ಸಿಂಧನೂರು ಆಗಸ್ಟ್ 19. ನಗರದ ಸಿಂಧನೂರಿನ ಸರಕಾರಿ ಪದವಿ ಮಹಾವಿದ್ಯಾಲಯ ಮತ್ತು ವೀರಲೋಕ ಪ್ರಕಾಶನ ಬೆಂಗಳೂರು ಅವರ ಸಂಯುಕ್ತಾಶ್ರದಲ್ಲಿ ದೇಸಿ ಜಗಲಿ ಕಥಾ ಕಮ್ಮಟ ಎರಡು ದಿನಗಳ ಕಮ್ಮಟವನ್ನು ಕಥೆಯನ್ನು ಓದುವುದರ ಮೂಲಕ ಉದ್ಘಾಟಿಸಿ ಮಾತಾನಾಡಿದ ಕಂ ವಿ ಯವರು ಸಾಹಿತ್ಯದ ವಿವಿಧ ಪ್ರಾಕರಗಳಲ್ಲಿ ದೇಸಿ ಕಥೆಗಳು ಸಹೃದಯರ ಮನಸ್ಸು ಗೆದ್ದಿದೆ.ಆದರೆ ನಗರದ ಜೀವನ ಆಧಾರಿಸಿ ಬಂದ ಕಥೆಗಳು ಸಹೃದಯರ ಗಮನ ಸೆಳೆಯಲಿಲ್ಲ ಇದಕ್ಕೆ ಕಾರಣ ಗ್ರಾಮೀಣ ಬದುಕಿನ ನೈಜ ಅನುಭವಗಳನ್ನು ಕಟ್ಟಿಕೊಡುತ್ತಾ, ಅಲ್ಲಿನ ಅಸಹಾಯಕತೆ, ನೋವು ಅನ್ಯಾಯ ಅಧರ್ಮ ದೌರ್ಜನ್ಯ, ಗಳನ್ನು ಕುರಿತು ಮಿಡಿಯುವ ಕಥೆಗಳಿಗೆ ಸಮಾಜದಲ್ಲಿ ಬೆಲೆ ಇದೆ ಅದು ಕೊನೆಯವರಿಗೂ ಮುಂದಿನ ತಲೆಮಾರಿಗೆ ಕನ್ನಡಿಯಾಗಿರುತ್ತೆದ ಈ ಮೂಲಕ ಕತೆಗಳು ಸಮಾಜದ ಕಣ್ಣಾಗುಬೇಕೇ ಹೊರತು ಕನ್ನಡಿ ಆಗಬಾರದು.ಎಂದರು.
ಯಾವುದೇ ಕಾಲಘಟ್ಟದಲ್ಲಿ ಬಂದಿರುವ ಕತೆಯಾಗಿರಲಿ ಅದರಲ್ಲಿ ಅಂತಕರಣ ಮಿಡಿಯುವ ಜಿವಂತೆಕೆ ಇರುಬೇಕು .ಜಾಗತಿಕ ಲೋಕಕ್ಕೆ ಕತೆಯ ಮಾದ್ಯಮ ಸಾಹಿತ್ಯ ತಿವೃವಾಗಿ ಬೆಳೆದಿದೆ.ಆದರೆ ಇಂದು ಬಹುತ್ವದಿಂದ ಕೂಡಿದ ಭಾರತಕ್ಕೆ ಏಕಸಂಹಿತೆ ಜಾರಿಗೆ ಗೊಳಿಸಬೇಕು ಅಂತ ಹೊರಟಿರುವ ಸರ್ಕಾರದ ನಡೆ ನಮ್ಮ ವೈವಿಧ್ಯಮಯ ಸಂಸ್ಕೃತಿಗೆ ಪೂರ್ಣ ವಿರಾಮ ನಿಡುತ್ತದೆ. ಎಂದು ವಿಷಾದ ವ್ಯಕ್ತಪಡಿಸಿದರು.
ಯುವ ತಲೆಮಾರಿನ ಕೆಥೆಗಾರರು ತಮ್ಮ ಓದುವಿನ ವಿಸ್ತಾರ ಮಾಡಿಕೊಳ್ಳಲು ,ಓದುವದರವಜೋತೆಗೆ ಬರೆವಣಿಗೆಯ ಕೌಶಲಗಳನ್ನು ಬೇಳೆಸಿಕೊಳ್ಳಲು ಸಿದ್ದರು ಇರುಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಬದಲ್ಲಿ ವಿರುನಗೌಡ ಗುಮೆಗೇರಿ, ನರಸಿಂಹಪ್ಪ ರಾಮತ್ನಾಳ,ಕೆ.ಖಾದರಭಾಷ ವೇದಿಕೆಯಲ್ಲಿ ಇದ್ದರು.ಯರಿಯಪ್ಒ ಬೆಳಗುರ್ಕಿ ಪ್ರಾಸ್ತಾವಿಕ ನುಡಿದರು.ಡಾ.ಬಸವರಾಜ ನಾಯಕ ನಿರೂಪಿಸಿದರು.ಶ್ರೀದೇವಿ ಸಂಗಡಿಗರು ಪ್ರಾರ್ಥಿಸಿದರು.