುಲ ಉಳಿದರೆ ನಾವುಗಳೆಲ್ಲರೂ ಉಳಿಯಲು ಸಾದ್ಯ.ಆ ನಿಟ್ಟಿನಲ್ಲಿ ಪರಿಸರ ಮಾಲಿನ್ಯವಾಗುವ ಸಂದರ್ಭದಲ್ಲಿ ಪರಿಸರ ರಕ್ಷಣೆಗಾಗಿ ಇಂತಹ ದೊಡ್ಡ ಆಶಾದಾಯಕವಾಗಿರುವ ಕಾರ್ಯಕ್ರಮ ಹಮ್ಮಿಕೊಂಡು ನನ್ನನ್ನು ಈ ಕಾರ್ಯಕ್ರಮಕ್ಕೆ ಸ್ವಾಗತಿಸಿದ ವನಸಿರಿ ಫೌಂಡೇಶನ್ ಗೆ ದನ್ಯವಾದಗಳು ತಿಳಿಸಿದರು.
ನಂತರ ಮಾನಾಡಿದ ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಮನಿಷಾ.ಕಿರ್ಲೋಸ್ಕರ್ ಮಾತನಾಡಿ ಈ ದಿನದ ವಿಶೇಷತೆ ಅಂದರೆ ಗುರು ಪೌರ್ಣಿಮೆ,ಹಡಪದ ಅಪ್ಪಣ್ಣ ಜಯಂತಿ ಹಾಗೂ ವನಮಹೋತ್ಸವ ಕಾರ್ಯಕ್ರಮ ಇದು ಒಂದು ತ್ರಿವೇಣಿ ಸಂಗಮವಾಗಿದೆ.ಈ ತ್ರಿವೇಣಿ ಸಂಗಮಕ್ಕೆ ತನ್ನದೇ ಆದ ಪಾವಿತ್ರ್ಯೆತೆ ಇದೆ.ಇಂತಹ ದಿನದಂದು ನಾವು ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.ಹಡಪದ ಅಪ್ಪಣ್ಣನವರ ಬಗ್ಗೆ ಹಲವಾರು ವಿಚಾರಧಾರೆಗಳಿವೆ ಹಡುಪದ ಅಪ್ಪಣ್ಣ ಅವರು ಬಸವಣ್ಣನವರ ಬಲಗೈ ಬಂಟರಾಗಿದ್ದರು ಆದರೆ ನಾವು ಯಾರ ಬಂಟರಾಗಬೇಕು,ಈ ಸಮಾಜದಲ್ಲಿ ನಮ್ಮ ಜವಾಬ್ದಾರಿ ಏನು ಅದನ್ನು ನಾವು ಅರಿತುಕೊಳ್ಳಬೇಕು,ಹಾಗಿದ್ದರೆ ವನಸಿರಿ ಫೌಂಡೇಶನ್ ನಂತಹ ಸಂಸ್ಥೆಗಳು ಪರಿಸರ ರಕ್ಷಣೆಗೆ ನಿಂತಿರುವುದು ತುಂಬಾ ಒಳ್ಳೆಯದು.ವೃಕ್ಷೋ ರಕ್ಷ ರಕ್ಷಿತಃ ಯಾವ ವೃಕ್ಷವನ್ನು ನಾವು ರಕ್ಷಿಸುತ್ತೇವೆಯೋ ಆ ವೃಕ್ಷ ನಮ್ಮನ್ನು ಕೊನೆಯ ಹಂತದವರೆಗೂ ರಕ್ಷಿಸುತ್ತದೆ.ಅದನ್ನು ಬಿಟ್ಟು ನಾವು ರಕ್ಷಿಸಿಕೊಳ್ಳಲಿಕ್ಕೆ ಆಗುವುದಿಲ್ಲ.ಅವರಿಗೆ ಸಸಿಗಳ ರಕ್ಷಣೆ ಎಷ್ಟು ಜವಾಬ್ದಾರಿಗಳಿವೆಯೋ ಅಷ್ಟೇ ಜವಾಬ್ದಾರಿ ನಮಗೂ ಇದೆ. ಪ್ರತಿಯೊಬ್ಬರೂ ವನಸಿರಿ ಫೌಂಡೇಶನ್ ನಂತಹ ಸಂಸ್ಥೆಗಳಿಗೆ ಸಹಕಾರ ನೀಡಬೇಕು.ನಾವುಗಳೆಲ್ಲರೂ ಸೇರಿ ಒಂದು ಸುಂದರ ನಿಸರ್ಗವನ್ನ ಪರಿಸರವನ್ನು ಹಸಿರುಕರಣವಾಗಿ ನಿರ್ಮಿಸೋ ಕಾರ್ಯಕ್ಕೆ ವನಸಿರಿ ಫೌಂಡೇಶನ್ ಜೊತೆಗೆ ಕೈಜೋಡಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಡಿ.ಎಚ್. ಕಂಬಳಿ,ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ವನಸಿರಿ ಅಮರೇಗೌಡ ಮಲ್ಲಾಪೂರ, ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿಗಳಾದ ಅರುಣಾ, ಮುನಿಸ್ವಾಮಿ,ಲಿಂಗಾದರ ಯುವ ಮುಖಂಡರು,ವನಸಿರಿ ಫೌಂಡೇಶನ್ ರಾಜ್ಯ ಸಹ ಕಾರ್ಯದರ್ಶಿ ರಂಜಾನ್ ಸಾಬ್ ಲೋಹಾರ್,ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ಹಾಗೂ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಮನಿಷಾ.ಕಿರ್ಲೋಸ್ಕರ್ ಉಪನ್ಯಾಸಕರಾದ ಕೆ.ಬಿ.ಹವಾಲ್ದಾರ,ಕೃಷ್ಣ, ಹನಮಂತಪ್ಪ ಹಾಗು ವಿದ್ಯಾರ್ಥಿಗಳು ಹಾಗೂ ಸನ್ ರೈಸ್ ಕಾಲೇಜು ಪ್ರಾಂಶುಪಾಲರು,ಶಿಕ್ಷಕರು, ವಿದ್ಯಾರ್ಥಿಗಳು ಭಾಗಿಯಾಗಿದ್ದರು.