ಸಿಂಧನೂರು ಜುಲೈ 8. ಬಿಸಿಲುನಾಡು ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಅಧಿಕ ಸಂಖ್ಯೆಯಲ್ಲಿ ವಾಹನ ಮತ್ತು ಕುರಿ ಕಳ್ಳತನ ವಾಗುತ್ತಿತ್ತು ಇದರ ಬೆನ್ನಲ್ಲೇ ಹಣ ಕಳ್ಳತನ ಮತ್ತು ಕುರಿ ಕಳ್ಳರನ್ನು ಪತ್ತೆ ಮಾಡುವ ಕುರಿತು ವೆಂಕಟಪ್ಪ ನಾಯಕ ಡಿ.ಎಸ್.ಪಿ ಸಿಂಧನೂರ್ ಅವರ ಮಾರ್ಗದರ್ಶನದಲ್ಲಿ ದುರ್ಗಪ್ಪ ಪಿ.ಐ ನಗರ ಪೊಲೀಸ್ ಠಾಣೆ ಸಿಂಧನೂರು ಅವರ ನೇತೃತ್ವದಲ್ಲಿ ಅಧಿಕಾರಿಗಳಾದ ಬೆಟ್ಟಯ್ಯ ಪಿ ಎಸ್ ಐ ಸಿಬ್ಬಂದಿಯವರಾದ ಸಂಗನಗೌಡ ಆದಯ್ಯ ಶರಣರೆಡ್ಡಿ ಸಿದ್ದಪ್ಪ ಕಲೀಲ್ ಪಾಶ ವಿಜಯ್ ಕುಮಾರ್ ಹಜರತ್ ಅಲಿ ವೀರಭದ್ರಪ್ಪ ಅನಿಲ್ ಕುಮಾರ್ ಭಾಷಾ ನಾಯಕ್ ಅಜೀಮ್ ಪಾಷಾ ಇವರನ್ನು ಒಳಗೊಂಡು ವಿಶೇಷ ತಂಡವನ್ನು ರಚಿಸಲಾಗಿತ್ತು ಈ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರು ಹಗಲಿರುಳು ಶ್ರಮಿಸಿ ವಾಹನ ಕಳ್ಳತನ ಮತ್ತು ಕುರಿ ಕಳ್ಳತನ ಮಾಡುತ್ತಿದ್ದ ಮಲ್ಲಿಕಾರ್ಜುನ್ ಸುರೇಶ್ ಭೀಮೇಶ್ ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಒಬ್ಬ ಬಾಲಕನನ್ನು ಬಂಧಿಸಿದ್ದಾರೆ.
8.7.2023 ರಂದು ಆರೋಪಿತರನ್ನು ದಸ್ತಗಿರಿ ಮಾಡಿ ವಿಚಾರಣೆ ಮಾಡಿದಾಗ ಸಿಂಧನೂರು ನಗರ ಆದೋನಿ ತಾವರಗೇರಿ ಪಟ್ಟಣಗಳಲ್ಲಿ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು ಅವರಿಂದ ನಗದು ಹಣ ಎಪ್ಪತ್ತು ಸಾವಿರ ರೂಪಾಯಿ ಎರಡು ಬುಲೆರೋ ಪಿಕಪ್ ಎರಡು ಮೋಟರ್ ಸೈಕಲ್ ಗಳನ್ನು ಜಪ್ತಿ ಮಾಡಿಕೊಂಡು ಅವುಗಳ ಮೌಲ್ಯ ರೂಪ 14 ಲಕ್ಷ 70000 ಆಗುತ್ತದೆ, ಒಟ್ಟು ಎರಡು ಪ್ರಕರಣಗಳನ್ನು ಬೇದಿಸಲಾಗಿದೆ ಸದರಿ ಪ್ರಕರಣಗಳ ಪತ್ತೆ ಕಾರ್ಯವನ್ನು ಶ್ರೀ ನಿಖಿಲ್ ಬಿ ಎಸ್.ಪಿ ರಾಯಚೂರ್ ಮತ್ತು ಡಾ. ಶಿವಕುಮಾರ್ ಹೆಚ್ಚುವರಿ ಎಸ್.ಪಿ ರಾಯಚೂರು ಇವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.