ಅಗಸ್ಟ್ 12. ಸಿಂಧನೂರಿನ ಶ್ರೀ ಆದಿತ್ಯ ಪದವಿ ಪೂರ್ವ ಕಾಲೇಜಿನಲ್ಲಿ ಕದಂಬ KAS ಅಕಾಡಮಿ ಹಮ್ಮಿಕೊಂಡ ಸ್ಪರ್ಧಾತ್ಮಕ ಪರೀಕ್ಷೆಗಳ ಬಹುಮಾನ ವಿತರಣೆ ಹಾಗೂ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಹನುಮಂತಪ್ಪ.ಎಂ ಸಹಾಯಕ ಪ್ರಾಧ್ಯಾಪಕರು ಸ್ಪರ್ಧಾರ್ಥಿಗಳು ತಮ್ಮ ಬದುಕಿನ ಬವಣೆಯನ್ನು ತೀರಿಸಲು ಓದುವುದು ಅಗತ್ಯವಿದೆ,ಯುವ ಜನರು ಗ್ರಂಥಾಲಯಗಳಿಗೆ ಪ್ರವೇಶ ಮಾಡಬೇಕು ಹೆಚ್ಚಿನ ಜ್ಞಾನ ಸಂಪಾದಿಸಿ ಉದ್ಯೋಗ ಪಡೆದುಕೊಂಡು ತಂದೆ ತಾಯಿಗಳ ಗೌರವ ಹೆಚ್ಚಿಸಬೇಕು ಹಾಗೂ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬೇಕು.ಸ್ಪರ್ಧಾರ್ಥಿಗಳು ಯಾರಿಗಾದರೂ ಮೋಸ ಮಾಡಿದರೂ ಪರವಾಗಿಲ್ಲ ಆದರೆ ತಂದೆ ತಾಯಿಗಳಿಗೆ ಮೋಸ ಮಾಡಬಾರದು ಎಂದು ತಮ್ಮ ಉದ್ಘಾಟನಾ ನುಡಿಯಲ್ಲಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಸಾಧಕ ಶ್ರೀ ಪ್ರಶಸ್ತಿ ವಿಜೇತರು ಮತ್ತು ವಿಶೇಷ ಸನ್ಮಾನಿತರಾದ ಡಾ. ಹುಸೇನಪ್ಪ ಅಮರಾಪುರ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಓದಿನ ಹವ್ಯಾಸ ಹೆಚ್ಚಿಸಿ ಕೊಳ್ಳಬೇಕು,ಸತತವಾದ ಪ್ರಯತ್ನದ ಫಲದಿಂದ ಯಶಸ್ಸು ಪಡೆಯಲು ಸಾಧ್ಯವಿದೆ, ಸಾಧನೆ ಎನ್ನುವುದು ಸೋಮಾರಿಯ ಸ್ವತ್ತಲ್ಲ ಅದು ಸಾಧಕನ ಸ್ವತ್ತ.ನಮ್ಮ ಘರ್ಜನೆ ಪ್ರತಿಧ್ವನಿಸಲು ಶಿಕ್ಷಣದ ಹಾಲು ಕುಡಿಯುತ್ತಿರಬೇಕು ಆಗ ಮಾತ್ರ ಸಮಾಜದಲ್ಲಿ ನಮ್ಮ ಸ್ಥಾನವನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವೆಂದು ಸ್ಪರ್ಧಾರ್ಥಿಗಳಿಗೆ ತಿಳಿಸಿದರು,ಕಾರ್ಯಕ್ರಮದಲ್ಲಿ ಸ್ಪರ್ಧಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕದಂಬ KAS ಅಕಾಡೆಮಿ ಪ್ರಧಾನ ನಿರ್ದೇಶಕರಾದ ಶಂಕರ್ ವಾಲಿಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ರಮೇಶ ಹಲಗಿ ಪ್ರಾಸ್ತಾವಿಕ ನುಡಿಗಳಾಡಿದರು ತಾಯಪ್ಪ ತಿಡಿಗೋಳ ನಿರೂಪಿಸಿದರು ಶರಣಕುಮಾರ ಹಲಗಿ ,ಮಾರುತಿ ಸೋಮಲಾಪುರ, ಶಿವರಾಜ ಜಿ. ಯು.ಎಸ್. ನಾಯಕ್ ಗೋನವಾರ ,ಜಡಿಸ್ಪಾಮಿ ಗುಡುದೂರು ಉಪಸ್ಥಿತರಿದ್ದರು, ಹಾಗೂ ನೂರಾರು ಸ್ಪರ್ಧಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.